ಡಾ.ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ ಪ್ರದಾನ” ಕಾರ‌್ಯಕ್ರಮ

Dr. Gurulinga Kapase Literary Award Presentation” program

ಡಾ.ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ ಪ್ರದಾನ” ಕಾರ‌್ಯಕ್ರಮ

ಧಾರವಾಡ 01: ಕರ್ನಾಟಕ ವಿದ್ಯಾವರ್ಧಕ ಸಂಘವು, ಡಾ. ಗುರುಲಿಂಗ ಕಾಪಸೆ ದತ್ತಿಉದ್ಘಾಟನೆಅಂಗವಾಗಿ ದಿನಾಂಕ: 2-4-2025 ರಂದು ಬುಧವಾರ ಸಂಜೆ 6 ಗಂಟೆಗೆ ಸಂಘದ ನಾಡೋಜಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿಡಾ.ಗುರುಲಿಂಗ ಕಾಪಸೆ ಅವರಅನುವಾದಿತಕೃತಿ ‘ಶ್ರೀಮಾತಾ’ ಬಿಡುಗಡೆ ಮತ್ತು “ಡಾ.ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ ಪ್ರದಾನ” ಕಾರ‌್ಯಕ್ರಮ ಏರಿ​‍್ಡಸಿದೆ.ಗದುಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯ ಮತ್ತು ಪ್ರಶಸ್ತಿ ಪ್ರದಾನ ಮಾಡುವರು.ಧಾರವಾಡದ ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮತ್ತು ಬೆಂಗಳೂರಿನ ಹಿರಿಯ ಸಾಹಿತಿ ಪ್ರೊ. ಎಸ್‌. ಜಿ. ಸಿದ್ಧರಾಮಯ್ಯ ಅವರಿಗೆ“ಡಾ.ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಗುವುದು.ಧಾರವಾಡದ ಪ್ರಾಧ್ಯಾಪಕಿ ಪ್ರೊ.ಪ್ರಜ್ಞಾ ಮತ್ತಿಹಳ್ಳಿ ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡುವರು. 

ಧಾರವಾಡದ ವಿಶ್ರಾಂತ ಪ್ರಾಧ್ಯಾಪಕಡಾ.ಎಸ್‌. ಕೆ. ಕೊಪ್ಪ‘ ಅನುಭಾವಿ ಹಾಗೂ ಚಿಂತನಶೀಲ ಸಾಹಿತಿ: ಡಾ. ಗುರುಲಿಂಗ ಕಾಪಸೆ’ ವಿಷಯ ಕುರಿತು ಉಪನ್ಯಾಸ ನೀಡುವರು.ಧಾರವಾಡದ ಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷಡಾ.ವೀರಣ್ಣರಾಜೂರ ಸಮಾರಂಭದ ಅಧ್ಯಕ್ಷತೆ ವಹಿಸುವರು.ಚಂದ್ರಶೇಖರ ಕಾಪಸೆ, ಡಾ.ಬಸವರಾಜ ಸಾದರ, ಡಾ.ಶಾಂತಾ ಇಮ್ರಾಪೂರ, ಡಾ.ಚಿದಾನಂದ ಸಿದ್ಧಾಶ್ರಮ, ಪ್ರೊ. ಜಿ. ಎ. ತಿಗಡಿ ಉಪಸ್ಥಿತರಿರುವರು.  

