ಗದಗ 19: ಹನಿ ನೀರಾವರಿ ಯೋಜನೆಯಡಿ ಪೈಪ್ ಖರೀದಿಗಾಗಿ ರೈತರಿಗೆ ನೀಡುವ ಸಬ್ಸಿಡಿ ಹಣ ದುರುಪಯೋಗವಾಗದಂತೆ ಅಧಿಕಾರಿಗಳು ಗಮನ ಹರಿಸಬೇಕೆಂದು ಗದಗ ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ ತಿಳಿಸಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕನರ್ಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಗಾರು ಬೆಳೆ ಹಾನಿಯ ಕುರಿತು ಕೇಂದ್ರ ತಂಡ ರೋಣ ತಾಲೂಕಿಗೆ ಭೇಟಿ ನೀಡಿದ್ದು ಒಟ್ಟು ರೂ. 12845.85 ಲಕ್ಷ ಇನ್ಪುಟ್ ಸಬ್ಸಿಡಿ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಎಂದು ಕೃಷಿ ಇಲಾಖೆಯ ಉಪನಿದರ್ೇಶಕ ಸಹದೇವ ಯರಗೊಪ್ಪ ಸಭೆಗೆ ತಿಳಿಸಿದರು.
ಶಾಲೆ ಬಿಟ್ಟ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು ಪಟ್ಟಿ ತಯಾರಿಸಲಾಗುತ್ತಿದೆ. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಅಂತಹವರಿಗೆ ಸಮಗ್ರ ಶಿಕ್ಷಣ ಅಭಿಯಾನದಲ್ಲಿ 2 ತಿಂಗಳು ಬ್ರಿಜ್ ಕೋರ್ಸ ತರಬೇತಿ ನೀಡಲಾಗುತ್ತದೆ. ಇಲಾಖೆಯ ಸುತ್ತೋಲೆಯನ್ವಯ ಶಾಲೆಗೆ ಯಾವಾಗಲಾದರೂ ದಾಖಲು ಮಾಡಬಹುದಾಗಿದೆ. ಬ್ರಿಜ್ ಕೋರ್ಸ ಪರೀಕ್ಷೆ ಹಾಗೂ ಹಾಜರಾತಿ ಆಧಾರದ ಮೇಲೆ ಅರ್ಹತೆಯನ್ನು ಪರೀಕ್ಷಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದು. ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಕರ ನೇಮಕ ಕುರಿತು 96 ಅಭ್ಯಥರ್ಿಗಳು ನೇಮಕಾತಿಯಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಜಿ.ಎಲ್. ಬಾರಾಟಕ್ಕೆ ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ನವೆಂಬರ್ ಅಂತ್ಯಕ್ಕೆ ಎಚ್.1 ಎನ್ 1 ಶಂಕಿತ 23 ಪ್ರಕರಣಗಳು ಪತ್ತಯಾಗಿದ್ದು ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಶಂಕಿತ ಮತ್ತು ಖಚಿತ ಪ್ರಕರಣಗಳಿಗೆ ಚಿಕಿತ್ಸೆಗೆ ಬೇಕಾಗಿರುವ ಔಷಧಿಗಳ ದಾಸ್ತಾನು ಇದೆ. ಜಿಲ್ಲಾ ಆಸ್ಪತ್ರಯೆಲ್ಲಿ ಇದಕ್ಕಾಗಿ ಪ್ರತ್ಯೇಕ ವಾರ್ಡ ವ್ಯವಸ್ಥೆ ಮಾಡಲಾಗಿದೆ. ಈ ತಿಂಗಳಲ್ಲಿ ಎಚ್ 1 ಎನ್ 1 ಕುರಿತು ಪ್ರಕರಣ ಕಂಡು ಬಂದಿರುವುದಿಲ್ಲ ಎಂದು ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ ಸಭೆಗೆ ತಿಳಿಸಿದರು.
