ಲೋಕದರ್ಶನವರದಿ
ರಾಣೇಬೆನ್ನೂರು: ಮೇ.30: ಪ್ರತಿ ಗ್ರಾಮದ ಕೆರೆ ಅಭಿವೃದ್ಧಿ ಪಡಿಸುವುದರಿಂದ ನೀರು ನಿಲ್ಲುವ ಸಾಮಥ್ರ್ಯ ಹೆಚ್ಚಳವಾಗುವುದರೊಂದಿಗೆ ಪಶು ಪಕ್ಷಿಳಿಗೆ, ವನ್ಯಜೀವಿಗಳಿಗೆ, ಜಾನುವಾರುಗಳಿಗೆ ಕುಡಿಯಲು ನೀರು ಮತ್ತು ರೈತರ ಬೋರ್ವೆಲ್ಗಳಿಗೆ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದು ತಾಲೂಕ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಡಾ|| ಎಸ್.ಎಂ.ಕಾಂಬಳೆ ಹೇಳಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಾಲೂಕಿನ ನೂಕಾಪುರ ಗ್ರಾಮದ ದೊಡ್ಡ ಕೆರೆ ಅಭಿವೃದ್ಧಿ ಪಡಿಸುತ್ತಿರುವ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಅಲ್ಲದೆ ಗ್ರಾಮದ ನಿರುದ್ಯೋಗಿಗಳಿಗೆ ಕೆಲಸ ಕಲ್ಪಿಸಿದಂತಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಗ್ರಾಪಂ ವ್ಯಪ್ತಿಯಲ್ಲಿ ನೀರು ಕಾಲುವೆ ಬೋರ್ವೆಲ್ಗಳಿಗೆ ಮರುಪೂರ್ಣಗೊಳಿಸುವುದು, ಬದು ನಿಮರ್ಾಣ ಅರಣ್ಯೀಕರಣ ಮತ್ತು ಕಂದಕಗಳ ನಿಮರ್ಾಣ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಗೋಪಾಲ ಜಾನಕೊಪ್ಪದ, ಪಿಡಿಓ ಟಿ.ಬಿ.ಮೂಗಾನವರ, ಸಂಯೋಜಕ ಡಿ.ಬಿ.ಅಂಗೂರ, ಪ್ರಕಾಶ ನಾಯ್ಕರ, ಈರಪ್ಪ ನಗಾವತ ಸೇರಿದಂತೆ ಗ್ರಾಮದ ಅನೇಕ ಮುಖಂಡರು ರೈತರು 111 ಹೆಚ್ಚು ಕೂಲಿಕಾರರು ಪಾಲ್ಗೊಂಡಿದ್ದರು.