ಬೆಂಗಳೂರು, ಮೇ 20, ವೈದ್ಯಕೀಯ ಶಿಕ್ಷಣ ಸಚಿವನಾಗಿ ನೂರು ದಿನ ಪೂರೈಸಿದ್ದೇನೆ. ಅನುದಿನದ ಸಾಧನೆ, ಸವಾಲುಗಳ ಸಂಘರ್ಷಗಳ ನಡುವೆ, ಸಾರ್ಥಕ ಸೇವೆಗಳ ಹಲವು ಹೆಜ್ಜೆಗಳು, ಮತ್ತಷ್ಟು ಸಾಧಿಸಬೇಕು ಎಂದು ಹುರಿದುಂಬಿಸಿವೆ. ನಿರೀಕ್ಷಿಸದ ಕೋವಿಡ್ ಬಿಕ್ಕಟ್ಟು, ಸಮರೋಪಾದಿಯಲ್ಲಿ ಸೆಣೆಸುವುದನ್ನು ಕಲಿಸಿದೆ. ಸೇವೆಗೆ ಅವಕಾಶ ನೀಡಿದ ರವರಿಗೆ,ಹರಸಿದ ಎಲ್ಲರಿಗೂ ಅಭಿವಂದನೆಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ತಾವು ಪಾಲ್ಗೊಂಡ ಹಲವು ಕಾರ್ಯಕ್ರಮಗಳ ಭಾವಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ.