ಜಮಖಂಡಿ 28: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕನಸು ನನಸು ಮಾಡಬೇಕಾದರೆ ಹೆತ್ತ ತಂದೆ, ತಾಯಿಯಂದಿಯರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲಿಸಿದರೆ ಮಾತ್ರ ಕನಸು ನನಸು ಮಾಡಲು ಸಾಧ್ಯವಾಗುತ್ತದೆಂದು ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷೆ ವಾಣಿ ಕೆ, ಶಿವರಾಂ ಹೇಳಿದರು.
ನವನಗರದಲ್ಲಿ ಡಾ,ಬಿ,ಆರ್, ಅಂಬೇಡ್ಕರ್ ಭವನದಲ್ಲಿ ನಡೆದ ಛಲವಾದಿ ಮಹಾಸಭಾ ರಾಜ್ಯ ಸಮಿತಿ ಹಾಗೂ ಜಿಲ್ಲಾ ಘಟಕ ಸಹಯೋಗದಲ್ಲಿ ಡಾ,ಬಿ,ಆರ್,ಅಂಬೇಡ್ಕರ್ ಅವರ 134 ನೇ ಜಯಂತಿಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ,ಬಿ,ಆರ್,ಅಂಬೇಡ್ಕರ್ ಅವರ ಕನಸು ನನಸು ಮಾಡಲು ನಾವುಗಳು ಯಾರು ಮುಂದಾಗುತ್ತಿಲ್ಲ. ಕತ್ತಲಿನಿಂದ ಬೆಳಕಿನ ಕಡೆಗೆ ನಮ್ಮನ್ನು ತಂದು ನಿಲಿಸಿದ್ದಾರೆ ಎಂದರೆ ಅವರು ಕೊಟ್ಟ ಕೊಡುಗೆ ಅಪಾರವಾಗಿದೆ. ಅವರು ಭೂಮಿ ಮೇಲೆ ಜನ್ಮ ತಾಳದ್ದಿದರೆ ನಾವುಗಳು ಯಾರು ಬದುಕಲು ಸಾಧ್ಯವಾಗುತ್ತಿರಲ್ಲಿಲ್ಲ. ಪ್ರತಿಯೊಬ್ಬರು ಸಂಪಾದನೆ ಮಾಡಬೇಕಾದರೆ ಎಲ್ಲರು ವಿದ್ಯಾವಂತರನಾಗಿ ಮಾಡಬೇಕು. ಮಕ್ಕಳಿಗೆ ವಿದ್ಯೆಯನ್ನು ಕಲಿಸಬೇಕು. ಅವಾಗ ಜ್ಞಾನ ಬೆಳಗುತ್ತದೆ. ಜ್ಞಾನದಿಂದ ಹೋರಾಟ, ಸಂಘಟನೆಯ ಮೂಲಕ ಸಮಾಜ ಗಟ್ಟಿಯಾಗಲು ಸಾಧ್ಯ ಎಂದರು.
ನಮ್ಮ ದೇಶಕ್ಕೆ ಸಂವಿಧಾನವನ್ನು ನೀಡಿದ್ದಾರೆ. ಪ್ರತಿಯೊಬ್ಬರು ಅದನ್ನು ಓದಿ ತಿಳಿದುಕೊಳ್ಳಬೇಕಾಗಿದೆ. ಸಂವಿಧಾನವನ್ನು ಎಲ್ಲರೂ ರಕ್ಷಣೆ ಮಾಡಬೇಕು. ಎಲ್ಲರಲ್ಲೂ ಸಮಾನತೆ, ಗೌರವದಿಂದ ಒಂದಾಗಬೇಕು. ಒಬ್ಬರನೊಬ್ಬರನ್ನು ನೋಡಿದರೆ ಸಹಿಕೊಳ್ಳದ ನಮ್ಮ ಜನ ಎಲ್ಲರು ಒಗ್ಗಟಾಗಿ ಒಂದಾಗುವ ಮನೊಭಾವ ಬೆಳಸಿಕೊಳ್ಳಬೇಕು. ನಮ್ಮ ಯಜಮಾನರಾದ ಕೆ,ಶಿವರಾಂ ಅವರು ಶ್ರಮಪಟ್ಟು ಕಟ್ಟಿರುವ ಸಂಘಟನೆಯನ್ನು ಬಲ ಪಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕರೆಯನ್ನು ನೀಡಿದರು.
