ಡಾ. ಕವಿತಾ ಮಿಶ್ರಾ ಕೃಷಿ ಸೇವಾಗೌರವ ಪ್ರಶಸ್ತಿ
ಡಾ. ಕವಿತಾ ಮಿಶ್ರಾ ಗಣಕಯಂತ್ರ ವಿಷಯದ ಮೇಲೆ ಇಂಜೀನೀಯರಿಂಗ ಓದಿ ಮನೋ ವಿಜ್ಞಾನ ವಿಷಯ ಕುರಿತು ಎಂ. ಎ ಪದವಿ ಪಡೆದುಕೊಂಡು ಕೆಲವು ವರ್ಷಗಳ ಕಾಲ ನೌಕರಿ ಮಾಡಿ ಅದನ್ನು ತ್ಯಜಿಸಿ ಕೃಷಿಯತ್ತ ಮುಖ ಮಾಡಿ ಆಧುನಿಕ ತಂತ್ರಜ್ಞಾನ ಮತ್ತು ತಂತ್ರಾಂಶಗಳನ್ನು ಒಗ್ಗೂಡಿಸಿ ಕೊಂಡು ಬಂಜರು ಭೂಮಿಯನ್ನು ಹಸಿರು ಭೂಮಿಯನ್ನಾಗಿ ಪರಿವರ್ತಿಸಿಕೊಂಡು ಭೂಮಿಗೆ ಹೊಸ ಚೈತನ್ಯವನ್ನು ನೀಡಿದಕವಿತಾ ಮಿಶ್ರಾ ಕೃಷಿ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಬೇಕೆಂಬ ಛಲದೊಂದಿಗೆ ಮನಸ್ಸಿದ್ದಲ್ಲಿ ಮಾರ್ಗ ಎಂಬಂತೆ ದಿಟ್ಟ ಹೆಜ್ಜೆ ಇಟ್ಟ ಮಹಿಳೆಯಾಗಿದ್ದಾರೆ.
ನೀರಾವರಿ ಮೂಲಕ ಎಲ್ಲತರದ ಫಸಲುಗಳನ್ನು ಬೆಳೆಯುತ್ತಾ ಸಾವಯವ ಕೃಷಿಗೆ ಮಹತ್ವವನ್ನು ಕೊಡುತ್ತಾ ಸಾವಯವ ಗೊಬ್ಬರ ತಯಾರಿಕೆಯೊಂದಿಗೆ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದರು. ಆಡು ಮುಟ್ಟದ ತಪ್ಪಲಿಲ್ಲ ಸರ್ವಜ್ಞ ಹೇಳದ ವಿಷಯವಿಲ್ಲ ಎಂಬಂತೆ ಕವಿತಾ ಮಿಶ್ರಾ ಎಲ್ಲತರದ ಹಣ್ಣು ಹಂಪಲುಗಳ ಬೆಳೆಗಳನ್ನು ಬೆಳೆಯುವುದಲ್ಲದೆ ನಾನಾ ತರದ ಸಸಿಗಳನ್ನು ಹಚ್ಚಿ ಮರಗಳನ್ನಾಗಿ ಬೆಳೆಸಿ ಹಸಿರು ವಲಯ ನಿರ್ಮಿಸುವಲ್ಲಿ ಪ್ರಯತ್ನ ಅಭಿನಂದನೀಯ ಮತ್ತು ಅನುಕರಣೀಯವಾಗಿದೆ. ಕೃಷಿ ಕ್ಷೇತ್ರದಲ್ಲಿ ಇವರು ಮಾಡಿದ ಜೀವಮಾನ ಸಾಧನೆಗಾಗಿ ವಿಜಯ ನಗರ ಜಿಲ್ಲೆಯ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿಅವರನ್ನು ಗೌರವಿಸಿದೆ. ಮೂಲತಃ ಧಾರವಾಡ ಅಗ್ನಿ ಹೋತ್ರಿ ಮನೆತನದ ಮಗಳಾದ ಕವಿತಾ ರಾಯಚೂರ ಜಿಲ್ಲೆಯ ಕವಿತಾಳ ಗ್ರಾಮದ ಉಮಾಶಂಕರ ಮಿಶ್ರಾ ವಿವಾಹವಾಗಿ ಉತ್ತಮ ಗೃಹಿಣಿಯಾಗಿಯೂ ಕೃಷಿ ತಜ್ಞರಾಗಿ ಧಾರವಾಡಕ್ಕೆ ಹೆಸರುತಂದಿದ್ದಾರೆಎಂಬುದು ಹೆಮ್ಮೆಯ ಸಂಗತಿ.ಇವರ ಸಾಧನೆಯನ್ನೂ ಗಮನಿಸಿ ಬೆಲ್ಲದ ಕೃಷಿ ಮತ್ತು ಶಿಕ್ಷಣ ಪ್ರತಿಷ್ಠಾನ ದ ಕೃಷಿ ಸೇವಾ ಗೌರವ ಪ್ರಶಸ್ತಿಯನ್ನು ದಿನಾಂಕ 23-03-2025 ರಂದುಕರ್ನಾಟಕ ವಿದ್ಯಾವರ್ಧಕ ಸಂಘವು ನೀಡಿಗೌರವಿಸುತ್ತಿದೆ.