ಲೋಕದರ್ಶನ ವರದಿ
ಬೆಳಗಾವಿ 28: ದಿ.26 ರವಿವಾದಂದು ಪ್ರಯತ್ನ ಸಂಘಟನೆಯವರು ಹಿಂದವಾಡಿಯಲ್ಲಿರುವ 35 ಮಕ್ಕಳು ವಾಸವಾಗಿರುವ ಸಿದ್ಧಾರ್ಥ ಮಕ್ಕಳ ಧಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ದಿನನಿತ್ಯ ಉಪಯೋಗವಾಗುವಂತಹ 18,500 ರೂ. ಮೊತ್ತದ ಪಾತ್ರೆಗಳನ್ನು ದಾನವನ್ನಾಗಿ ನೀಡಿದರು. ಅಲ್ಲದೇ ಮಕ್ಕಳಿಗೆ ಸಿಹಿಯನ್ನು ಜೊತೆಗೆ ಖಾರವನ್ನು ನೀಡಿ ಮಕ್ಕಳೊಂದಿಗೆ ರಸಮಯ ಸಮಯ ಕಳೆಯುವುದರಲ್ಲಿ ಸಂತಸ ಪಟ್ಟರು.
ಸಿದ್ಧಾರ್ಥ ಸಂಘಂಟನೆಯ ಅಧ್ಯಕ್ಷೆ ಶಾಂತಾ ಆಚಾರ್ಯ ಅವರು ಮಾತನಾಡಿ ನಮ್ಮ ಸಂಘಟನೆಯಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಬೇರೆ ಬೇರೆ ಆಶ್ರಮಗಳಿಗೆ, ಬಡಮಕ್ಕಳಿಗೆ ಭೇಟಿಯಾಗಿ ನಮ್ಮ ಸಂಸ್ಥೆಯಿಂದ ಕೈಲಾದ ಸಹಾಯವನ್ನು ಮಾಡುತ್ತ ಬಂದಿದ್ದೇವೆ. ಸಮಾಜಕ್ಕೆ ನಮ್ಮ ಕೈಲಾದುದನ್ನು ನೀಡಬೇಕೆಂಬುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವೆಂದು ಹೇಳಿದರು.
ಪ್ರಯತ್ನ ಸಂಘಟನೆಯವರ ಕಾರ್ಯವನ್ನು ಪ್ರಶಂಸಿದ ಸಿದ್ದಾರ್ಥ ಮಕ್ಕಳ ಧಾಮದದವರು ಶಾಂತಾ ಆಚಾರ್ಯ ಹಾಗೂ ವೆಂಕಟೇಶ ಸರನೋಬತ ಅವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರೆ ಎಲ್ಲ ಪದಾದಿಕಾರಿಗಳನ್ನು ಪುಷ್ಪ ನೀಡಿ ಗೌರವಿಸಿದರು.
ಸಂಘಟನೆಯ ಗೌರಿ, ವೆಂಕಟೇಶ ಸರನೋಬತ, ವೀಣಾ ಕುಲಕಣರ್ಿ, ಮಂಗಲಾ, ಬೀನಾ ರವ್, ಸಂಗೀತಾ, ಲತಾ ಕಟಿ, ಶ್ವೇತಾ, ಕವಿತಾ, ವಿಶ್ವ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.