ವೈದ್ಯರು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಬೇಕು - ಡಾ ಬಿ ಶಿವಕುಮಾರ್

Doctors should act as social leaders - Dr B Shivakumar

ವೈದ್ಯರು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಬೇಕು - ಡಾ ಬಿ ಶಿವಕುಮಾರ್ 

ಹೂವಿನ ಹಡಗಲಿ 09: ವೈದ್ಯರ ವೃತ್ತಿ ಪವಿತ್ರವಾದದ್ದು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ ವೀರಭದ್ರ​‍್ಪ ವಿ ಚಿನಿವಾಲರ್ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಎಂ ಪಿ ರವೀಂದ್ರ ಸಭಾಂಗಣದಲ್ಲಿ ಭಾನುವಾರ ಭಾರತೀಯ ವೈದ್ಯಕೀಯ ಸಂಘ, ಕೆ ಪಿ ಎಂ ಇ ವೈದ್ಯರ ಸಂಘದ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಹಿರಿಯ ವೈದ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದ ಆರೋಗ್ಯದ ಸ್ವಾಸ್ಥ್ಯ ಕಾಪಾಡುವಲ್ಲಿ ವೈದ್ಯರು ಹಗಲಿರುಳು ಎನ್ನದೆ ದುಡಿಯುತ್ತಿದ್ದಾರೆ.  

ಹೊಸ ಹೊಸ ಆವಿಷ್ಕಾರಗಳು ತಂತ್ರಜ್ಞಾನಗಳ ನೆರವಿನಿಂದ ನಿಮ್ಮ ವೃತ್ತಿಯ ಗುಣಮಟ್ಟದ ಸುಧಾರಣೆಗೆ ಆದ್ಯತೆ ನೀಡಬೇಕು ಎಂದರು. ಆರೋಗ್ಯ ಕ್ಷೇತ್ರದಲ್ಲಿ  ಕಾರ್ಯ ನಿರ್ವಸುವವರಿಗೆ ಒತ್ತಡ ಸಹಜ. ದೈಹಿಕ ಆರೋಗ್ಯದ ಬಗ್ಗೆ ಗಮನ ಹರಿಸಲು ಡಾ ಮಧುಸೂದನ ಉಪಯುಕ್ತ ಮಾಹಿತಿ ನೀಡಿದರು. ಹರಪನಹಳ್ಳಿಯ ಪ್ರಖ್ಯಾತ ವೈದ್ಯರಾದ ಡಾ ಹರ್ಷ ಜಿ ವಿ ನೂತನ ಪದಾಧಿಕಾರಿಗಳ ತಂಡಕ್ಕೆ ಶುಭ ಕೋರಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿರಿ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಡಾ ಬಿ ಶಿವಕುಮಾರ್ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನೂತನ ಅಧ್ಯಕ್ಷರಾದ ಲೈಫ್ ಲೈನ್ ಆಸ್ಪತ್ರೆ ವೈದ್ಯರಾದ ಡಾ ಎಚ್ ಎಂ ವೀರೇಶ್ ತಾಲೂಕಿನ ಎಲ್ಲಾ ವೈದ್ಯರ ಸಹಕಾರದಿಂದ ವಿನೂತನ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದರು.ನೂತನ ಕಾರ್ಯದರ್ಶಿಗಳಾದ ಡಾ ನಿಖಿಲ್ ಕೆ, ಡಾ ಆನಂದ್ ಪಿ ಎಂ, ಎ ಎಫ್ ಐ ಅಧ್ಯಕ್ಷ ಡಾ ಪ್ರಕಾಶ್ ಅಟವಾಳಗಿ, ನಾಗರಾಜ್ ಜಿ ಪಿ ಇತರರು ಉಪಸ್ಥಿತರಿದ್ದರು.ತಾಲೂಕಿನ ಹಿರಿಯ ವೈದ್ಯರಾದ ಡಾ ಧರ್ಮಣ್ಣ ಮಾದನೂರು, ಡಾ ಮಲ್ಲಿಕಾರ್ಜುನ ಕೆ, ಡಾ ಜಂಬಣ್ಣ ಯಲಗಚ್ಚಿನ, ಡಾ ಬಿ ಟಿ ಫಣಿರಾಜ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಡಾ ರೇಖಾ ಕೆ, ಡಾ ಸೋಮಶೇಖರ್ ಎಂ ಕೆ, ಡಾ ಜೆ ಡಿ ಉಮೇಶ್, ಡಾ ನಿಖಿಲ್ ಕೆ ನಿರ್ವಹಿಸಿದರು.ಭಾರತೀಯ ವೈದ್ಯಕೀಯ ಸಂಘದ ಸರ್ವ ಸದಸ್ಯರು ಇತರರು ಭಾಗವಹಿಸಿದ್ದರು.