ಪತ್ರಿಕಾ ಪ್ರಕಟಣೆವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಶಿಕ್ಷಣದ ಆಶಯ ಹೊಂದಿದ್ದ ,ಪ್ರೊಫೆಸರ್ಮುಜಾಫರ್ ಅಸ್ಸಾದಿಅವರ ಅಗಲಿಕೆಯ ಕುರಿತು
ಬಳ್ಳಾರಿ 04 : ಪತ್ರಿಕಾ ಪ್ರಕಟಣೆವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಶಿಕ್ಷಣದ ಆಶಯ ಹೊಂದಿದ್ದ ,ಪ್ರೊಫೆಸರ್ಮುಜಾಫರ್ ಅಸ್ಸಾದಿಅವರ ಅಗಲಿಕೆಯ ಕುರಿತು ಂಋಖಓ ತೀವ್ರ ಸಂತಾಪ ಸೂಚಿಸುತ್ತದೆ.ರಾಜಕೀಯ ತಜ್ಞರು, ಲೇಖಕರು ಆಗಿದ್ದ ಪ್ರೊಫೆಸರ್ಮುಜಾಫರ್ ಅಸ್ಸಾದಿ ಮೈಸೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿ 2022ರಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ನಂತರ ಸಾಮಾಜಿಕ ಕಳಕಳಿಯೊಂದಿಗೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ.ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಸೇರಿದಂತೆ 11 ಕೃತಿಗಳನ್ನು ರಚಿಸಿದ್ದಾರೆ. ಶಿಕ್ಷಣ, ಮಾನವತೆ ಹಾಗೂ ಸಂಸ್ಕೃತಿ ಉಳಿಸಲು ನಡೆದ ಂಋಖಓ ವಿದ್ಯಾರ್ಥಿ ಸಂಘಟನೆಯ ಹತ್ತನೇ ಅಖಿಲ ಭಾರತ ವಿದ್ಯಾರ್ಥಿ ಸಮ್ಮೇಳನಕ್ಕೆ ಶುಭಾಕಾಂಕ್ಷಿಗಳಾದ್ದ ಶಿಕ್ಷಣವು ಧರ್ಮನಿರಪೇಕ್ಷ, ವೈಜ್ಞಾನಿಕ ಹಾಗೂ ಪ್ರಜಾತಾಂತ್ರಿಕವಾಗಿ ಎಲ್ಲರಿಗೂ ಸಿಗಬೇಕೆಂಬ ಆಶಯ ಹೊಂದಿದ್ದರು. ಹಾಗೂ ಇದಕ್ಕೆ ವಿರುದ್ಧವಾದ ಶಿಕ್ಷಣ ವ್ಯಾಪಾರೀಕರಣದ ನೀಲಿ ನಕ್ಷೆಯಾದ ಓಇಕಹಿ2020 ವಿದ್ಯಾರ್ಥಿ ವಿರೋಧಿ ನೀತಿಯನ್ನು ಕೂಡ ಖಂಡಿಸಿದ್ದರು!ಇಂಥವರ ಅಗಲಿಕೆ ಅತ್ಯಂತ ಬೇಸರದ ಸಂಗತಿ ಹಾಗೂ ಸಮಾಜ ಬದಲಾವಣೆಯ ದಾರಿಯಲ್ಲಿ ತುಂಬಲಾರದ ನಷ್ಟ ಕೂಡ. ಇಂತಹ ಪ್ರಗತಿಪರ ಚಿಂತಕರ ಅಗಲಿಕೆಯ ಕುರಿತು ಂಋಖಓ ತೀವ್ರ ಸಂತಾಪ ಸೂಚಿಸುತ್ತದೆ.ಪ್ರಕಟಣೆ ಇವರಿಂದ, ಕಂಬಳಿ ಮಂಜುನಾಥ ರಾಜ್ಯ ಕಾರ್ಯದರ್ಶಿ