ಡಾ. ಗುರುಲಿಂಗ ಕಾಪಸೆ 


1928ರ ಏಪ್ರಿಲ್ 2 ರಂದು ವಿಜಾಪುರಜಿಲ್ಲೆಇಂಡಿತಾಲೂಕಿನ ಹಿರೇಲೋಣಿಯಲ್ಲಿ ಜನಿಸಿದ ಗುರುಲಿಂಗ ಕಾಪಸೆ ಅವರು, ಎಂ.ಎ. ಪಿಎಚ್‌.ಡಿ.,ಡಿಪ್ಲೊಮಾಇನ್‌ಎಪಿಗ್ರಾಫಿ ಪೂರೈಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿಪ್ರವಾಚಕರಾಗಿ, ಕ.ವಿ.ವಿ ಬೆಳಗಾವಿ ಸ್ನಾತಕೋತ್ತರಕೇಂದ್ರದ ಆಡಳಿತಾಧಿಕಾರಿಯಾಗಿ ಮತ್ತುಧಾರವಾಡದ ಹುರಕಡ್ಲಿಅಜ್ಜ ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಕೆಲಸ ಮಾಡಿದ್ದಾರೆ.ಕನ್ನಡದ ಪ್ರಾಚೀನ ಸಾಹಿತ್ಯದಿಂದ ಹಿಡಿದು, ಹೊಸಗನ್ನಡ ವಿವಿಧ ಘಟ್ಟಗಳ ಮೆರಗಿನಎಲ್ಲ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವಡಾ.ಗುರುಲಿಂಗ ಕಾಪಸೆ ಅವರು, ಬಹಳ ಮುಖ್ಯವಾಗಿಕನ್ನಡಅನುಭಾವ ಸಾಹಿತ್ಯ ಪರಂಪರೆಯ ಬಗ್ಗೆ ವಿಶೇಷ ಗಮನ ಹರಿಸಿದವರು.ಶ್ರೀ ಅರವಿಂದರು, ಶ್ರೀಮಾತಾಜಿ ಅವರು, ಮಧುರಚೆನ್ನರು ಮತ್ತು ಬಸವಾದಿ ಶರಣರುಅವರಅಂತರಂಗವನ್ನು ಬೆಳಗಿದ ಮಾಹಾಚೇತನರು.ಶುದ್ಧ ಸಾತ್ವಿಕ ಸ್ವಭಾವದಡಾ.ಗುರುಲಿಂಗ ಕಾಪಸೆ ಅವರುಅಂತರಂಗದ ಅನುಭಾವಿಗಳಾಗಿ ಸಾಧನೆ ಮಾಡಿದವರು.ತಮ್ಮಅಪಾರ ಓದಿನಿಂದದಕ್ಕಿದಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುವಲ್ಲಿಯೇಅವರು ವೃತ್ತಿಜೀವನದಲ್ಲಿ ನೆಮ್ಮದಿ ಕಂಡಿದ್ದಾರೆ. ಡಾ. ಗುರುಲಿಂಗ ಕಾಪಸೆ ಅವರು ಹೆಚ್ಚು ಗ್ರಂಥಗಳನ್ನು ಬರೆದಿಲ್ಲವಾದರೂ, 'ನನ್ನ ವಿದಾರ್ಥಿಗಳೇ ನಾನು ಬರೆದ ಸಾವಿರಾರು ಗ್ರಂಥಗಳು' ಎಂಬ ಸಂತೃಪ್ತಿ ಹೊಂದಿದವರು. 'ಮಧುರಚೆನ್ನ' ಪಿಎಚ್‌.ಡಿ.ಪ್ರಬಂಧ, 13 ಸ್ವತಂತ್ರ ಕೃತಿಗಳು, 17 ಸಂಪಾದನೆಗಳು, 3 ಅನುವಾದಿತ ಗ್ರಂಥಗಳು-ಹೀಗೆ ಅವರ ಸಾಹಿತ್ಯರಾಶಿ ವಿಪುಲವಾಗಿಯೇಇದೆ.ಕೇಳುವ ಎಲ್ಲ ಮನಸ್ಸುಗಳಿಗೂ ಅರಿವಿನ ಬೆಳಕು ಮೂಡಿಸುವ ವಾಗಿ ಅವರಾಗಿದ್ದಾರೆ. 

