ದೊಡ್ಡಾಟ ದೇಶಿಯ ಕಲೆಗಳಲ್ಲಿಯೇ ಗಂಡುಕಲೆ: ವೀರಣ್ಣ ಒಡ್ಡೀನ

Doddata and folk program

ಧಾರವಾಡ 20: ದೊಡ್ಡಾಟ ದೇಶಿಯ ಕಲೆಗಳಲ್ಲಿಯೇ ಗಂಡುಕಲೆ. ಆದರೆ ದೃಶ್ಯ ಮಾಧ್ಯಮಗಳ ಪ್ರಭಾವದಿಂದ ಅಂತಹ ಕಲೆಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಹೇಳಿದರು.  

ಅವರು ನಗರದ ಕ.ಸಾ.ಪ. ಸಭಾಭವನದಲ್ಲಿ ಧಾರವಾಡದ ಕಲಾ ವೈಭವ ನಾಟ್ಯ ಸಂಘವು ಆಯೋಜಿಸಿದ್ದ ದೊಡ್ಡಾಟ ಹಾಗೂ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ದೊಡ್ಡಾಟಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು ಅದೊಂದು ಪಾರಂಪಕರಿಕ ಕಲೆಯಾಗಿದೆ. ದೊಡ್ಡಾಟಕ್ಕೆ ಪೌರಾಣಿಕ ಪ್ರಸಂಗಗಳೇ ಮೂಲಾಧಾರ. ಹಾಡು ಹಾಗೂ ಕುಣಿತವೇ ದೊಡ್ಡಾಟದ ವಿಶೇಷತೆ. ನಾಡಿನ ಸಂಸ್ಕೃತಿಯ ಪ್ರತೀಕವಾದ ಇಂತಹ ಜನಪದ ಕಲೆ ಆಧುನಿಕತೆಯ ಭರಾಟೆಯಿಂದ ಹಾಗೂ ಪ್ರೇಕ್ಷಕರ ಪ್ರೋತ್ಸಾಹದ ಕೊರತೆಯಿಂದ ಮರೆಯಾಗುತ್ತಿರುವುದು ಆತಂಕದ ವಿಷಯವಾಗಿದೆಎ. ದೇಶಿಯ ಸಂಸ್ಕೃತಿಯನ್ನು ನಾವು ಉದಾಸೀನ ಮಾಡಿದರೆ ಜಾನಪದ ಬದುಕಿನ ಸತ್ವವನ್ನೇ ಕಳೆದುಕೊಂಡಂತೆ ಎಂದು ಹೇಳಿದರು.  

ಭಾಷಾ ಅಲ್ಪಸಂಖ್ಯಾತ ಸಂಘದ ರಾಜ್ಯಾಧ್ಯಕ್ಷ ಎಲ್‌. ಐ. ಲಕ್ಕಮ್ಮನವರ ಮಾತನಾಡಿ, ಜಾನಪದ ಸಾಹಿತ್ಯಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಇಂದು ಜಾಗತೀಕರಣದಿಂದ ಕಲಾವಿದರಿಗೆ ಸಿಗಬೇಕಾದ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಅಂತಹ ಕಲಾವಿದರನ್ನು ಗುರುತಿಸಿ ಮುನ್ನೆಲೆಗೆ ತರಬೇಕಿದೆ. ಕಲೆ ಹಾಗೂ ಕಲಾವಿದರು ನಮ್ಮ ಬಹುದೊಡ್ಡ ಆಸ್ತಿ ಎಂದು ಹೇಳಿದರು.  

ಹಿರಿಯ ಜಾನಪದ ಕಲಾವಿದ ಎಸ್‌.ಎನ್‌. ಬಿದರಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯ ಹುಟ್ಟಿದ್ದೆ ನಮ್ಮ ಜನಪದ ಕೌದಿಯಲ್ಲಿ. ಜಾನಪದ ಕಲೆ ಜಾತಿ-ಧರ್ಮ ಮೀರಿ ಬೆಳೆಯುವ ಶಕ್ತಿ ಹೊಂದಿದೆ ಎಂದು ಹೇಳಿ ಸೊಗಸಾದ ದೊಡ್ಡಾಟದ ಪ್ರಸಂಗಗಳನ್ನು ಮನೋಜ್ಞವಾಗಿ ಅಭಿನಯಿಸಿದರು.  

ಕಾರ್ಯಕ್ರಮದಲ್ಲಿ ಕಿರುತೆರೆಯ ನಟ ಮಲ್ಲಪ್ಪ ಹೊಸಕೇರಿ, ಪ್ರೇಮಾ ಪೂಜಾರ, ಕಿರಣ ಸಿದ್ಧಾಪುರ, ವೀರನಗೌಡ ಸಿದ್ಧಾಪುರ, ಬಸವರಾಜ ಕುಡವಕ್ಕಲಿಗೇರ ಸೇರಿದಂತೆ ಮುಂತಾದವರಿದ್ದರು.  

ಜಿಲ್ಲೆಯ ವಿವಿಧ ವಿಭಾಗದಿಂದ ಆಗಮಿಸಿದ ಕಲಾವಿದರು ಜಾನಪದ ಹಾಡುಗಳನ್ನು ದೊಡ್ಡಾಟದ ಪ್ರಸಂಗ ಹೇಳಿ ಪ್ರೇಕ್ಷಕರನ್ನು ರಂಜಿಸಿದರು. ಯಕ್ಕೇರ​‍್ಪ ನಡುವಿನಮನಿ (ಶಾನವಾಡ ಮಾಸ್ತರ) ಸ್ವಾಗತಿಸಿ, ನಿರೂಪಿಸಿದರು. ಪ್ರಕಾಶ ಮಲ್ಲಿಗವಾಡ ಪ್ರಾಸ್ತಾವಿಸಿ, ವಂದಿಸಿದರು.