ದೊಡ್ಡನಾಗಪ್ಪ ಸಣ್ಣ ನಾಗಪ್ಪ ಕಾಕಿ ಸ್ಮರಣೆ : ಉಚಿತ ಸಾಮೂಹಿಕ ವಿವಾಹ
ರಾಣೇಬೆನ್ನೂರು 17: ಕಾಕಿ ಕುಟುಂಬದ ಪೂರ್ವಜರು ಹಾಕಿ ಕೊಟ್ಟಿರುವ, ಸಾಮಾಜಿಕ, ಧಾರ್ಮಿಕ, ಮತ್ತು ವ್ಯವಹಾರಿಕ ಸೇವೆಯಲ್ಲಿ ತಮ್ಮ ಕುಟುಂಬ ಮುಂದುವರೆದಿದೆ. ದಾನ, ಧರ್ಮ ಮತ್ತು ಪರೋಪಕಾರ ಅವರು ಮೈಗೂಡಿಸಿಕೊಂಡವರು ಅಂಥವರ ಸೇವೆ ಮತ್ತು ಸ್ಮರಣೆ ಮಾಡುವುದೇ ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಕಾಕಿ ಜನ ಸೇವಾ ಸಂಸ್ಥೆಯ ಸಂಸ್ಥಾಪಕ ಶ್ರೀನಿವಾಸ್ ಕಾಕಿ ಹೇಳಿದರು. ತಮ್ಮ ಗ್ರಹ ಸಭಾದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾಕಿ ಕುಟುಂಬದ ಹಿರಿಯರಾದ ದಿ, ದೊಡ್ಡ ನಾಗಪ್ಪ ತಿ. ಕಾಕಿ ಮತ್ತು ದಿ,ಸಣ್ಣನಾಗಪ್ಪ ತಿ. ಕಾಕಿ. ಅವರು, ಧರ್ಮದ ಪರಂಪರೆಯಲ್ಲಿ ಸಾಗಿ ಬಂದವರು, ಬಡವರಿಗೆ, ಜನಸಾಮಾನ್ಯರಿಗೆ, ಅತಿ ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು ವಿತರಿಸಿ ಜನಮಾನಸದಲ್ಲಿ ನೆಲೆ ನಿಂತವರಾಗಿದ್ದಾರೆ ಎಂದರು. ತಾವು ತಮ್ಮ ಕುಟುಂಬವು ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಸರ್ವರಿಗೂ ಅನುಕೂಲವಾಗುವ ಉದ್ದೇಶದಿಂದ ಹುಣಸಿಕಟ್ಟಿ ರಸ್ತೆಯಲ್ಲಿ "ಜೇಸಿವಾಣಿ ಅರಮನೆ " ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಅತೀ ಕಡಿಮೆ ದರದಲ್ಲಿ, ಬಾಡಿಗೆ ನೀಡಲಾಗುತ್ತಿದೆ. ಅಂದೆ ಅದರ ಲೋಕಾರೆ್ಣಯಾಗಲಿದೆ. ಎಂದರು.
ಪ್ರತಿವರ್ಷದಂತೆ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಈಗಾಗಲೇ 15 ಜೊತೆ ವಧು-ವರರು ಹೆಸರು ನೋಂದಾಯಿಸಿದ್ದಾರೆ. ಅವರಿಗೆ ಬಟ್ಟೆ, ಮತ್ತಿತರೆ ವಸ್ತುಗಳು ಇಂದೇ ವಿತರಿಸಲಾಗುತ್ತಿದೆ. ವಿವಾಹ ಪೂರ್ವ ರವಿವಾರ ಸಂಜೆ, ಸಾರೋಟಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಿ, ಸೋಮವಾರ -23 ರಂದು ನೂತನ ಅರಮನೆಯಲ್ಲಿ ಸಾಮೂಹಿಕ ಅವರವರ ಧರ್ಮಾನುಸಾರ ವಿವಾಹ ಮಹೋತ್ಸವ ಜರುಗಲಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಮತಿ ರೂಪಾ ಕಾಕಿ, ಶಿವಾನಂದ ಸಾಲಗೇರಿ, ಹನುಮಂತಪ್ಪ ಅಮಾಸಿ, ಹನುಮಂತಪ್ಪ ಕಾಕಿ, ಮಂಜುನಾಥ ಹೊಸಪೇಟೆ, ಶಿವಾನಂದ ಬಾಗಾದಿ, ಕೆ.ಸಿ.ನಾಗರಜ್ಜಿ, ಕೊಟ್ರೇಶಪ್ಪ ಎಮ್ಮಿ, ಶಿವಕುಮಾರ್ ಜಾಧವ ಇತರರು ಉಪಸ್ಥಿತರಿದ್ದರು.