ಡಾ.ಎಚ್‌.ಬಿ.ನಡುವಿನಕೇರಿಗೆ ಡಾ.ದ.ರಾ.ಬೇಂದ್ರೆ ಸದ್ಭಾವನಾ ಸೇವಾ ರತ್ನ ಪ್ರಶಸ್ತಿ

Dr. D. R. Bendre Goodwill Seva Ratna Award to Dr. H. B. Naduvinakeri

ತಾಳಿಕೋಟಿ 11: ಪಟ್ಟಣದ ಎಚ್‌.ಎಸ್‌.ಪಾಟೀಲ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ, ಸಾಹಿತಿ ಡಾ.ಎಚ್‌.ಬಿ.ನಡುವಿನಕೇರಿ ಇವರಿಗೆ ಶ್ರೀ ಸೂಜ್ಞಾನ ವಿದ್ಯಾಪೀಠ ಮತ್ತು ಸಂಸ್ಕೃತಿಕ ರಂಗ ಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ (ರಿ)  ಕರ್ನಾಟಕ ಹಗರಿಬೊಮ್ಮನಹಳ್ಳಿ ಇವರು ಕೊಡಮಾಡುವ 2024 -25 ನೇ ಸಾಲಿನ ಡಾ.ದ.ರಾ.ಬೇಂದ್ರೆ ಸದ್ಭಾವನಾ ಸೇವಾ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.