ಶಾಸಕರ ಗೃಹ ಕಚೇರಿಯಲ್ಲಿ ಡಾ. ಅಂಬೇಡ್ಕರ ವಿಚಾರ ಯಾತ್ರೆ
ರಾಯಬಾಗ, 26 : ಕಾಂಗ್ರೆಸ ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಕೂಡ ಡಾ.ಅಂಬೇಡ್ಕರ ಅವರಿಗೆ ಹಾಗೂ ದಲಿತ ಸಮುದಾಯಕ್ಕೆ ಅನ್ಯಾಯ ಮಾಡುತ್ತ ಬಂದಿದೆ ಎಂದು ಬಿಜೆಪಿ ಪಕ್ಷದ ಎಸ್.ಸಿ.ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಹೇಳಿದರು.
ಶನಿವಾರ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ವಿಚಾರ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ ಮತ್ತು ನೆಹರು ಅವರ ಕುತಂತ್ರದಿಂದ ಪೂರ್ವ ಪಾಕಿಸ್ತಾನ ಹುಟ್ಟಿಕೊಂಡಿತ್ತು, ಸ್ವಾತಂತ್ರ್ಯ ನಂತರ ಅಂಬೇಡ್ಕರ ರವರನ್ನು ಚುನಾವಣೆಯಲ್ಲಿ ಸೋಲಿಸಿದವರು ಕಾಂಗ್ರೆಸ ಮತ್ತು ನೆಹರು ಎನ್ನುವುದು ಇಡೀ ದೇಶಕ್ಕೆ ತಿಳಿದ ವಿಷಯವಾಗಿದೆ. ಅಂಬೇಡ್ಕರ ರವರು ಮೊದಲೇ ದಲಿತರಿಗೆ ಕಾಂಗ್ರೆಸ ಒಂದು ಸುಡುವ ಮನೆ ಎಂದು ಎಚ್ಚರಿಸಿದ್ದಾರೆ ಎಂದು ಹೇಳಿದರು.ಇಂದು ಬಿಜೆಪಿ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಡಾ.ಅಂಬೇಡ್ಕರ ರವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ. ಕಾಂಗ್ರೆಸದವರು ದಲಿತರಿಗೆ ಮತ್ತು ಅಂಬೇಡ್ಕರ ಅವರಿಗೆ ಮಾಡಿದ ಅನ್ಯಾಯವನ್ನು ದಲಿತ ಬಂಧುಗಳು ಎಂದೂ ಮರೆಯಬಾರದು ಎಂದರು.ಬಿಜೆಪಿ ಪಕ್ಷದ ರಾಜ್ಯ ಸದಸ್ಯ, ಪ್ರಶಿಕ್ಷಣ ಪ್ರಕೊಷ್ಠ ಚಿದಾನಂದ ಚಲವಾದಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಸಕ ಡಿ.ಎಮ್.ಐಹೊಳೆ, ಚಿಕ್ಕೋಡಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ, ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ರಾಜಶೇಖರ ಖನದಾಳೆ, ಸದಾನಂದ ಹಳಿಂಗಳಿ, ಸದಾಶಿವ ಘೊರೆ್ಡ, ಬಸವರಾಜ ಡೊನವಾಡೆ ಸೇರಿ ಅನೇಕರು ಇದ್ದರು.