ಬೆಂಗಳೂರು, ಮೇ 11, ಅಕಾಲಿಕ ನಿಧನ ಹೊಂದಿದ್ದ ರಾಮನಗರದ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಮನೆಗೆ ತೆರಳಿ ಅವರ ಧರ್ಮಪತ್ನಿ ಶಶಿಕಲಾ ಅವರಿಗೆ ಡಾ.ಅಶ್ವಥ್ ನಾರಾಯಣ್ ಫೌಂಡೇಶನ್ ವತಿಯಿಂದ 5 ಲಕ್ಷ ರೂ. ಗಳನ್ನು ನೀಡಿದೆ. ಇವರಿಗೆ ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸಲಾಗುವುದು. ಕುಟುಂಬದ ಈ ಸಂಕಷ್ಟದ ದಿನಗಳಲ್ಲಿ ನಮ್ಮ ಪ್ರಾರ್ಥನೆ ನಿಮ್ಮೊಂದಿಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.ಇಂದು ಬೆಳಗ್ಗೆ ಅಶ್ವತ್ಥನಾರಾಯಣ ಅವರ ಮನೆಗೆ ತೆರಳಿ ಚೆಕ್ ಹಸ್ತಾಂತರಿಸಿದರು. ಕರ್ತವ್ಯದಲ್ಲಿದ್ದಾಗ ಹನುಮಂತು ಅಪಘಾತಕ್ಕೀಡಾಗಿ ನಿಧನರಾಗಿದ್ದರು. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ಗಣ್ಯರು ಹನುಮಂತು ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದಾರೆ.