ಬೆಳಗಾವಿ: ರಾಜ್ಯಸಭಾ ಸದಸ್ಯ, ಕೆಎಲ್ಇ ಸಂಸ್ಥೆ ಕಾಯರ್ಾಧ್ಯಕ್ಷ ಹಾಗೂ ಕೆಎಲ್ಇ ಅಕಾಡಮಿ ಆಫ್ ಹೈಯರ್ ಏಜುಕೇಶನ್ ಆ್ಯಂಡ್ ರಿಸಚರ್್ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅವರಿಗೆ ಅಮೆರಿಕದ ಫಿಲಿಡೆಲ್ಫಿಯಾದ ಪ್ರತಿಷ್ಠಿತ ಮತ್ತು ಹಳೆಯ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯ (ಟಿಜೆಯು) ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲು ನಿರ್ಧರಿಸಿದೆ.
ಮಂಗಳವಾರ ಕೆಎಲ್ಇ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಹೇರ್ ವಿವಿ ಕುಲಪತಿ ಡಾ.ವಿವೇಕ ಸಾವಜಿ, ಕೋರೆ ಅವರು ಶಿಕ್ಷಣ, ಆರೋಗ್ಯ, ವೈದ್ಯಕೀಯ ಸಂಶೋಧನೆಗಳ ಅಂತಾರಾಷ್ಟ್ರೀಯ ಪೋಷಿಸಿದ ಸಾಧನೆಗಾಗಿ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಮೇ 20ರಂದು ಜರುಗಲಿರುವ ವಿವಿ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ ಎಂದು ತಿಳಿಸಿದರು.
1824ರಲ್ಲಿ ಸ್ಥಾಪನೆಯಾದ ಅಮೆರಿಕದ ಟಾಪ್ 10 ವಿಶ್ವವಿದ್ಯಾಲಯಗಳಲ್ಲಿ ಟಿಜೆಯು ಒಂದು. ಈ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯ ಡಾ. ಕೋರೆ ಎಂಬುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ. ಶಿಕ್ಷಣ, ಆರೋಗ್ಯ ಮತ್ತು ಸಂಶೋಧನೆಯ ಕಾರಣಗಳನ್ನು ಹೆಚ್ಚಿಸುವಲ್ಲಿ ಮತ್ತು ಬಡವರಿಗೆ ಮತ್ತು ನಿರ್ಗತಿಕರಿಗೆ ಸೌಲಭ್ಯಗಳನ್ನು ತಲುಪುವಲ್ಲಿ ಅವರ ಸತತ ಪ್ರಯತ್ನಗಳನ್ನು ಪರಿಗಣಿಸಿ ವಿಶ್ವವಿದ್ಯಾಲಯ ಅವರಿಗೆ ಗೌರವ ನೀಡಲು ನಿರ್ಧರಿಸಿದೆ ಎಂದರು.
ಡಾ. ಕೋರೆ ಅವರು ಬೆಳಗಾವಿಯಂತಹ ಎರಡನೇ ಶ್ರೇಣಿ ನಗರದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ವಿಶ್ವ ದಜರ್ೆಯ ಮೂಲಸೌಕರ್ಯ ಕಲ್ಪಿಸಿರುವುದಲ್ಲದೆ, ಸಾಂಪ್ರದಾಯಿಕ ಮತ್ತು ವೃತ್ತಿಪರ ಶಿಕ್ಷಣದ ಗುಣಮಟ್ಟ ಖಚಿತಪಡಿಸಿದ್ದಾರೆ. ವಿಶ್ವ ದಜರ್ೆಯ ಸಂಶೋಧನೆಗಳ ಮೇಲೆ ಕೇಂದ್ರೀಕರಿಸುವ ಕಹೇರ ನೊಂದಿಗೆ ಟಿಜೆಯು ಹಲವಾರು ಸಹಯೋಗಗಳನ್ನು ಹೊಂದಿದೆ, ವಿಶೇಷವಾಗಿ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಟಿಜೆಯುನಲ್ಲಿ ಭಾರತ ಕೇಂದ್ರ ಆರಂಭ
ಯುಎಸ್ಎಯ ಭಾರತೀಯ ರಾಯಭಾರಿ ಉಪಸ್ಥಿತಿಯಲ್ಲಿ ಮೇ 20ರಂದು ನಡೆಯಲಿರುವ ಘಟಿಕೋತ್ವವ ಕಾರ್ಯಕ್ರಮದಲ್ಲಿ ಇಂಡಿಯಾ ಸೆಂಟರ್ ಫಾರ್ ಸ್ಟಡೀಸ್ ಉದ್ಘಾಟಿಸಲಾಗುವುದು. ಈ ಅಧ್ಯಯನ ಕೇಂದ್ರವು ಕಹೇರ್ ಮತ್ತು ಟಿಜೆಯು ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗ ಹೆಚ್ಚಿಸಲಿದೆ. ಟಿಜೆಯು ಇಟಲಿ, ಐಲರ್ೆಂಡ್ ಮತ್ತು ಇಸ್ರೇಲ್ ಜೊತೆಗೆ ವಿದೇಶಗಳಲ್ಲಿ ಸ್ಥಾಪಿಸುವ ನಾಲ್ಕು ಕೇಂದ್ರಗಳಲ್ಲಿ ಒಂದಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕಂಕಣವಾಡಿ ಆಯುವರ್ೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ನೇಲರ್ಿ, ಜೆಎನ್ಎಂಸಿಯ ಡಾ.ಶ್ರೀನಿವಾಸಪ್ರಸಾದ ಗೌಡರ, ಡಾ.ಬಾಪುಗೌಡ ಇತರರು ಇದ್ದರು.