ಡಾ.ಕಂಬಾರ ಸಾಹಿತ್ಯ ಭವನಕ್ಕೆ ಕಸಾಪದಿಂದ ಹತ್ತು ಲಕ್ಷ.ರೂ.ನೀಡಿಕೆ

ಲೋಕದರ್ಶನ ವರದಿ

ಹುಕ್ಕೇರಿ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತಕನ್ನಡದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಗೌರವಾರ್ಪಣೆಯೆಂದು ಅವರ ಹುಟ್ಟೂರು ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ಡಾ.ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯ ಭವನ ನಿಮರ್ಿಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದ್ದು ಇದಕ್ಕಾಗಿ ಇಂದು ಘೋಡಗೇರಿಯಲ್ಲಿ ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹಾಗೂ ತಾಲೂಕು ಅಧ್ಯಕ್ಷ ಪ್ರಕಾಶ ದೇಶಪಾಂಡೆ ಅವರು 10 ಲಕ್ಷ.ರೂ.ಗಳ ಚೆಕ್ಕ್ನ್ನುಜಿಲ್ಲಾ ಪಂಚಾಯತಿಯ ಹುಕ್ಕೇರಿ ಉಪವಿಭಾಗದ ಸಹಾಯಕ ಅಭಿಯಂತ ಎಸ್.ಡಿ.ಕಾಂಬಳೆ ಅವರಿಗೆ ಕೊಡಮಾಡಿದರು.

     ನಾಡಿನ ಹಿರಿಯ ಹಾಗೂ ಖ್ಯಾತ ಸಾಹಿತಿಗಳ ಹುಟ್ಟೂರಿನಲ್ಲಿ ಅವರ ಗೌರವಾರ್ಥ ಅವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಭವನ ನಿಮರ್ಿಸಲು ಕನ್ನಡ ಸಾಹಿತ್ಯ ಪರಿಷತ್ತು ಯೋಜನೆ ರೂಪಿಸಿದ್ದು ಇದರನ್ವಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ, ರಾಮದುರ್ಗ, ಸೌದತ್ತಿ ಹಾಗೂ ಖಾನಾಪುರ ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಭವನ ನಿಮರ್ಿಸಲು ಕಸಾಪ ಮಂಜೂರಾತಿ ನೀಡಿದ್ದು ಹುಕ್ಕೇರಿ ಹಾಗೂ ರಾಮದುರ್ಗ ತಾಲೂಕುಗಳಿಗೆ ತಲಾ 10ಲಕ್ಷ.ರೂ.ಕೊಡಮಾಡಲಾಗಿದೆಂದು ಜಿಲ್ಲಾಧ್ಯಕ್ಷೆ ಮಂಗಲಾ ಮಟಗುಡ್ಡ ಅವರು ಈ ಸಂದರ್ಭದಲ್ಲಿ ಹೇಳಿದರು.ಘೊಡಗೇರಿಯಲ್ಲಿ 20ಲಕ್ಷ.ರೂ.ಗಳ ವೆಚ್ಚದಲ್ಲಿ ಡಾ.ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯ ಭವನ ನಿಮರ್ಿಸಲಾಗುತ್ತಿದ್ದು ಘೋಡಗೇರಿ ಗ್ರಾಮ ಪಂಚಾಯತಿಯು ಇದಕ್ಕಾಗಿ ಉಚಿತ ನಿವೇಶನ ಕೊಡಮಾಡಿ ಮಾಡಿದ್ದು ಸದ್ಯದಲ್ಲಿಯೇ ಇದರ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗುವದೆಂದು ತಾಲೂಕು ಅಧ್ಯಕ್ಷ ಪ್ರಕಾಶ ದೇಶಪಾಂಡೆ ಅವರು ತಿಳಿಸಿದರು.

ಗಾಮದ ಹಿರಿಯರೂ, ತಾಲೂಕಿನ ಧುರಿಣರಾದ ಶ್ರೀಶೈಲಪ್ಪ ಮಗದುಮ್, ಗ್ರಾ.ಪಂ.ಉಪಾಧ್ಯಕ್ಷೆ ಬಾಯವ್ವ ಸನದಿ, ಸದಸ್ಯರುಗಳಾದ ವಿನೋದ ಮುರಕಿಭಾವಿ, ಶಿವಾನಂದ ಮಗದುಮ್, ಗೀತಾ ಅಂಕಲಗಿ, ಸುರೇಶ ಸಂಗೊಳ್ಳಿ,ಶ್ರೀಶೈಲ ಅಂಕಲಗಿ, ಗ್ರಾ ಪಂಚಾಯತಿ ಅಭಿವೃದ್ಧಿಅಧಿಕಾರಿ ಮಹಾದೇವ ಜಿನರಾಳಿ, ಕಸಾಪ ತಾಲೂಕುಗೌರವ ಕಾರ್ಯದಶರ್ಿ ಬಾಬು ಮುನವಳ್ಳಿ,ಕೋಶಾಧಿಕಾರಿ ಬಾಬು ನಾಯಿಕ ಹಾಗೂ ಗ್ರಾ.ಪಂ.ಸಿಬ್ಬಂದಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.