ಜಿಲ್ಲಾಧಿಕಾರಿ ಜಾನಕಿ ಕೆ,ಎಮ್, ಅವರು ಮಾತನಾಡಿ, ಪ್ರಬುದ್ಧ ಭಾರತ ನಿರ್ಮಾಣ ಮಾಡಬೇಕು. ಬಡವರ ಕನಸು ನನಸು ಮಾಡಬೇಕು ಎಂದು ಕನಸು ಕಂಡಿದ್ದರು ಡಾ,ಬಾಬಾಸಾಹೇಬ ಅಂಬೇಡ್ಕರ್ ಅವರು. ನಾವುಗಳು ಅವರ ಆದರ್ಶಗಳನ್ನು ನಮ್ಜ ಜೀವನದಲ್ಲಿ ಅಳವಡಿಸಿಕೊಂಡಿದೆವಾ ಎಂದು ಪ್ರಶ್ನಿಸಿದರು. ಸಮಾಜಕ್ಕೆ ನಮ್ಮ ಕೊಡುಗೆ ಎನ್ನು ಎಂಬುವದನ್ನು ಮೊದಲು ತಿಳಿದುಕೊಳ್ಳಬೇಕು. ಕೇವಲ ಭಾಷಣದಲ್ಲಿ. ಹಾಡುಗಳನ್ನು ಹಾಡುವಲ್ಲಿ, ಪೂಜೆಯನ್ನು ಸಲಿಸಿದ್ದರೆ ಸಾಲದು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದು ಬಹಳ ಮುಖ್ಯವಾಗಿದೆ. ಅವರೊಬ್ಬರು ಇಡೀ ವಿಶ್ವದ ಚೇತನರಾಗಿದ್ದಾರೆ. ಒಂದು ಸಾವಿರ ವರ್ಷಗಳ ಕಾಲ ನೀಲಿ ನಕ್ಷೆ ತೆಗೆದು ಹೋಗಿದ್ದಾರೆ. ಬರಹ, ಬದುಕು, ಜೀವನ ಬಗ್ಗೆ ಬಹಳ ತಿಳಿದುಕೊಂಡಿದರು.ಅವರ ಚರಿತ್ರೆಯನ್ನು ನಾವುಗಳು ತಿಳಿದುಕೊಳ್ಳಬೇಕು. 380 ದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿದವರು. ಎಲ್ಲವನ್ನು ತಿಳಿದುಕೊಂಡವರು ಆಗಿದರು ಎಂದರು.
ನಕಾರಾತ್ಮಕವಾಗಿ ಇರುವದರ ಬಗ್ಗೆ ಸಕಾರಾತ್ಮಕ ಆಗಬೇಕು. ತಿಳುವಳಿಕೆ ಬಡವರಲ್ಲಿ ಹೆಚ್ಚು ಇರುತ್ತದೆ. ಶ್ರೀಮಂತರಲ್ಲಿ ಹಣ ಹೆಚ್ಚು ಇರುತ್ತದೆ. ಶೋಷಣೆಗೆ, ನೊಂದವರಿಗೆ ಮಾತ್ರ ಸೀಮಿತರ ಅಲ್ಲ. ಎಲ್ಲರಿಗೂ ಚೇತನರಾಗಿದ್ದಾರೆ. ಅಂಬೇಡ್ಕರ್ ಅವರ ಜೀವನ ಚರಿತ್ರೆ ತಿಳಿದುಕೊಳ್ಳಲು ಯಾವುದೇ ಅಡಚಣೆ ಇರುವುದಿಲ್ಲ. ನಾವು ಬದಲಾವಣೆಯಾದರೆ ನಮ್ಮ ಮನೆಯ ಬದಲಾವಣೆ ಆಗುತ್ತದೆ. ಅವರ ಜ್ಞಾನದ ರಥವನ್ನು ಮುಂದೆ ನಡೆಸುವ ಕೆಲಸ ಮಾಡಬೇಕು. ಭಾರತದ ಹೆಮ್ಮೆಯ ಪುತ್ರ ಎಂದರೆ ಸುಮ್ಮನೆ ಅಲ್ಲ ಅವರು ದೇಶದ ಚೇತನರಾಗಿದ್ದಾರೆ ಅವರ ಜೀವನ ಚರಿತ್ರೆ ನಮ್ಮಲ್ಲಿ ಅಳವಡಿಸಿಕೊಂಡರೆ ಮಾತ್ರ ಅವರಿಗೆ ಕೊಡುವ ಕೊಡುಗೆ ಅಪಾರವಾಗಿದೆ ಎಂದರು.
ತೋಟಗಾರಿಕೆ ಕುಲಪತಿ ಡಾ, ವಿಷ್ಣುವರ್ಧನ ಅವರು ಮಾತನಾಡಿದರು, ದಮ್ಮಪಾಲ ಬಂತೇಜಿ ಅವರು ಡಾ,ಬಿ,ಆರ್,ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಹಾಗೂ ಬುದ್ದ ನಮನಗಳನ್ನು ಸಲಿಸಿದರು.
ಛಲವಾದಿ ಗುರುಪೀಠದ ಬಸವನಾಗಿದೇವ ಶರಣರು ಆರ್ಶೀವಚನ ನೀಡಿದರು, ವೇದಿಕೆಯಲ್ಲಿ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ವಿವೇಕಾನಂದ ಗರಸಂಗಿ ಇದ್ದರು, ಡಾ,ಪಂಚಶೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಶರಣಪ್ಪ ಬೇವೂರ ನಿರೂಪಿಸಿ, ವಂದಿಸಿದರು,