ಲೋಕದರ್ಶನ ವರದಿ
ಅಣ್ಣಿಗೇರಿ 01: ಈ ದೇಶ ಕಂಡ ಅಪರೂಪದ ಸಂಶೋಧಕರು ಡಾ. ಎಂ. ಎಂ. ಕಲಬುಗರ್ಿ. ತಮ್ಮ ಆಳವಾದ ಸಂಶೋಧನೆಯಿಂದಾಗಿ ಸ್ಪಷ್ಟ ನಿಲುವನ್ನು ತಾಳಿ, ಕೊನೆಯವರೆಗೂ ಆ ನಿಲುವನ್ನು ನಿಭರ್ಿಡೆಯಿಂದ ಪ್ರತಿಪಾದಿಸಿದವರು ಡಾ. ಎಂ. ಎಂ. ಕಲಬುಗರ್ಿಯವರು. ಆಳವಾದ ಅಧ್ಯಯನದಿಂದಾಗಿ ತಾಳಿದ ನಿಲುವು ಜನಸಾಮಾನ್ಯರು ಒಪ್ಪುವಂತೆ ಪ್ರಸ್ತಾವ ಮಾಡುತ್ತಾ ಬಂದ ಡಾ. ಎಂ. ಎಂ. ಕಲಬುಗರ್ಿಯವರ ಬದುಕು-ಬರಹ ತುಂಬಾ ಆದರ್ಶಪ್ರಾಯ ಮತ್ತು ಅನುಕರಣೀಯ ಎಂದು ಡಾ. ಸುಧಾ ಕೌಜಗೇರಿಯವರು ಸಂಶೋಧಕ ಡಾ. ಎಂ. ಎಂ. ಕಲಬುಗರ್ಿ ಬದುಕು-ಬರಹ ಎಂಬ ವಿಷಯದ ಮೇಲೆ ಉಪನ್ಯಾಸ ಮಾಡುತ್ತಾ ಹೇಳಿದರು.
ಕನರ್ಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪ, ನಿಂಗಮ್ಮ ಎಸ್. ಹೂಗಾರ ಸಮೂಹ ವಿದ್ಯಾಲಯಗಳು ಅಣ್ಣಿಗೇರಿ ಇವುಗಳ ಸಹಕಾರದೊಂದಿಗೆ ಅಣ್ಣಿಗೇರಿಯ ಜಗದ್ಗುರು ತೋಂಟದ ವಿದ್ಯಾಪೀಠದ ಆವರಣದಲ್ಲಿ ಏರ್ಪಡಿಸಿದ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸುಧಾ ಕೌಜಗೇರಿ ಡಾ. ಎಂ. ಎಂ. ಕಲಬುಗರ್ಿಯವರ ಜೀವನ ಮತ್ತು ಸಂಶೋದನ ಕಾರ್ಯವನ್ನು ಬಿಚ್ಚಿಟ್ಟರು.
ಮುಖ್ಯ ಅತಿಥಿಯಾಗಿ ಪ್ರೊ.ಎಸ್.ಎಸ್. ಹಲರ್ಾಪೂರ ಮಾತನಾಡಿ, ಡಾ. ಎಂ. ಎಂ. ಕಲಬುಗರ್ಿಯವರನ್ನು ಸಂಶೋಧಕರನ್ನಾಗಿಸಿದ್ದು ಅವರಿಗಿರುವ ಕನ್ನಡ ಮತ್ತು ಬಸವಣ್ಣನವರ ವಚನಗಳ ಬಗ್ಗೆ ಇರುವ ವಿಶೇಷವಾದ ಒಲವು ಮತ್ತು ಬದ್ಧತೆ ಆಗಿವೆ. ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ದಿನವೇ ರಾಜಿನಾಮೆ ಪತ್ರವನ್ನು ಬರೆದಿಟ್ಟರು. ಭಾರತದಂತಹ ಭಾವನಿಷ್ಠ ರಾಷ್ಟ್ರಗಳಲ್ಲಿ ಸತ್ಯವನ್ನು ಒಪ್ಪಿಕೊಳ್ಳುವುದು ಬಹಳ ಕಡಿಮೆ, ಆದರೂ ಕಂಡುಕೊಂಡ ಸತ್ಯವನ್ನು ಜಗತ್ತಿಗೆ ಹೇಳದೆ ಇರುವುದು ಮಹಾಅಪರಾಧ ಎಂಬ ನಿಲುವು ಕಲಬುಗರ್ಿಯವರದಾಗಿತ್ತು, ಕಲಬುಗರ್ಿಯವರನ್ನು ಹಾಗೂ ಅವರ ವಿಚಾರಧಾರೆಗಳನ್ನು ಅರಿಯಬೇಕಾದರೆ ಅವರ ಸಂಶೋಧನಾ ಎಂಟು ಗ್ರಂಥಗಳನ್ನು ಅಭ್ಯಸಿಸುವಂತೆ ಅವರು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಜನರನ್ನು ಪ್ರೋತ್ಸಾಹಿಸುವ ಹಾಗೂ ಕನ್ನಡಕ್ಕೆ ತಮ್ಮನ್ನು ತಾವೇ ಅಪರ್ಿಸಿಕೊಂಡವರು ಡಾ. ಎಂ.