ಕರ್ನಾಟಕ ಸಾಹಿತ್ಯಅಕಾಡೆಮಿಯಅಧ್ಯಕ್ಷತೆಯನ್ನೂ ಒಳಗೊಂಡಂತೆ ಹಲವಾರು ಸಂಘ-ಸಂಸ್ಥೆಗಳ ನೇತೃತ್ವ ವಹಿಸಿ, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದಕಾರ್ಯ ಮಾಡಿದಅವರಿಗೆಕೇಂದ್ರ ಸಾಹಿತ್ಯಅಕಾಡೆಮಿಯ ಪ್ರಶಸ್ತಿಯನ್ನೂ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಸಂದಿವೆ.95 ವಸಂತಗಳನ್ನು ಪೂರೈಸುತ್ತಿರುವಇಂಥ ಸಾಧಕರನ್ನು, ಪ್ರೀತಿಯಿಂದಗೌರವಿಸುವ ಈ 'ಸಾಧನಾ ಸಮ್ಮಾನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇದೇ ಸಂದರ್ಭದಲ್ಲಿಅವರ ಪ್ರೀತಿಯ ವಿದ್ಯಾರ್ಥಿಡಾ.ಬಸವರಾಜ ಸಾದರ ಸಂಪಾದಿಸಿದ, ಡಾ.ಗುರುಲಿಂಗ ಕಾಪಸೆ ಅವರ ಸ್ವತಂತ್ರ ಕೃತಿಗಳ ಸಂಪಾದನೆ 'ನೋಂಪಿವಲಯ' ಎಂಬ ಗ್ರಂಥವನ್ನುಅವರಿಗೆ ಸಮರ​‍್ಿಸಲಾಗುತ್ತಿದೆ. 

ದಣಿವರಿಯದೆ ನಿರಂತರವಾಗಿ ಸಾಹಿತ್ಯಕೃಷಿಗೈದಅನುಭಾವಿ ಡಾ.ಗುರುಲಿಂಗ ಕಾಪಸೆ ಅವರು ದಿನಾಂಕ 27-3-2024 ರಂದು ನಮ್ಮನ್ನಗಲಿದರು.ಇಂಥ ಹಿರಿಯ ಸಾಧಕ-ಸಾಹಿತಿಯ ಸ್ಮರನಾರ್ಥವಾಗಿಅವರ ವಿದ್ಯಾರ್ಥಿಗಳು, ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ 11,21,111 ರೂಪಾಯಿಗಳ ಮೊತ್ತದದತ್ತಿಯನ್ನು ಸ್ಥಾಪಿಸಿದ್ದಾರೆ. ಇದರಿಂಧ ಪ್ರತಿವರ್ಷ ಬರುವ ಬಡ್ಡಿಯ ಹಣದಲ್ಲಿಕನ್ನಡದಇಬ್ಬರು ಮಹತ್ವದ ಸಾಹಿತಿಗಳಿಗೆ ತಲಾರೂ, 25,500/-ರೂಪಾಯಿಗಳ ಪ್ರಶಸ್ತಿಯನ್ನು ಕ.ವಿ.ವಿ.ಯ ಎಂ.ಎ. ಕನ್ನಡಓದುತ್ತಿರುವಒವಬ್ಬ ವಿದ್ಯಾರ್ಥಿಗೆ ಹಾಗೂ 5,100/- ರೂಪಾಯಿಗಳ ವಿದ್ಯಾರ್ಥಿ ಪಾರಿತೋಷಕವನ್ನುಕೊಡಮಾಡಲಾಗುತ್ತದೆ.2025ನೆಯ ಸಾಲಿನ ಡಾ.ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿಗಳನ್ನು ಹಿರಿಯ ಸಾಹಿತಿಗಳಾದ ಪ್ರೊ.ಮಾಲತಿ ಪಟ್ಟಣಶೆಟ್ಟಿ ಹಾಗೂ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಅವರಿಗೆ ಪ್ರದಾನ ಮಾಡಲುಕರ್ನಾಟಕ ವಿದ್ಯಾವರ್ಧಕ ಸಂಘದಆಯ್ಕೆ ಸಮಿತಿಯು ನಿರ್ಧರಿಸಿದೆ.