ಶಿವಬಸವ ಕಾಯಕಯೋಗಿ ಪ್ರಶಸ್ತಿ ಆಯ್ಕೆ

ಶಿವಬಸವ ಕಾಯಕಯೋಗಿ ಪ್ರಶಸ್ತಿ ಆಯ್ಕೆ  Shiva Basava Kayakayogi Award Selection


ಲೋಕದರ್ಶನ ವರದಿ  

ಯಲಬುರ್ಗಾ 07: ಪ್ರತಿ ವರ್ಷದಂತೆ ಈ ವರ್ಷ ಕೂಡ ಕೊಡ ಮಾಡುವ ಶಿವಬಸವ ಕಾಯಕಯೋಗಿ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಗುರ್ತಿಸಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಶೇಖರ ಭಜಂತ್ರಿ,ಶಿಕ್ಷಣ ಕ್ಷೇತ್ರದಲ್ಲಿ ತಾಲೂಕಿನ ದಮ್ಮೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಫ್‌.ಎಂ.ಕಳ್ಳಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮದ ಹಿರಿಯ ಪತ್ರಕರ್ತ ಶರಣು ಕಾಟಕಾರ ಇವರ ಸೇವಾ ಕಾರ್ಯವನ್ನು ಗುರ್ತಿಸಿ ನಮ್ಮ ಬನಶ್ರೀ ಸಾಹಿತ್ಯ ಸಂಘಟನೆ ಬಳಗದ ವತಿಯಿಂದ ಕೊಡ ಮಾಡುವ *ಶಿವಬಸವ ಕಾಯಕಯೋಗಿ* ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಿ.ಎಸ್‌.ಶಿವಪ್ಪಯ್ಯನಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.