ಹಾವೇರಿ: ಜೂನ್ 01: ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಸ್ಥಳೀಯ ನಗರಸಭೆ ಆವರಣದಲ್ಲಿ ಆಯೋಜಿಸಲಾದ ಆರೋಗ್ಯ ತಪಾಸಣಾ ಶಿಬಿರಕ್ಕೆ ಶಾಸಕರಾದ ನೆಹರು ಓಲೇಕಾರ ಅವರು "ಬನ್ನಿ ಸಹಿ ಹಾಕೋಣ ತಂಬಾಕು ಮುಕ್ತ ಸಮಾಜಕ್ಕೆ" ಎಂಬ ನಾಮಫಲಕ್ಕೆ ಸಹಿ ಹಾಕುವ ಮೂಲಕ ಚಾಲನೆ ನೀಡಿದರು.
ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ವಾಹನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಾನಂದ ಅವರು ಚಾಲನೆ ನೀಡಿದರು.
ಜಿಲ್ಲಾ ಸವರ್ೇಕ್ಷಣಾಧಿಕಾರಿ ಡಾ.ಜಗೀಶ ಪಾಟೀಲ್, ಡಾ.ಸಂತೋಷ ದಡ್ಡಿ, ದಾದಾಪೀರ ಹುಲಿಕಟ್ಟಿ, ಡಾ.ಆಸಿಪ್, ಶ್ರೀಕಾಂತ ಪಾಟೀಲ, ಡಾ.ಸಂತೋ ಹಾಲುಂಡಿ, ಮಹಾಂತೇಶ ಪುಟ್ಟಣ್ಣನಗೌಡ್ರ, ವಸಂತಕುಮಾರ, ಮಹೇಶ ಕುಮ್ಮೂರ ಇತರರು ಉಪಸ್ಥಿತರಿದ್ದರು.