ಜಿಲ್ಲೆಯ ತಾಲೂಕಿಗೊಂದೊಂದು ಗುಣಮಟ್ಟದ ಆಹಾರ ಪೂರೈಕೆಗಾಗಿ ಎಮ್ ಎಸ್ ಪಿ ಟಿ ಸಿ ಘಟಕಗಳನ್ನು ಸ್ಥಾಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೇಶಕರು ಪ್ರಸ್ತಾವನೆ ತಯಾರಿಸಿ ಸಲ್ಲಿಸಬೇಕೆಂದು ಜಿ.ಪಂ. ಅಧ್ಯಕ್ಷರು ತಿಳಿಸಿದರು. ಪೂರಕ ಪೌಷ್ಟಿಕ ಆಹಾರ ಸಾಮಗ್ರಿ ಸರಬರಾಜು ಮಾಡುವಾಗ ಮೇಲ್ವಿಚಾರಕರು ಆಹಾರ ಗುಣಮಟ್ಟ ಪರಿಶೀಲನೆ ನಂತರ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೇಶಕ ರಾಮಕೃಷ್ಣ ಪಡಗಣ್ಣವರ ಸಭೆಗೆ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ 7203 ಮಿನಿ ಕಿಟ್ಗಳು ಸರಬರಾಜಾಗಿದ್ದು ಸಹಾಯಕ ನಿದರ್ೇಶಕರ ಮುಖಾಂತರ ರೈತರಿಗೆ ವಿತರಿಸಲಾಗಿದೆ. ಬರ ಪರಿಸ್ಥಿತಿ ಇರುವುದರಿಂದ ಮೇವಿನ ಕೊರತೆ ನೀಗಿಸಲು ಇನ್ನೂ 4100 ಮಿನಿ ಕಿಟ್ಗಳ ಬೇಡಿಕೆಯನ್ನು ಆಯುಕ್ತರಿಗೆ ಸಲ್ಲಿಸಲಾಗಿದೆ ಎಂದು ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಬಳಗಾನೂರ, ಮೇವುಂಡಿ, ಬಿದರಳ್ಳಿ, ಅಮರಗೋಳ, ಕುಂಟೋಜಿ, ಕಳಕಾಪುರ , ಬೂದಿಹಾಳ ,ಸುವರ್ಣಗಿರಿ, ಭಾವನೂರ, ಕೆರೆ ಹಳ್ಳಿ ಮತ್ತು ಕೊಕ್ಕರಗುಂದಿ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ರಚನೆಯ ಸಲುವಾಗಿ ಗ್ರಾಮ ಸಭೆ ಮಾಡಲಾಗಿದೆ. ಮುಂಡವಾಡ, ಬೆಣ್ಣಿ ಹಳ್ಳಿ, ಹೊಸ ಡಂಬಳ, ಗಜೇಂದ್ರಗಡ ಹಾಗೂ ಕೊಂಚಿಗೇರಿ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸಲಾಗಿದೆ ಎಂದು ಕೆ ಎಂ. ಎಫ್ ಅಧಿಕಾರಿಗಳು ಸಭೆಗೆ ತಿಳಿಸಿದರು.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 5 ಕಾಮಗಾರಿಗಳು ಪೂರ್ಣಗೊಂಡಿದ್ದು 41 ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿಮರ್ಾಣ ಯೋಜನೆಯಡಿ 34 ಕಾಮಗಾರಿಗಳು ಪೂರ್ಣಗೊಂಡಿವೆ. 42 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ ಎಂದು ಕಾರ್ಯನಿವರ್ಾಹಕ ಅಧಿಕಾರಿ ಆರ್.ಜಿ. ಪಾಟೀಲ ಸಭೆಗೆ ತಿಳಿಸಿದರು.
ಸಭೆಯಲ್ಲಿ ಅಡುಗೆ ಗ್ಯಾಸ್ ವಿತರಣೆ, ಅರಣ್ಯ ಹಕ್ಕು ಪತ್ರ ವಿತರಣೆ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ನಿಮರ್ಾಣ, ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ, ಶಾಲಾ ಉದ್ಯಾನವನ, ಶಾಲಾ ಕೊಠಡಿಗಳ ದುರಸ್ತಿ ಕುರಿತು ಚಚರ್ಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ , ಜಿ.ಪಂ. ಉಪ ಕಾರ್ಯದಶರ್ಿ ಎಸ್.ಸಿ. ಮಹೇಶ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.