ವಿಜಯಪುರ 12: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಮತ್ತು ಚರ್ಮರೋಗ ಖ್ಯಾತ ತಜ್ಞ ಡಾ. ಅರುಣ ಚಂ. ಇನಾಮದಾರ ಅವರಿಗೆ ಪ್ರತಿಷ್ಠಿತ ಪ್ರೊ. ಸುರೀಂದರ ಕೌರ ಭಾರತದ ಅತ್ಯುತ್ತಮ ಚಿಕ್ಕ ಮಕ್ಕಳ ಚರ್ಮ ರೋಗ ತಜ್ಞ-2025 ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ದಕ್ಷಿಣ ಅಮೇರಿಕದ ಅಜೆಂರ್ಟಿನಾದ ರಾಜಧಾನಿ ಬ್ಯೂನಸ್ ಐರಿಸ್ ನಲ್ಲಿ ಏ. 7 ರಿಂದ 11ರ ವರೆಗೆ ನಡೆದ 15ನೇ ಅಂತಾರಾಷ್ಟ್ರೀಯ ಮಕ್ಕಳ- ಚರ್ಮ ರೋಗ ತಜ್ಞ ವೈದ್ಯರ ಸಮ್ಮೇಳನದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಾ. ಅರುಣ ಚಂ. ಇನಾಮದಾರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಂತಾರಾಷ್ಟೀಯ ಚಿಕ್ಕ ಮಕ್ಕಳ ಚರ್ಮ ರೋಗ ತಜ್ಞ ವೈದ್ಯರ ಸಂಘದ ಅಧ್ಯಕ್ಷೆ ಮತ್ತು ವಿಶ್ವದ ಅತ್ಯಂತ ಪ್ರಭಾವಿ ಚರ್ಮರೋಗ ವೈದ್ಯೆ ಅಮೇರಿಕದ ಪ್ರೊ. ಏಮಿ ಪ್ಯಾಲರ ಮಾತನಾಡಿ ಡಾ. ಅರುಣ ಚಂ. ಇನಾಮದಾರ ಅವರ ಸೇವೆ ಭಾರತಕ್ಕಲ್ಲದೆ ವಿಶ್ವಕ್ಕೆಲ್ಲ ಹರಡಲಿ ಎಂದು ಶುಭ ಹಾರೈಸಿದರು. ಹಾರೈಸಿದರು. ಸಂಘಟನೆಯ ಸೆಕ್ರೆಟರಿ ಜನರಲ್ ಕುವೈತ್ ನ ಡಾ. ಆರತಿ ನಂದಾ ಮತ್ತು ಅಜೆಂರ್ಟೀನಾದ ಡಾ. ಪೌಲಾ ಲೂನಾ ಮಾತನಾಡಿ ಡಾ. ಅರುಣ ಚಂ. ಇನಾಮದಾರ ಅವರು ಚರ್ಮರೋಗ ವಿಭಾಗಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಅಜೆಂರ್ಟೀನಾದ ಮಾರ್ಗರೀಟಾ ಉಪಸ್ಥಿತರಿದ್ದರು.
ಈ ಸಮ್ಮಳನದಲ್ಲಿ ಒಟ್ಟು ಮೂರು ನಾನಾ ವಿಷಯಗಳ ಕುರಿತು ಪ್ರಬಂಧ ಮಂಡಿಸಿದ ಡಾ. ಅರುಣ ಚಂ. ಇನಾಮದಾರ ಅವರು, ಚಿಕ್ಕ ಮಕ್ಕಳಲ್ಲಿ ಬರುವ ಚಿಕುನಗುನ್ಯಾ ರೋಗ ಮತ್ತು ಚರ್ಮದ ಮೇಲೆ ಅದರ ಪ್ರಭಾವದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಅತೀ ವಿರಳ ರೋಗಗಳನ್ನು ಸರಳ ಕಂಡು ಹಿಡಿಯುವಿಕೆ ಪರೀಕ್ಷಾ ವಿಧಾನ ಬಗ್ಗೆ ಅವರು ಪ್ರಸ್ತುತ ಪಡಿಸಿದ ವಿಚಾರಗಳು ಸಮ್ಮೇಳನಕ್ಕೆ ಆಗಮಿಸಿದ ವೈದ್ಯರ ಪ್ರಶಂಸೆಗೆ ಪಾತ್ರವಾಯಿತು.
ಈ ಸಮ್ಮೇಳನದಲ್ಲಿ ಭಾಗವಹಿಸಿದ ಜಗತ್ತಿನ ನಾನಾ ವಿಶ್ವವಿದ್ಯಾಲಯಗಳ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶೈಕ್ಷಣಿಕ ಮತ್ತು ಸಂಶೋಧನಾ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಆಯಾ ವಿವಿಗಳ ಪ್ರಾಧ್ಯಾಪಕರ ಜೊತೆ ಡಾ. ಅರುಣ ಇನಾಮದಾರ ಚರ್ಚೆ ನಡೆಸಿದರು.
ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ್ದ ಸುಮಾರು 2000ಕ್ಕಿಂತ ಹೆಚ್ಚಿನ ತಜ್ಞವೈದ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.