ಬೆಂಗಳೂರು, ಮೇ 10,ನಗರದ ಅಮೃತಹಳ್ಳಿಯ ಮಾರಮ್ಮ ದೇವಸ್ಥಾನದ ಎದುರು (ಬ್ಯಾಟರಾಯನಪುರ) ಬಡವರಿಗೆ ದಿನಸಿ ಕಿಟ್ ಮತ್ತು ತರಕಾರಿಗಳ ಉಚಿತ ವಿತರಣಾ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಇಂದು ಬೆಳಗ್ಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ , ಬೈಯಪಾ ಅಧ್ಯಕ್ಷ ಎ.ರವಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಸುಮಾರು 50 ಟನ್ ಗಳಷ್ಟು ದಿನಸಿ ಮತ್ತು ತರಕಾರಿಗಳ ಕಿಟ್ ನ್ನು ಬೆಂಗಳೂರು ನಗರ ಯುವ ಮೋರ್ಚಾದ ಕಾರ್ಯದರ್ಶಿ ಸಂತೋಷ ಅವರು ಪ್ರಾಯೊಜಿಸಿದ್ದರು. ಸಮಾರಂಭದಲ್ಲಿ ಅಶ್ವತ್ಥ ನಾರಾಯಣ ಮಾತನಾಡಿ, ಈ ಭಾಗದ ಎ ರವಿ ಮುಖಂಡತ್ವದಲ್ಲಿ ಸಂತೋಷ ಅವರು ತುಂಬಾ ಅತ್ಯುತ್ತಮ ಕೆಲಸ ಮಾಡುತ್ತಾ ಇದ್ದಾರೆ. ಬಡ ಜನರಿಗೆ, ಹಸಿದವರಿಗೆ ಮತ್ತು ಕೂಲಿ ಕಾರ್ಮಕರಿಗೆ ದಿನಸಿ ಮತ್ತು ತರಕಾರಿ ಅತ್ಯಂತ ವ್ಯವಸ್ಥಿತವಾಗಿ ನೀಡುತ್ತಿರುವುದು ಶ್ಲಾಘನೀಯ.
ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೋವಿಡ್ 19 ನ್ನು ಅತ್ಯಂತ ಯಶಸ್ವಿಯಾಗಿ ಎದುರಿಸುತ್ತಿದೆ ಎಂದರು.ಈಗಾಗಲೇ ಆರೊಗ್ಯಕ್ಕೆ ಸಂಬಂಧಿಸಿದಂತೆ ತುಂಬಾ ವೇಗದಲ್ಲಿ ಎಲ್ಲ ಮುಂಜಾಗ್ರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಈ ಕೋವಿಡ್ ಇನ್ನೂ ನಮ್ಮೊಂದಿಗೆ ಇರುತ್ತದೆ. ಅದನ್ನು ಎಷ್ಟು ಕಠಿಣವಾಗಿ ತಡೆಯಬೇಕೆಂಬುದು ನಮ್ಮ ಕೈಯಲ್ಲಿದೆ. ನಮ್ಮ ಜಾಗೃತಿಯೇ ನಮ್ಮನ್ನು ಕಾಪಾಡುತ್ತದೆ. ನಾವು ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಬಹು ಮುಖ್ಯ ಒಂದು ತಿಳಿಸಿದರು.