ಲೋಕದರ್ಶನ ವರದಿ
ಬೈಲಹೊಂಗಲ: ಕಾಯಕಯೋಗಿ ಬೆಳಗಾವಿ, ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಮಹಾಸ್ವಾಮೀಜಿ ಕಾರ್ಯ ಸ್ಮರಣೀಯವಾದುದು ಎಂದು ಧಾರವಾಡ ಮುರಘಾಮಠದ ಮಲ್ಲಿಕಾಜರ್ುನ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ನಾಗನೂರ ಗ್ರಾಮದ ರುದ್ರಾಕ್ಷಿಮಠದಲ್ಲಿ ಗುರುವಾರ ಸಂಜೆ ನಡೆದ ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಮಹಾಸ್ವಾಮೀಜಿ ಪುಣ್ಯಸ್ಮರಣೆ ರಜತಮಹೋತ್ಸವ, ಬಸವ ಪುರಾಣ, ಡಾ.ಸಾವಳಗೀಶ್ವರ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಧಾಮರ್ಿಕ ಕ್ಷೇತ್ರದಲ್ಲಿ ನಾಗನೂರು ಡಾ.ಶಿವಬಸವ ಶ್ರೀಗಳ ಹೆಸರು ಅಜರಾಮರವಾಗಿದೆ. ಅವರು ನಾಡಿನ ಸಾಹಿತ್ಯ, ಸಾಂಸ್ಕೃತಿಕ, ಆದ್ಯಾತ್ಮಿಕ, ಇತರ ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಹೊಂದಿ ಮಠದಿಂದ ಉತ್ತಮ ಕಾರ್ಯ ಮಾಡಿ ಜನಕ್ಕೆ ಜನೋಪಯೋಗಿ ಕಾರ್ಯ ಮಾಡಿದ್ದಾರೆಂದರು.
ಬೀದರ ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿ, ಉನ್ನತ ಶಿಕ್ಷಣ ಸಂಪಾದಿಸಿ ಡಾ.ಸಾವಳಗೀಶ್ವರ ದೇವರು ಪಟ್ಟಾಭಿಷೇಕ ನಡೆಸಲು ಉತ್ತಮ ಕಾರ್ಯಕ್ರಮ ಆಯೋಜನೆ ಸಂಘಟಕ ಕಾರ್ಯ ಮೆಚ್ಚತಕ್ಕದ್ದು, ಇದರ ಅಂಗವಾಗಿ ಗ್ರಾಮದಲ್ಲಿ 40 ವರ್ಷಗಳ ನಂತರ ಬಸವ ಪುರಾಣ ನಡೆಸುತ್ತಿರುವುದು ಆದ್ಯಾತ್ಮಿಕ ಚಿಂತಕರು, ಭಕ್ತಾಧಿಗಳಿಗೆ ಸಂತಸ ಮೂಡಿಸುವಂತಿದೆ. ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಿ ನಾಡಿನಾದ್ಯಂತ ನಾಗನೂರು ಮಠ ಹೆಸರುವಾಸಿಯಾಗಲೆಂದು ಹಾರೈಸಿದರು.
ಸಾನಿಧ್ಯವನ್ನು ಬೆಳಗಾವಿ, ನಾಗನೂರು, ಡಂಬಳ ಗದಗ ಜಗದ್ಗುರು ಡಾ. ತೊಂಟದ ಸಿದ್ದರಾಮ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರಮಠದ ಜ.ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ, ಬೈಲಹೊಂಗಲ ಬಸವಲಿಂಗ ಸ್ವಾಮೀಜಿ, ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಹೊಸುರ ಗಂಗಾಧರ ಸ್ವಾಮೀಜಿ ವಹಿಸಿದ್ದರು. ಹಂದಿಗುಂದ ಶಿವಾನಂದ ಸ್ವಾಮೀಜಿ ಬಸವಪುರಾಣ ಹೇಳಿದರು. ಮಾಜಿ ಸಚಿವ ಶಿವಾನಂದ ಕೌಜಲಗಿ,ಬಸವ ಟಿವಿ ಮಾಲೀಕ ಈ ಕೃಷ್ಣಪ್ಪ, ಮಲ್ಲಪ್ಪ ತಲ್ಲೂರ, ತಾ.ಪಂ ಸದಸ್ಯ ರವಿ ಗದಗ, ಸುತ್ತಮುತ್ತಲಿನ ಗ್ರಾಮಸ್ಥರು, ಪಾಲ್ಗೊಂಡಿದ್ದರು.
ಧಾರವಾಡ ರತಿಕಾ ನೃತ್ಯ ಕಲಾತಂಡದವರು ನೃತ್ಯ ಪ್ರದಶರ್ಿಸಿದರು. ಇದಕ್ಕೂ ಮೊದಲು ಕೂಡಲಸಂಗಮದಿಂದ ಆಗಮಿಸಿದ ಬಸವಪುರಾಣ ಪ್ರಾರಂಭೊತ್ಸವದ ಜ್ಯೋತಿಯನ್ನು ಮೆರವಣಿಗೆ ಕುಂಭಮೇಳ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಮಹಾಂತದೇವರು ಸ್ವಾಗತಿಸಿ, ನಿರೂಪಿಸಿದರು.