ವನಜಾಕ್ಷಿ ಗುಗ್ಗರಿ ಅವರಿಗೆ ಪಿ.ಎಚ್ .ಡಿ. ಪದವಿ

ವನಜಾಕ್ಷಿ ಗುಗ್ಗರಿ ಅವರಿಗೆ ಪಿ.ಎಚ್ .ಡಿ. ಪದವಿ Vanajakshi Guggari gets Ph.D. degree

ಆಲಮೇಲ 05: ವಿಜಯಪುರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆಲಮೇಲ ತಾಲ್ಲೂಕಿನ ದೇವರನಾವದಗಿ ಗ್ರಾಮದ ವನಜಾಕ್ಷಿ ಮಹೇಂದ್ರ ಗುಗ್ಗರಿ ಅವರು ಮಂಡಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮತ್ತು ಪಿ.ಲಂಕೇಶ ಅವರ ಕಥನ ಸಾಹಿತ್ಯದಲ್ಲಿ ಮಹಿಳೆ : ವಿಭಿನ್ನ ಆಯಾಮಗಳು" ಎಂಬ ವಿಷಯದ ಮೇಲಿನ ಅವರ ಪಿ.ಎಚ್‌.ಡಿ. ಮಹಾಪ್ರಬಂಧಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಡಾಕ್ಟರೇಟ ಪದವಿ ನೀಡಿ ಗೌರವಿಸಿದೆ.

ಇವರಿಗೆ ಮಹಿಳಾ ವಿವಿಯ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ನಾರಾಯಣ ಬಿ. ಪವಾರ ಅವರು ಮಾರ್ಗದರ್ಶಕರಾಗಿದ್ದರು. ಇವರ ಈ ಸಾಧನೆಗೆ ದೇವರನಾವದಗಿಯ ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಶ್ರೀ ವಾಸುದೇವ ಬಲವಂತ ಫಡಕೆ ವಿವಿಧೋದ್ದೇಶ ಸಂಘ ಹಾಗೂ ಶ್ರೀ ಅಮೋಘಸಿದ್ಧ ಭಕ್ತ ಮಂಡಳಿಯವರು ಅಪಾರ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.