ವಿಜಯಪುರ 16: ಭಾರತದ ಹಿರಿಯ ರಾಜನೀತಿಜ್ಞ, ದಲಿತ ಜನಾಂಗದ ದಾಸ್ಯ ವಿಮೋಚನೆಯ ಹರಿಕಾರ, ವಿಶ್ವ ರತ್ನ, ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರವನ್ನು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಕನಸಿನ ಸಮ ಸಮಾಜ ನಿರ್ಮಾಣವಾಗಬೇಕು. ಇಡೀ ಮನುಕುಲಕ್ಕೆ ಒಳಿತನ್ನು ಮಾಡಬೇಕು ಎಂಬ ಆಶಯಗಳನ್ನು ಈಡೇರಿಸುವಲ್ಲಿ ಮುನ್ನಡೆದ ಬಾಬಾಸಾಹೇಬ್ ಅಂಬೇಡ್ಕರ ಅವರು ಒಂದು ಜನಾಂಗಕ್ಕೆ ಸಿಮೀತವಾಗಿಲ್ಲ. ಸಾಮಾಜಿಕ ಸಮಾನತೆಯ ಹರಿಕಾರ ಡಾ. ಅಂಬೇಡ್ಕರ್ ಅವರು ವಿಶ್ವದ ಸರ್ವಶ್ರೇಷ್ಠ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯನಿಗೆ ಕೊಡುಗೆ ನೀಡುವ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ಭದ್ರ ಬುನಾದಿ ಹಾಕಿದ್ದಾರೆ ಶೋಷಿತ, ಬಡವ, ಶ್ರಮಿಕ, ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನತೆಯ ಹಕ್ಕನ್ನು ನಮ್ಮ ಸಂವಿಧಾನ ಒದಗಿಸಿದೆ. ಪ್ರತಿಯೊಬ್ಬರೂ ಡಾ. ಅಂಬೇಡ್ಕರ್ ಅವರ ತತ್ವಾದರ್ಶ, ಜೀವನ-ಮೌಲ್ಯ ಮತ್ತು ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎ.ಎಸ್.ಪಿ. ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಎಸ್.ಬೆಳಗಲಿ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಅಂಬೇಡ್ಕರ್ ಕಾಲನಿಯಲ್ಲಿ ಜರುಗಿದ ಡಾ. ಬಿ.ಆರ್.ಅಂಬೇಡ್ಕರ್ ಅವರ 134 ನೇಯ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಇನ್ನೊರ್ವ ಅತಿಥಿ ಪ್ರೊ. ಬಸವರಾಜ ಜಾಲವಾದಿ ಅವರು ಮಾತನಾಡಿ, ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಅಸ್ಪೃಶ್ಯತೆ ಮತ್ತು ಜಾತಿವ್ಯವಸ್ಥೆ ನಿರ್ಮೂಲನೆಗಾಗಿ ಹೋರಾಡಿದವರು. ಭಾರತೀಯ ಸಮಾಜದ ದಮನಿತ ವರ್ಗಗಳ ಜನರ ಉನ್ನತಿಗಾಗಿ ಕೊಡುಗೆ ನೀಡಿರುವದು ಅನನ್ಯವಾಗಿದೆ. ಸಮಾಜದಲ್ಲಿ ಸಹಬಾಳ್ವೆ, ಸಹೋದರತೆ, ಭ್ರಾತೃತ್ವ, ಸಾಮರಸ್ಯತೆ, ಭಾವೈಕ್ಯತೆ ಮತ್ತು ಸಮಾನತೆಯ ಭಾವ ಮೂಡಬೇಕೆಂದು ಶ್ರಮಿಸಿದವರು. ಅವರು ಸೂರ್ಯ ಚಂದ್ರರು ಇರುವವರೆಗೆ ಅಜರಾಮರರಾಗಿದ್ದಾರೆ ಎಂದರು.
ನಿವೃತ್ತ ಶಿಕ್ಷಣ ತಜ್ಞ ಎಸ್.ಎಲ್.ಇಂಗಳೇಶ್ವರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಪಾಟೀಲ, ಮನೋಹರ ಕಟ್ಟಿಮನಿ, ಅಂಬೇಡ್ಕರ ಕಾಲನಿ ಅಧ್ಯಕ್ಷ ಶಿವಾನಂದ ಮಮದಾಪೂರ, ಶಿವರಾಜ ಓತಿಹಾಳ, ದಶರಥ ದೊಡಮನಿ, ಜೆ.ಎನ್.ಬಡಳ್ಳಿ ಇನ್ನಿತರರು ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಸಚಿನ ಸವನಳ್ಳಿ, ಶ್ರೀಶೈಲ ವಾಘಮೋರೆ, ಪರಶುರಾಮ ಧರನಾಕರ, ಗಣೇಶ ಗುನ್ನಾಪೂರ, ರಾಜಕುಮಾರ ಓದಿ, ಪ್ರಫುಲ್ ನಿಂಬಾಳಕರ, ಕಲ್ಲಪ್ಪ ಚಲವಾದಿ, ಗುರ್ಪ ಚಲವಾದಿ, ಸುಭಾಷ ಕುಟಕೋಳಿ, , ಮಹೇಂದ್ರ ಹೋಟಕರ, ಮೋಹನ ಗುನ್ನಾಪುರ, ಆನಂದ ಶಹಾಪುರ ಇನ್ನಿತರರು ಸಹ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಸ್ವರ ಸಂಗಮ ಮೇಲೋಡಿಸ್ ನ ಮನೋಜ ಅಯ್ಯರ ಮತ್ತು ರಾಜೇಶ ಚಲವಾದಿ ಸಂಗಡಿಗರಿಂದ ಡಾ. ಅಂಬೇಡ್ಕರ ಅವರ ಜೀವನ-ಸಾಧನೆ-ಕೊಡುಗೆ ವರ್ಣಿಸುವ ಹಾಡುಗಳನ್ನು ಹಾಡಿ ಜನರ ಮನಸೆಳೆಯಿತು.