ಲೋಕದರ್ಶನ ವರದಿ ಡಾ. ರಾಜ್‌ಕುಮಾರ್ ರವರ 97ನೇ ಜನ್ಮ ದಿನಾಚರಣೆ ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್‌ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ ಕೊಪ್ಪಳ 24: ಡಾ. ರಾಜ್‌ಕುಮಾರ್ ರವರು ಕೇವಲ ಕಲಾವಿಧರಾಗಿ ಹಾಗೂ ಕನ್ನಡ ಕಲಾ ಅರಾಧಕರಾಗಿ ಉಳಿಯದೇ ಅವರು ಕನ್ನಡ ಭಾಷಾಭಿಮಾನವನ್ನು ಬೆಳೆಸಿದ್ದರು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜುಮದಾರ ಹೇಳಿದರು. ಅವರು ಗುರುವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ

Dr. Rajkumar's 97th birthday celebration

ಲೋಕದರ್ಶನ ವರದಿ 

ಲೋಕದರ್ಶನ ವರದಿ 

ಡಾ. ರಾಜ್‌ಕುಮಾರ್ ರವರ 97ನೇ ಜನ್ಮ ದಿನಾಚರಣೆ 

ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್‌ಕುಮಾರ್  

- ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ 

ಕೊಪ್ಪಳ 24: ಡಾ. ರಾಜ್‌ಕುಮಾರ್ ರವರು ಕೇವಲ ಕಲಾವಿಧರಾಗಿ ಹಾಗೂ ಕನ್ನಡ ಕಲಾ ಅರಾಧಕರಾಗಿ ಉಳಿಯದೇ ಅವರು ಕನ್ನಡ ಭಾಷಾಭಿಮಾನವನ್ನು ಬೆಳೆಸಿದ್ದರು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜುಮದಾರ ಹೇಳಿದರು.  

ಅವರು ಗುರುವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ ಇವರ ಸಹಯೋಗದಲ್ಲಿ ಏರಿ​‍್ಡಸಲಾಗಿದ್ದ ಕನ್ನಡ ಚಲಚಿತ್ರ ರಂಗ ಕಂಡ ಮೆರು ನಟ, ನಟ ಸಾರ್ವಭೌಮ, ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‌ಕುಮಾರ್ ರವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 

ಡಾ. ರಾಜ್‌ಕುಮಾರ್ ರವರು ಎಲ್ಲರಿಗೂ ಆದರ್ಶ ವ್ಯಕ್ತಿಗಳಾಗಿದ್ದರು. ಆಗಿನ ಕಾಲದಲ್ಲಿ ತುಂಬಾ ಜನ ರಾಜ್‌ಕುಮಾರ್ ರವರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಬದಲಾಗಿದ್ದಾರೆ. ಕರ್ನಾಟಕ ರಾಜ್ಯ ಹಾಗೂ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಅರಣ್ಯಕ್ಕೆ ಸಂಬಂಧಿಸಿ ಮೊಟ್ಟ ಮೊದಲ ಚಲನಚಿತ್ರ ಮಾಡಿದವರೇ ಡಾ. ರಾಜ್‌ಕುಮಾರ್‌. ಅವರು ಕೇವಲ ನಟರಾಗದೇ ಗೋಕಾಕ್ ಚಳುವಳಿ ಮೂಲಕ ಇಡಿ ಕನ್ನಡ ಚಿತ್ರರಂಗ ಹಾಗೂ ಎಲ್ಲಾ ಸಾಹಿತಿಗಳ ಜೊತೆಗೆ ಕರ್ನಾಟಕ ರಾಜ್ಯವನ್ನು ಸುತ್ತಿ ಕನ್ನಡ ಭಾಷಾಭಿಮಾನ ಬೆಳೆಸಿದ್ದರು. ನಮ್ಮ ಅನ್ನದ ಭಾಷೆ ಯಾಕೆ ಬೇಕು, ನಮ್ಮ ಜೀವನದಲ್ಲಿ ಈ ಭಾಷೆಯ ಮಹತ್ವ ಏನು ಎಂಬುವುದನ್ನು ತೋರಿಸಿಕೊಟ್ಟಿದ್ದರು ಎಂದರು.  

