ಕೇಂದ್ರ ಬಸ್ ನಿಲ್ದಾಣದಲ್ಲಿ ಗ್ರಂಥಾಲಯ ಪುನರಾರಂಭಕ್ಕೆ ಸಿಪಿಐಎಂಎಲ್ ಲಿಬರೇಶನ್ ಪಕ್ಷದಿಂದ ಒತ್ತಾಯ
CPI(M) Liberation Party demands reopening of library at Central Bus Stand
ರಾಯಚೂರು 16 : ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಇದ್ದ ಸಾರ್ವಜನಿಕರ ಗ್ರಂಥಾಲಯ ಮುಚ್ಚಲ್ಪಟ್ಟಿದ್ದು ಪ್ರಯಾಣಿಕರಿಗೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ.ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು,ಜಿಲ್ಲಾ ಗ್ರಂಥಾಲಯದ ಅನುಮತಿಯ ಮೇರೆಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ನಿರ್ವಹಣೆ ಮಾಡಲಾಗುತ್ತಿತ್ತು. ಈ ಗ್ರಂಥಾಲಯದಲ್ಲಿ ದಿನ ಪತ್ರಿಕೆ,ವಾರ ಪತ್ರಿಕೆ, ಮಾಸಿಕ,ಪಾಕ್ಷಿಕ ಪತ್ರಿಕೆಗಳ ಜೊತೆಗೆ ಪುಸ್ತಕಗಳು ಓದಲು ಅನುಕೂಲವಾಗಿತ್ತು. ಕೋವಿಡ್ ಕಾಲದಲ್ಲಿ ತಾತ್ಕಾಲಿಕವಾಗಿ ಬಂದ್ ಮಾಡಿದ್ದ ಗ್ರಂಥಾಲಯವನ್ನು ಇದುವರೆಗೆ ತೆರೆದಿಲ್ಲ.
ಗ್ರಂಥಾಲಯದ ಜಾಗದಲ್ಲಿ ನಿಯಂತ್ರಣ ಅಧಿಕಾರಿಗಳ ವಿಶ್ರಾಂತಿ ಕೊಠಡಿ ಮಾಡಲಾಗಿದೆ. ಆದರೆ ಇದಕ್ಕೆ ಬೇರೆ ಜಾಗ ಕಡೆ ಜಾಗದ ಕೊರತೆಯಿಲ್ಲ. ಇಲಾಖೆ ಅಧಿಕಾರಿಗಳು ಈ ಹಿಂದಿನಂತೆ ಗ್ರಂಥಾಲಯ ಆರಂಭಿಸಬೇಕು.ರಾಯಚೂರು ತಾಲೂಕಿನ ವಿವಿಧ ಹಳ್ಳಿಗಳ ವಿದ್ಯಾರ್ಥಿಗಳು, ದೂರದ ಊರುಗಳಿಗೆ ಪ್ರಯಾಣ ಮಾಡುವವರು ಬಸ್ ಗಾಗಿ ಕಾಯುವಾಗ ಸರಿಯಾದ ಆಸನಗಳು ಸಿಗದೇ ಅನೇಕರು ನಿಂತು ಬಸ್ ಗಾಗಿ ಕಾಯಬೇಕಿದೆ. ಗ್ರಂಥಾಲಯ ಇದ್ದರೆ ನಿಲ್ಲುವ ಬದಲು ಕೂಡಿ ಪತ್ರಿಕೆಗಳು ಓದಬಹುದು ಇದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೂ ಕಾರಣವಾಗಬಹುದು.
ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿಯ ಮಧ್ಯೆ ಸನಯ ವ್ಯರ್ಥ ಮಾಡುವ ವಿದ್ಯಾರ್ಥಿಗಳಿಗೆ ದಿನಪತ್ರಿಕೆ ಓದಲು ಪ್ರೇರೇಪಿಸಬಹುದಾಗಿದೆ. ಕೂಡಲೇ ಸಾರಿಗೆ ಇಲಾಖೆ ಇದರ ಬಗ್ಗೆ ಗಮನಹರಿಸಲಿ ಎಂದು ಮನವಿ ಮಾಡಿಕೊಳ್ಳುತ್ತೇವೆ.ಈ ಸಂದರ್ಭದಲ್ಲಿ ಪಕ್ಷದ ತಾಲೂಕ ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಮುಖಂಡರಾದ ಜಗದೀಶ್, ಭೀಮಣ್ಣ, ಗುರುಬಸವ, ಅಮರೇಶ್ ನಾಯಕ್ ಇದ್ದರು. :ರಾಯಚೂರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 