ಲೋಕದರ್ಶನ ವರದಿ
ಬೆಳಗಾವಿ 06: ಡಾ.ಶಿಲ್ಪಾ ಕೋಡಕಣಿ ಸುಪರ್ ಸ್ಪೆಶಾಲಿಟಿ ಐ ಸೆಂಟರ್ ಅಯೋಧ್ಯಾ ನಗರದ ಶಾಖೆಯ ಪ್ರಥಮ ವಾಷರ್ಿಕೋತ್ಸವ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರ ಫೆ.9ರಂದು ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಪ್ರಮುಖ ಸಲಹೆಗಾರರು ಮತ್ತು ಮೆಡಿಕಲ್ ಡೈರೆಕ್ಟರ್ ಡಾ. ಶಿಲ್ಪಾ ಕೋಡಕಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ರೋಟರಿಯನ್ ಡಾ.ಗಿರೀಶ ಮಾಸೂರಕರ, ಏಕಸ್ ಎಂಡಿ, ಸಿಇಓ ರಾಜೀವ ಕೌಲ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ವೇಳೆ ಗ್ಲುಕೋಮಾ ಮತ್ತು ಡಯಾಬೆಟಿಕ್ ರೆಟಿನೋಪಥಿಯಂಥ ಪರಿಸ್ಥಿತಿ ನಿರ್ವಹಿಸುವಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದ ಸಿಬ್ಬಂದಿ ಹಾಗೂ ರೋಗಿಗಳನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
20 ವರ್ಷಗಳಿಂದ ನೇತ್ರಚಿಕಿತ್ಸೆಯಲ್ಲಿ ತನ್ನದೇ ಆದ ಹೆಸರು ಗಳಿಸಿರುವ ಕೋಡಕಣಿ ನೇತ್ರ ಕೇಂದ್ರ ಹಲವಾರು ಉಲ್ಲೇಖನೀಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಅತ್ಯಾಧುನಿಕ ಸಲಕರಣೆ ಹೊಂದಿರುವ ಸುಪುರ್ ಸ್ಪೆಶಾಲಿಟಿ ಆಸ್ಪತ್ರೆ ನೇತ್ರಕ್ಕೆ ಸಂಬಂಧಿಸಿದ ಎಲ್ಲ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದೆ. ಬೆಳಗಾವಿಯಲ್ಲಿ ಪ್ರಥಮವಾಗಿ ಝೆಪ್ಟೂ ಕೆಟರೆಕ್ಟ್ ಶಸ್ತ್ರಕ್ರಿಯೆ ನಡೆಸಿದ ಖ್ಯಾತಿ ಆಸ್ಪತ್ರೆಗೆ ಸಲ್ಲುತ್ತದೆ. ನೇತ್ರ ವ್ಯಾಯಾಮ ಒಳಗೊಂಡ ಬಾಲನೇತ್ರರೋಗ ಚಿಕಿತ್ಸೆ, ತಜ್ಞರಿಂದ ಕಣ್ಣಿನಲ್ಲಿಯ ಪರದೆಗಳ ಶಸ್ತ್ರಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆ ವತಿಯಿಂದ ಲೈವ್ ಕಾನರ್ಿಯಲ್ ಶಸ್ತ್ರ ಚಿಕಿತ್ಸೆ, ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಗಾರ, ಏರ್ಪಡಿಸಲಾಗಿತ್ತು. 200ಕ್ಕೂ ಹೆಚ್ಚು ಪ್ರಮುಖ ತಜ್ಞರು ಪಾಲ್ಗೊಂಡಿದ್ದರು. ಉಚಿತ ನೇತ್ರ ತಪಾಸಣೆ ಶಿಬಿರಗಳನ್ನು ಏರ್ಪಡಿಸಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಶ್ರೀಪಾದ ಕುಲಕಣರ್ಿ, ಡಾ.ಆನಂದ ಪುರಾಣಿಕಮಠ, ರಾಜು ಬೆಳಗಾಂವಕರ, ಕೀತರ್ಿ ನೇಲರ್ಿಕರ ಉಪಸ್ಥಿತರಿದ್ದರು.