ಪುಸ್ತಕ, ವಾಣಿಜ್ಯ ಮಳಿಗೆಗೆ ಡಾ.ಅಜಯ ಸಿಂಗ್ ಭೇಟಿ

ಕಲಬುರಗಿ, ಫೆ 7, ಬಿಸಿಲನಾಡು ಕಲಬುರಗಿಯಲ್ಲಿ ನಡೆಯುತ್ತಿರುವ 85ನೇ ಅಖಿಲ ಕನ್ನಡ ಸಾಹಿತ್ಯ ಸಮ್ನೇಳನದ ಮುಖ್ಯ ವೇದಿಕೆ ಹತ್ತಿರ ಸ್ಥಾಪಿಸಲಾಗಿರುವ ಪುಸ್ತಕ ಮತ್ತು ವಾಣಿಜ್ಯ ಮಳಿಗೆಗೆ ಶುಕ್ರವಾರ ಪುಸ್ತಕ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆ ಸಮಿತಿಯ ಅಧ್ಯಕ್ಷ, ಶಾಸಕ ಡಾ.ಅಜಯ ಸಿಂಗ್ ಭೇಟಿ ನೀಡಿದರು.ಇದೇ ಸಂದರ್ಭದಲ್ಲಿ ಶಾಸಕರು ಪುಸ್ತಕ ವ್ಯಾಪಾರಿಗಳ ಜತೆ ಸಮಾಲೋಚನೆ ನಡೆಸಿದರು. ಪುಸ್ತಕ ಮಾರಾಟದ ಬಗ್ಗೆ ಹಾಗೂ ಓದುಗರ ಪ್ರತಿಕ್ರಿಯೆ ಬಗ್ಗೆ ಮಾಹಿತಿ ಪಡೆದರು. ತುಂಬಾ ಅಚ್ಚುಕಟ್ಟಾಗಿ ಪುಸ್ತಕ ಮಳಿಗೆ ಮತ್ತು ಲೇಖಕರ ಕಟ್ಟೆ ನಿರ್ಮಿಸಿದ ಸಮಿತಿಯ ಶ್ರಮವನ್ನು ಶ್ಲಾಘಿಸಿದರು.ಇದೇ ಸಂದರ್ಭದ ಸಮಿತಿಯ ಕಾರ್ಯಾಧ್ಯಕ್ಷ ಶರಣಪ್ಪ ಬಿ. ಮಾತನಾಡಿ, ಸಾಹಿತ್ಯ ಸಮ್ಮೇಳನದ ಮೊದಲನೇ ದಿನ 413 ಪುಸ್ತಕ ಮಳಿಗೆಯಿಂದ 60 ಲಕ್ಷ ಮತ್ತು 210 ವಾಣಿಜ್ಯ ಮಳಿಗೆಯಿಂದ 20 ಲಕ್ಷ ರೂ. ವ್ಯಾಪಾರವಾಗಿದೆ ಎಂದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಸತೀಷಕುಮಾರ, ಮಂಜುನಾಥ್ ಅಜಯಕುಮಾರ, ಪರಶುರಾಮ ಕಟ್ಟಿಮನಿ, ಪಾರ್ವತಿ ರೆಡ್ಡಿ ಮತ್ತಿತರಿದ್ದರು.