ಬೆರೆ ರಾಜ್ಯದ ದೊಡ್ಡ-ದೊಡ್ಡ ನಟರೆಲ್ಲಾ ರಾಜಕಾರಣಕ್ಕೆ ಹೋಗಿದ್ದಾರೆ. ಡಾ. ರಾಜ್‌ಕುಮಾರ್ ರವರು ಮನಸ್ಸು ಮಾಡಿದರೆ, ಅವರು ರಾಜಕಾರಣಿಯಾಗಿ ಇಡಿ ಕರ್ನಾಟಕವನ್ನು ಆಳಬಹುದಾಗಿತ್ತು. ಆದರೆ, ಅವರು ಕೇವಲ ಕಲಾವಿಧರಾಗಿ, ಕನ್ನಡ ಕಲಾ ಅರಾಧಕರಾಗಿ ಪ್ರತಿಯೊಬ್ಬ ಕನ್ನಡಿಗರ ಮನದಲ್ಲಿ ಉಳಿದಿದ್ದಾರೆ. ಬೇರೆ ಭಾಷೆಗಳಲ್ಲಿ ಅವಕಾಶಗಳು ಸಿಕ್ಕರು ಸಹ ಕನ್ನಡ ಭಾಷೆಯನ್ನು ಬಿಟ್ಟು ಬರುವುದಿಲ್ಲ ಎಂದು ಹೇಳಿದ್ದರು. ಅವರ ಕಲೆ ಕನ್ನಡ ಭಾಷೆಗೆ ಮಾತ್ರ ಸಿಮಿತವಾಗಿತ್ತು. ರಾಜ್‌ಕುಮಾರ್ ರವರು ಕನ್ನಡದ ಆಸ್ತಿ, ಶಕ್ತಿ, ಕನ್ನಡದ ಅಸ್ಮಿತೆಯಾಗಿದ್ದಾರೆ. ಅವರ ಕುಟುಂಬದವರು ಚಿತ್ರರಂಗಕ್ಕೆ ಅಷ್ಟೆ ಅಲ್ಲದೇ ಸಾಮಾಜಿಕವಾಗಿಯೂ ಸಹ ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.    

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಡಾ. ರಾಜ್‌ಕುಮಾರ್ ರವರು ಕನ್ನಡ ಚಲನ ಚಿತ್ರರಂಗದಲ್ಲಿ ಅತ್ಯಂತ ಪ್ರಭಾವಿ ನಟರಾಗಿ ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ತಮ್ಮದೆ ಆದ ಚಾಪನ್ನು ಮೂಡಿಸಿದ್ದರು. ನಾಟಕ ಕಂಪನಿಗಳಿಂದ ಹಿಡಿದು ಸಿನಿಮಾ ಕಂಪನಿಗಳವರೆಗೆಗೂ ತಮ್ಮ ಪ್ರತಿಭೆಯನ್ನು ತೋರಿಸಿ, ಇತರರಿಗೆ ಮಾರ್ಗದರ್ಶಕರಾಗಿದ್ದರು. ದಾರಿ ತಪ್ಪಿದ ಮಗ, ಬಡವರ ಬಂಧು, ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಅಜರಾಮರವಾಗಿದ್ದಾರೆ. ಚಲನ ಚಿತ್ರಗಳಲ್ಲಿನ ಅವರ ನಟನೆ, ಸಂಭಾಷಣೆ, ಸಂಗೀತ, ಸ್ವರ ಸಂಯೋಜನೆ ಅರ್ಥಗರ್ಭಿತವಾಗಿದ್ದವು. ಡಾ. ರಾಜ್‌ಕುಮಾರ್ ರವರು ಕನ್ನಡ ಚಿತ್ರರಂಗಕ್ಕೆ ವಿಶೇಷವಾದ ಸ್ಥಾನ-ಮಾನ ತಂದು ಕೊಟ್ಟವರಾಗಿದ್ದಾರೆ ಎಂದರು.   

ಪುಷ್ಪನಮನ ಸಲ್ಲಿಕೆ ಹಾಗೂ ಸಂಗೀತ: ಡಾ. ರಾಜ್‌ಕುಮಾರ್ 97ನೇ ಜನ್ಮ ದಿನಾಚರಣೆ ನಿಮಿತ್ತ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ರಾಜ್‌ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಮರ​‍್ಿಸಿದರು. ಕಲಾವಿದ ಬಾಷು ಹಿರೇಮನಿ ಕಿನ್ನಾಳ ಹಾಗೂ ಚಂದನ ಭದ್ರಾವತಿ ಅವರು ರಾಜ್‌ಕುಮಾರ್ ರವರ ಅಭಿನಯದ ಚಲನಚಿತ್ರಗಳ ಗೀತೆಗಳನ್ನು ಹಾಡಿದರು.  

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್, ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ನಾಗಮಣಿ, ಚುನಾವಣಾ ವಿಭಾಗದ ತಹಶೀಲ್ದಾರ ರವಿ ವಸ್ತ್ರದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುರೇಶ್ ಜಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ.ನಾಗರಾಜ ಸೇರಿದಂತೆ ವಾರ್ತಾ ಇಲಾಖೆ, ಜಿಲ್ಲಾಧಿಕಾರಿ ಕಛೇರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 