ಎಂ ಕಲಬುಗರ್ಿಯವರು ನನ್ನ ಸ್ನೇಹಿತರಾದ ಆರ್.ಸಿ.ಹಿರೇಮಠ ಹಾಗೂ ಸಾಸನೂರ ಇವರ ವಿದ್ಯಾಥರ್ಿಯಾದ ಕಲಬುಗರ್ಿ ಇವರೊಂದಿಗೆ ನಾನು ನಾಲ್ಕೈದು ವರ್ಷ ಕಾರ್ಯಕಾರಿ ಸಮಿತಿಯಲ್ಲಿ ಕೆಲಸ ಮಾಡಿದ್ದೇನೆ ಕನ್ನಡ ಭಾಷೆ ಕ್ರಿ.ಪೂ. 3 ನೇ ಶತಮಾನಗಳಷ್ಟು ಹಳೆಯದಾದ ಭಾಷೆ. ಈ ಭಾಷೆ ಕಲಿಯುವಲ್ಲಿ ಮಡಿವಂತಿಕೆ ಬೇಡ. ಕನ್ನಡ ಚೆನ್ನಾಗಿ ಬಲ್ಲವ ಅನ್ಯ ಭಾಷೆಗಳನ್ನು ಅರಿತುಕೊಳ್ಳಬಲ್ಲ. ಇಂಗ್ಲೀಷ ಅನ್ನದ ಭಾಷೆ ಎಂಬುದು ಶುದ್ದ ಸುಳ್ಳು. ಪ್ರಾನ್ಸ, ಜರ್ಮನಿ, ಪೊಲೆಂಡ, ರಷ್ಯಾ, ಚೈನಾ ಹಾಗೂ ಅರಬ್ ರಾಷ್ಟ್ರಗಳಲ್ಲಿ ಇಂಗ್ಲೀಷ ಭಾಷೆ ಇಲ್ಲ, ಇವರಿಗೆ ಇವರದೆ ಮಾತೃಭಾಷೆ ಪ್ರಮುಖ, ಇಂಗ್ಲೀಷ ಇಲ್ಲದೆ ಈ ರಾಷ್ಟ್ರಗಳು ವಿಶ್ವವಿಖ್ಯಾತಿ ಹೊಂದಿದ ರಾಷ್ಟ್ರಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಗದುಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಪಂಪನ ಪದ್ಯಗಳನ್ನು ಅಣ್ಣಿಗೇರಿಯ ಮಕ್ಕಳು ವಿಶೇಷವಾಗಿ ಕಲಿತು, ಹಾಡುತ್ತಾ ಪಂಪನನ್ನು ಜೀವಂತವಾಗಿ ಇರಿಸಿದ್ದಾರೆ, ಇದು ಈ ನಾಡಿನ ಎಲ್ಲ ಮಕ್ಕಳಿಗೂ ಆದರ್ಶಪ್ರಾಯವಾದ ಕಾರ್ಯವಾಗಿದೆ ಎಂದು ಹೇಳಿದರು.
ಕಲಾಮಂಟಪದ ಸಂಚಾಲಕರಾದ ಶಂಕರ ಕುಂಬಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಯಿ-ತಾಯಿನುಡಿ, ಮಾತೃಭೂಮಿ ಎಲ್ಲಕ್ಕಿಂತ ಶ್ರೇಷ್ಠ, ವಿದ್ಯಾವರ್ಧಕ ಸಂಘ 1890 ರಲ್ಲಿ ಸ್ಥಾಪನೆಯಾಗಿ ಇಲ್ಲಿಯವರೆಗೆ ಕನ್ನಡ ನಾಡು, ನುಡಿ ಪ್ರಾಂತ್ಯದ ಉಳಿವಿನಲ್ಲಿ ಹಲವಾರು ಪ್ರಯತ್ನಗಳನ್ನು ಕೈಗೊಂಡಿದೆ ಎಂದರು. ವೇದಿಕೆಯಲ್ಲಿ ಎಂ. ಬಿ. ಸುರಕೋಡ, ಹಾಲಪ್ಪ ತುರಕಾಣಿ ಹಾಗೂ ಮುತ್ತಣ್ಣ ನವಲಗುಂದ ಉಪಸ್ಥಿತರಿದ್ದರು.
ಚಿತ್ರಕಲಾ ಶಿಕ್ಷಕರಾದ ವಸಂತ ಪಟ್ಟೇದ ಇವರು ಕುಂಚ ನಮನ ಕಾರ್ಯಕ್ರಮ ನಡೆಸಿಕೊಟ್ಟರು. ಶಂಭಯ್ಯ ಹಿರೇಮಠ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ರೂಪಾ ವಂಡಕರ ಸ್ವಾಗತಿಸಿದರು. ಸವಿತಾ ಬಡಿಗೇರ ಹಾಗೂ ವಿದ್ಯಾಥರ್ಿಗಳು ಪ್ರಾಥರ್ಿಸಿದರು, ಕು. ದ್ಯಾಮಕ್ಕ ಮುದಿಯಪ್ಪನವರು ವಂದಿಸಿದರು, ಉಮಾ ಹಾಗೂ ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು.