ಹೆಚ್ಚು ದುಡ್ಡು ಕೊಟ್ಟವರ ಕಬ್ಬು ಕಡಿಯಲು ಮುಂದಾಗುತ್ತಿರುವ ಕಬ್ಬು ಕಟಾವು ಗ್ಯಾಂಗ್
ಸಂತೋಷ್ ಕುಮಾರ್ ಕಾಮತ್
ಮಾಂಜರಿ 04: ಒಂದೆಡೆ ಬರಗಾಲ, ಅತಿವೃಷ್ಟಿ ನೆರೆಹಾವಳಿ ಮತ್ತೊಂದೆಡೆ ಬೆಳೆದ ಬೆಳೆಗಳು ಕೈಗೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲೇ ಕಟಾವಿಗೆ ಬಂದ ಕಟ್ಟು ಕಡೆಯಲು ಕಬ್ಬಿನ ಗ್ಯಾಂಗ್‌ಗಳೇ ಬರದ ಹಿನ್ನೆಲೆಯಲ್ಲಿ ಕಬ್ಬು ಬೆಳೆದ ರೈತರನ್ನು ಕಂಗಾಲಾಗಿಸಿದೆ.
ಜಿಲ್ಲೆಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳಾಗಿರುವುದರಿಂದ ಇತ್ತೀಚೆಗೆ ಹೆಚ್ಚು ರೈತರು ಕಬ್ಬು ಬೆಳೆಯುತ್ತಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ರೈತರು ಕಬ್ಬು ಬೆಳೆದಿದ್ದಾರೆ. ಅತಿ ಹೆಚ್ಚುಮಳೆಯಿಂದಾಗಿ ಹಾಗೂ ನೆರೆಹಾವಳಿಯಿಂದ ಹೇಳಿಕೊಳ್ಳುವಂತಹ ಇಳುವರಿ ಬಾರದಿದ್ದರೂ ಬೋರ್‌ವೆಲ್ ಮೂಲಕ ನೀರು ಹಾಯಿಸಿ ಕಬ್ಬು ಉಳಿಸಿಕೊಂಡಿದ್ದಾರೆ. ಆದರೆ, ಇದೀಗ ಕಬ್ಬು ಕಟಾವು ಮಾಡುವುದೇ ಅವರಿಗೆ ಚಿಂತೆಯಾಗಿ ಪಾಣಮಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಬೆಳೆ ನಷ್ಟದ ಚಿಂತೆ: ಕಬ್ಬು ಕಟಾವಿಗೆ ಕಾರ್ಖಾನೆಗಳು ವಿವಿಧೆಡೆಗಳಿಂದ ಗ್ಯಾಂಗ್‌ಗಳನ್ನು ಕರೆಸಿವೆ. ಆದರೆ ಇವರು ಕಡಿಮೆ ಸಂಖ್ಯೆ ಯಲ್ಲಿರುವ ಕಾರಣಹೆಚ್ಚಾಗಿದೆ. ಕಟಾವಿಗೆ ತಮ್ಮ ಸರದಿ ಬರುವಷ್ಟರಲ್ಲಿ ಬೆಳೆ ಒಣಗುತ್ತದೆ ಎಂಬ ಚಿಂತೆ ಕಬ್ಬು ಬೆಳೆಗಾರರದ್ದಾಗಿದೆ. ಕಬ್ಬು ಕಟಾವಿಗೆ ಗ್ಯಾಂಗ್‌ಗಳು ಯಾವ ರೈತರು ಹೆಚ್ಚು ಹಣ ನೀಡುತ್ತಾರೋ ಅವರಲ್ಲಿಗೆ ಬೇಗ ಕಬ್ಬು ಕಟಾವಿಗೆ ಹೋಗುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಒಳ್ಳೆಯ ಕಬ್ಬು ಇದ್ದರೆ ಒಂದು ಎಕರೆಗೆ ?2000, ಸಾದಾ ಕಟ್ಟು ಇದ್ದರೆ 2300 ಇನ್ನೂ ಕೆಲವರು ನಾಲ್ಕರಿಂದ ಆರು ಸಾವಿರ ರು. ವರೆಗೂ ಕೇಳುತ್ತಾರೆ. ಕಬ್ಬು ಸಾಗಿಸುವಾಗ ಟ್ರ್ಯಾಕ್ಟರ್ ಚಾಲಕನಿಗೆ ರೈತರು ಪ್ರತಿ ಟ್ರಿಪ್‌ಗೆ ಕ500 ಊಟೋಪಚಾರಕ್ಕೆ ಕೊಡಬೇಕು.
