ರಾಮಸಾಗರದ ಎಚ್.ಸಿ.ರಾಘವೇಂದ್ರಗೆ ಡಾಕ್ಟರೇಟ್ ಪದವಿ
ಕಂಪ್ಲಿ 25: ಕಂಪ್ಲಿ ತಾಲ್ಲೂಕು ರಾಮಸಾಗರ ಗ್ರಾಮದ ಎಚ್.ಸಿ.ರಾಘವೇಂದ್ರ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿ.ಎಚ್.ಡಿ.(ಡಾಲ್ಟರೇಟ್) ಪದವಿಯನ್ನು ಘೋಷಣೆ ಮಾಡಿದೆ. ಎಚ್.ಸಿ.ರಾಘವೇಂದ್ರ ಅವರು ಕನ್ನಡ ವಿಶ್ವವಿದ್ಯಾಯಲದ ಸಮಾಜ ವಿಜ್ಞಾನ ನಿಕಾಯದ ಅಭಿವೃದ್ಧಿ ವಿಭಾಗದಲ್ಲಿ, ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಜನಾರ್ದಣ ಅವರ ಮಾರ್ಗದರ್ಶನದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪೋಷಕತ್ವ ವಂಚಿತ ಮಕ್ಕಳ ಸ್ಥಿತಿಗತಿ ಎನ್ನುವ ಶೀರ್ಷಿಕೆಯಲ್ಲಿ ಸಂಶೋಧನೆ ನಡೆಸಿ, ಸಿದ್ಧ ಪಡಿಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿ.ಎಚ್.ಡಿ.ಪದವಿ ನೀಡಿದೆ.
ಮುಂದಿನ ದಿನಗಳಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಮಾರಂಭದಲ್ಲಿ ಎಚ್.ಸಿ.ರಾಘವೇಂದ್ರ ಅವರಿಗೆ ಪಿ.ಎಚ್.ಡಿ.(ಡಾಕ್ಟರೇಟ್)ಪದವಿ ಪ್ರದಾನ ಮಾಡಲಿದ್ದಾರೆ.