ಡಾ.ಬಿ.ಆರ್‌. ಅಂಬೇಡ್ಕರ್ ಸರ್ವ ಜನಾಂಗದ ನಾಯಕ: ಆಕಳವಾಡಿ

Dr. B.R. Ambedkar is a leader of all races: Akalwadi

ದೇವರಹಿಪ್ಪರಗಿ 13: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಜಾತಿ, ಧರ್ಮಕ್ಕೆ ಸೀಮಿತರಾಗದೇ ಸರ್ವ ಜನಾಂಗದ ನಾಯಕರಾಗಿದ್ದಾರೆ. ಎಲ್ಲಾ ವರ್ಗದ ಜನರು ಕೂಡಿಕೊಂಡು ಅವರ ಜಯಂತಿಯನ್ನು ಆಚರಿಸೋಣ ಎಂದು ಯುವ ಮುಖಂಡರಾದ ಗುರುರಾಜ ಆಕಳವಾಡಿ ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರದಂದು ನಡೆದ ಡಾ.ಬಿ.ಆರ್‌. ಅಂಬೇಡ್ಕರವರ 134ನೇ ಜಯಂತಿಯ ಪೂರ್ವಭಾವಿ ಸಭೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಡಾ. ಬಿ.ಆರ್‌.ಅಂಬೇಡ್ಕರ್ ಅವರ ಜಯಂತಿಯನ್ನು ಕೇವಲ ದಲಿತರಿಂದ ಮಾತ್ರವಲ್ಲದೇ ಸರ್ವ ಸಮಾಜದ ಸರ್ವ ಜನರಿಂದ ಆಚರಿಸುವಂತಾಗಬೇಕು ಎಂಬುದು ಎಲ್ಲ ಜನತೆಯ ಆಶಯವಾಗಿದೆ. ಈ ಬಾರಿ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ವೈಭವೋಪೇರಿತವಾಗಿ ಅರ್ಥಪೂರ್ಣವಾಗಿ ಯಾರೋಬ್ಬರ ನೇತೃತ್ವದಲ್ಲಿ ಮಾಡದೇ ಸಾಮೂಹಿಕ ನಾಯಕತ್ವದಲ್ಲಿ ಆಚರಿಸೋಣ ಎಂದರು. 

ಸಭೆಯ ಅಧ್ಯಕ್ಷತೆಯನ್ನು ಮುಖಂಡರಾದ ಕಾಶಿನಾಥ ತಳಕೇರಿ ವಹಿಸಿ ಮಾತನಾಡಿದ ಅವರು,ಇಲ್ಲಿ ಯಾರೊಬ್ಬರ ವೈಯಕ್ತಿಕ ಹಿತಾಸಕ್ತಿಗೆ ಮಣಿಯದೇ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಕ್ಕೆ ಮಾತ್ರ ಅವಕಾಶವಿದೆ. ಅಂಬೇಡ್ಕರ್ ಅವರ ಜಯಂತಿ ಆಚರಣೆಗಷ್ಟೇ ಸೀಮಿತವಾಗಿರದೆ ಪ್ರತಿ . ಎಲ್ಲ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಏಪ್ರಿಲ್‌- 20ರಂದು ಬೆಳಿಗ್ಗೆ 11:00 ಗಂಟೆಗೆ ಮೆರವಣಿಗೆ ಪ್ರಾರಂಭವಾಗಲಿದೆ, ಸಾಯಂಕಾಲ 5:00 ಗಂಟೆಗೆ ಪಟ್ಟಣದ ಬಿ.ಎಲ್‌.ಡಿ.ಇ ಸಂಸ್ಥೆಯ ಹಳೆ ಶಾಲಾ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದ್ದು ಜಯಂತೋತ್ಸವ ಅದ್ದೂರಿಯಾಗಿ ಆಚರಿಸೋಣ. 

ಜ್ಯಾತ್ಯಾತೀತವಾಗಿ, ಧರ್ಮಾತೀತವಾಗಿ ಜನರಿಗೆ ಸಂವಿಧಾನದ ಆಶಯ ತಿಳಿಸುವುದಾಗಿದೆ ಎಂದರು.ಸಂದರ್ಭದಲ್ಲಿ ಮುಖಂಡರಾದ ರಾಜು ಮೇಟಗಾರ,ಜಾನು ಗುಡಿಮನಿ, ಪ್ರಕಾಶ ಮಲ್ಹಾರಿ,ಅರವಿಂದ ನಾಯ್ಕೋಡಿ, ರಹಿಮಾನ್ ಕನಕಲ್, ಪ್ರಶಾಂತ  ಹಾಗೂ ಡಿ.ಕೆ. ದೊಡ್ಡಮನಿ ಅವರು ಮಾತನಾಡಿ, ನಾವೆಲ್ಲರೂ ಕೂಡಿ ಮುನಿಕೊಂಡಿರುವ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ಮಾಡಬೇಕು.  

ಈ ಬಾರಿ ಜಯಂತಿ ವಿಶಿಷ್ಟವಾಗಿ ಆಚರಣೆ ಮಾಡೋಣ. ಸದ್ಯಜನರ ಮನಸ್ಸಿನಲ್ಲಿ ದ್ವಂದ ನಿಲುವು ಇರುವುದರಿಂದ ಅದನ್ನು ಕೊನೆಗಾಣಿಸಿ ಎಲ್ಲರೂ ಸೇರಿ ಒಂದೆ ಜಯಂತಿಯನ್ನು ಆಚರಣೆ ಮಾಡುವಂತಾಗಬೇಕು. ಸಮಾಜದ ವಿಷಯ ಬಂದಾಗ ಸ್ವಪ್ರತಿಷ್ಠೆ, ಸ್ವಾರ್ಥ ಬದಿಗಿಟ್ಟು ಒಂದಾಗಬೇಕು.ಅಂಬೇಡ್ಕರ್ ಅವರ ಚಿಂತನೆಗಳಿಗೆ ಬೆಲೆ ಕೋಡಬೇಕೇ ವಿನಹಃ ವೈಯಕ್ತಿಕ ಹಿತಾಸಕ್ತಿಗಲ್ಲ ಎನ್ನುವ ಅಭಿಮತ ವ್ಯಕ್ತಡಿಸಿದರು.ಈ ವೇಳೆ ಡಿಎಸ್‌ಎಸ್ ಸಂ.ಸಂಚಾಲಕರಾದ ಮಾಂತೇಶ್ ಕುಟನೂರ, ಸಂಚಾಲಕರಾದ ಸುಭಾಷ ನಾಟಿಕಾರ,ನಬಿ ಮೊಮೀನ,ದೇವು ಬನಸೊಡೆ, ಸಿದ್ದು ,ಪ್ರಕಾಶ ಹರನಾಳ, ಅರುಣಕುಮಾರ ಕೋರವಾರ, ರಾಘವೇಂದ್ರ ಗುಡಿಮನಿ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.