ಹೆಚ್ಚು ಹಣ ಕೊಟ್ಟವರ ಕಬ್ಬು ಕಟಾವು ಹೆಚ್ಚು ಹಣ ನೀಡಿದ ರೈತರ ಕಬ್ಬು ಕಟಾವಿಗೆ ಗ್ಯಾಂಗ್ ಮುಂದಾಗುತ್ತಿದೆ. ಹಣ ನೀಡಲು ಸಾಧ್ಯವಾಗದ ಬಡರೈತರು ಕಬ್ಬನ್ನು ಕಟಾವು ಮಾಡಿಸಿ ಕಾರ್ಖಾನೆಗೆ ಕಳುಹಿಸಲು ಪರದಾಡುವಂತಾಗಿದೆ. ತಾಲೂಕಿನ ಅನೇಕಗ್ರಾಮಗಳಲ್ಲಿ ಇಂತಹಸ್ಥಿತಿನಿರ್ಮಾಣವಾಗಿದೆ. ಕಾರ್ಖಾನೆಯವರು ಹೆಚ್ಚು ಕಟಾವು ಯಂತ್ರ ಕಳಿಸಿದರೆ ಅನುಕೂಲ, ಕಾರ್ಮಿಕರ ಕೊರತೆಯ ನೆವ ಹೇಳುವುದನ್ನು ಬಿಟ್ಟು ಕಬ್ಬನ್ನು ತಕ್ಷಣ ಕಟಾವುಮಾಡಬೇಕೆಂದು ರೈತ ಬಾಂಧವರ ಆಗ್ರಹವಾಗಿದೆ.
ಮನಸ್ಸಿಗೆ ಬಂದ ಕಬ್ಬು ಕಟಾವುಈ ಸಲ ಬರಗಾಲ ಹಾಗೂ ನೆರೆಹಾವಳಿಯಿಂದ ಕಬ್ಬು ಶೇ. 60 ರಷ್ಟು ಮಧ್ಯಮ ಗಾತ್ರದಿಂದ ಇದ್ದು, ಉಳಿದ ಕಬ್ಬು ಉತ್ತಮವಾಗಿದೆ. ಕಾರಣ ಕಳೆದ ವರ್ಷ ಕಡಿಮೆ ಮಳೆ, ಈ ವರ್ಷ ಅಪೂರ್ಣ ಮಳೆ, ರೈತರು ಸಾಕಷ್ಟು ನೀರಿಗಾಗಿ ಬೋರ್‌ವೆಲ್, ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಇದರಿಂದಾಗಿ ಕಬ್ಬು ನೆಲ ಕಚ್ಚಿದೆ. ಎರಡು ತಿಂಗಳಿಂದ ಆರಂಭವಾದ ಕಬ್ಬು ಕಟಾವು ಜಿಲ್ಲೆಯ ಕೆಲಸಕ್ಕರೆ ಕಾರ್ಖಾನೆಗಳು ತಮ್ಮ ಮನಸ್ಸಿಗೆ ಬಂದ ಕಬ್ಬನ್ನು ಮಾತ್ರ ಕಟಾವು ಮಾಡುತ್ತಿದ್ದಾರೆ.
ಪ್ರತಿಟನ್ ಕಬ್ಬಿಗೆ ವಿವಿಧ ಕಾರ್ಖಾನೆಗಳು ಬೇರೆ ಬೇರೆ ದರ ನೀಡುತ್ತಿವೆ. ಶಿರಗುಪ್ಪಿ ಶುಗರ್ ಸಕ್ಕರೆ ಕಾರ್ಖಾನೆಯು ?3050, ಚಿದಾನಂದ ಕೋರೆ ಸಹಕರಿ ಸಕ್ಕರೆ ಕಾರ್ಖಾನೆ ಶಿವ ಶಕ್ತಿ ಶುಗರ್ ಸಕ್ಕರೆ ಕಾರ್ಖಾನೆ ?3030, ನಿಪ್ಪಾಣಿಯ ಹಾಲ ಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ?3030 ಹೀಗೆ ಬೇರೆ ದರ ನೀಡುತ್ತಿವೆ. ಇದು ರೈತರಿಗೆ ಅನ್ಯಾಯ ಸರ್ಕಾರ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ 3500 ನೀಡುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ರೈತ ಮುಖಂಡ ಪ್ರಕಾಶ್ ಹೆಮಗಿರೆ ಆಗ್ರಹಿಸಿದ್ದಾರೆ.
ಜಿಲ್ಲೆಯ ಹಲವಾರು ಸಹಕಾರಿ ಮತ್ತು ಖಾಸಗಿ ಒಡೆತನದ ಸಕ್ಕರೆ ಕಾರ್ಖಾನೆಯು ನಮ್ಮ ಭಾಗದ ಕಬ್ಬು ಬೇಗ ಕಟಾವು ಮಾಡಬೇಕು ಮತ್ತು ಸರಿಯಾದ ಸಮಯಕ್ಕೆ ಕಬ್ಬಿನ ಕಂತು ನೀಡಬೇಕು ಈ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
* ಸುರೇಶ್ ಚೌಗುಲೆ , ರೈತ ಮುಖಂಡರು.
ಶಿರಗುಪ್ಪಿ