ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವೈದ್ಯರ ದಿನಾಚರಣೆ

ಲೋಕದರ್ಶನವರದಿ

ರಾಣೆಬೆನ್ನೂರ. ಜು.03:  ಸಮಾಜದಲ್ಲಿ ವೈದ್ಯರಿಗೆ ಅತ್ಯುತ್ತನ್ನತ ಸ್ಥಾನ-ಮಾನ ಗೌರವವಿದೆ.   ಭಾರತೀಯ ವೈದ್ಯಕೀಯ ಪರಂಪರೆಯಲ್ಲಿ ನಮ್ಮ ನಾಗರೀಕರು ಸದಾ ಕಾಲವೂ ಪ್ರೀತಿ-ವಿಶ್ವಾಸ ಮತ್ತು ಗೌರವ ನೀಡುತ್ತಲೇ ಬಂದಿದ್ದಾರೆ.  ಆ ಗೌರವಕ್ಕೆ ಚ್ಯುತಿ ಬಾರದ ಹಾಗೆ ನಡೆದುಕೊಂಡರೆ ಮತ್ತಷ್ಟು ಗೌರವ ಪ್ರೀತಿ-ವಿಶ್ವಾಸ ಸಂಪಾದಿಸಬಹುದಾಗಿದೆ ಎಂದು ನಗರದ ಅಮೃತಂ ಆಯುವರ್ೇದ ಆಸ್ಪತ್ರೆ ವೈದ್ಯ ಡಾ|| ನಾರಾಯಣ ಪವಾರ ಹೇಳಿದರು.

ಅವರು ನಗರ ಹೊರವಲಯದ ಹುಣಸಿಕಟ್ಟಿ ರಸ್ತೆಯ ನ್ಯಾಷನಲ್ ಪಬ್ಲಿಕ್ ಶಾಲಾ ಭವನದಲ್ಲಿ ಆಯೋಜಿಸಿದ್ದ, ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.   ಯಾಂತ್ರಿಕತೆಯ ಬದುಕಿನಲ್ಲಿ ಸಾಗುತ್ತಿರುವ ಇಂದಿನ ಬಹುತೇಕ ನಾಗರೀಕರು ಆರೋಗ್ಯವಿಲ್ಲದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.  ಎಷ್ಟೇ ಹಣ, ಆಸ್ತಿ ಅಂತಸ್ತು ಇದ್ದರೂ ಸಹ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ.   ಪ್ರಸ್ತುತ ವಿಶ್ವದಲ್ಲಿ ಹರಡಿರುವ ಕರೋನಾ ವೈರಸ್ ಮಹಾಮಾರಿ ರೋಗದ ಪರಿಣಾಮ ಮಾನವನ ಬದುಕು ಮತ್ತಷ್ಟು ಕ್ಷೀಣೀಸುತ್ತಲಿದೆ ಎಂದ ಅವರು ಸದಾ ಶಾಂತಿ ನೆಮ್ಮದಿಗೆ ಯೋಗ-ದ್ಯಾನ ಮತ್ತು ಪ್ರಾಣಾಯಾಮದ ಜೊತೆಗೆ ನಮ್ಮ ಭಾರತೀಯ ಸನಾತನ ಪರಂಪರೆಯ ಆಯುವರ್ೇದ ಔಷಧಿಗಳ ಮೂಲಕ ಅಡ್ಡಪರಿಣಾಮಗಳಿಲ್ಲದೆ, ಶಾಶ್ವತವಾಗಿ ಆರೋಗ್ಯವಂತರಾಗಿ ಬದುಕುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ, ಶಿಕ್ಷಣ ಸಂಸ್ಥೆ ಅಧ್ಯಕ್ಷ ವಾಸುದೇವ ಸಾ ಲದ್ವಾ ಅವರು ಮಾತನಾಡಿ ಸಂಸ್ಥೆ ಸಾಮಾಜಿಕ ನೆಲೆಗಟ್ಟಿನಲ್ಲಿ ಆರಂಭಿಸಲಾಗಿದ್ದು, ಕೇವಲ ಶಿಕ್ಷಣ ನೀಡುವುದಷ್ಟೇ ಕೆಲಸವಲ್ಲ.   ಅದರ ಜೊತೆಗೆ ಸಾಂಸ್ಕೃತಿಕ ಸಾಹಿತ್ಯೀಕ ಮತ್ತು ಸಮಾಜ ಸೇವೆಯಲ್ಲಿ ನಿರತರಾಗಿರುವ ಎಲ್ಲ ಕ್ಷೇತ್ರದ ನಾಗರೀಕರನ್ನು ಗುರುತಿಸುವ ಮತ್ತು ಗೌರವಿಸುವ ಕಾರ್ಯದಲ್ಲಿ ಮುಂದಾಗಿದೆ ಎಂದ ಅವರು ನಾಗರೀಕರು ಆತ್ಮ ಸ್ಥೈರ್ಯ ಕಳೆದುಕೊಳ್ಳದೇ, ಆರೋಗ್ಯವಂತ ಬದುಕನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಮೂಲಕ ಜೀವನ ಸಾಗಿಸಿ ಕರೋನಾ ವೈರಸ್ ರೋಗ ಮುಕ್ತವಾಗಲು ಪಣ ತೊಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ  ಡಾ|| ಬಿ.ಆರ್.ಸಾಹುಕಾರ, ಡಾ|| ಎಂ.ಎಂ.ಅನಂತರಡ್ಡಿ ಸೇರಿದಂತೆ ಮೊದಲಾದ ವೈದ್ಯರನ್ನು ಸನ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತು.  ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮಂಜುನಾಥ ಮಾನ್ವಿ, ಕಾರ್ಯದಶರ್ಿ ನಾಗೇಶ್ ಮುರಡೆಣ್ಣನವರ, ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಸೇರಿದಂತೆ ಮತ್ತಿತತರ ಗಣ್ಯರು ಪಾಲ್ಗೊಂಡಿದ್ದರು.