ಹೂವಿನಹಡಗಲಿ 10: ನಾಟಕಗಳು ಕೇವಲ ಮನರಂಜನೆ ನೀಡುವ ರಂಗ ಕಲೆಯಾಗದೇ ಸಮಾಜದ ಅಂಕುಡೊಂಕು ತಿದ್ದುವ ಸಾಧನವಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಅರುಣಿ ಸುರೇಶ್ ಹೇಳಿದರು.
ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಶ್ರೀ ಕಂಠಿ ಬಸವೇಶ್ವರ ರಥೋತ್ಸವ ಜಾತ್ರಾ ನಿಮಿತ್ತ ಸ್ಥಳೀಯ ಕಲಾವಿದರಿಂದ "ಕಲಿತ ರೈತನ ಕಣ್ಣೀರು " ಸುಂದರ ಸಾಮಾಜಿಕ ನಾಟಕ ದಲ್ಲಿ ಭಾಗವಹಿಸಿ ಮಾತನಾಡಿದ ಅವರುಹಬ್ಬ ಹರಿದಿನ, ಜಾತ್ರೆಗಳ ಸಂದರ್ಭದಲ್ಲಿ ಪೂರ್ವಕಾಲದಿಂದ ಗ್ರಾಮೀಣ ಪ್ರದೇಶದಲ್ಲಿ ಅಭಿನಯಿಸಿರುವ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳು ಸಮಾಜದ ಪರಿವರ್ತನೆಗೆ ಸಂದೇಶ ನೀಡುವ ಸಂವಹನವಾಗಿವೆ. ರಂಗ ಕಲೆ ಅತ್ಯಂತ ಗಟ್ಟಿ ಕಲೆಯಾಗಿದೆ. ಟಿವಿ, ಸಿನೆಮಾ, ಧಾರವಾಹಿಗಳ ಅಬ್ಬರದ ಮಧ್ಯೆಯೂ ರಂಗ ಕಲೆಯನ್ನು ಪ್ರೋತ್ಸಾಹಿಸುತ್ತಾರೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅದ್ಯಕ್ಷ ವಿ.ಬಿ.ಜಗದೀಶ ಮಾತನಾಡಿ ಇಂದಿನ ಬದುಕಿನ ಒತ್ತಡದಲ್ಲಿ ನಾಟಕಗಳು ಮನೋರಂಜನೆ ನೀಡುತ್ತೇವೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದಬಿಜೆಪಿ ಮಂಡಲ ಅದ್ಯಕ್ಷ ಹಣ್ಣಿ ಶಶಿಧರ ಮಾತನಾಡಿ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮಾಧ್ಯಮವಾಗಿದೆ ಎಂದರು.ನಾಟಕ ವ್ಯವಸ್ಥಾಪಕ ಜಿ.ವಿನಾಯಕ. ಗ್ರಾ.ಪಂ.ಮಾಜಿ ಅಧ್ಯಕ್ಷ ಕಂಠಿವೀರೇಶ. ಅಂಗಡಿ ಬಸವರಾಜ. ವಿ.ಬಿ.ಮಲ್ಲಿಕೇಶ್. ಚಂದ್ರ್ಪ.ಜಿ. ಮಲ್ಲಪ್ಪ ಇದ್ದರು.