ನಾಲ್ಕನೇ ಸುತ್ತಿಗೆ ಪ್ರವೇಶಿಸಿದ ಜೊಕೊವಿಚ್

ನ್ಯೂಯಾರ್ಕ್, ಆ 31         ವಿಶ್ವಸ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಅವರು ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ಗೆ ಪ್ರವೇಶ ಮಾಡಿದ್ದಾರೆ.  

ಇಂದು ಇಲ್ಲಿನ ಅರ್ಥರ್ ಆ್ಯಶ್ ಅಂಗಳದಲ್ಲಿ ನಡೆದ ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಹಣಾಹಣಿಯಲ್ಲಿ ಸರ್ಬಿಯಾದ ಜೊಕೊವಿಚ್ 6-3, 6-4, 6-2 ಅಂತರದಲ್ಲಿ ನೇರ ಸೆಟ್ಗಳಿಂದ ಅಮೆರಿಕದ ಡೆನಿಸ್ ಕುಡ್ಲಾ ವಿರುದ್ಧ ಗೆದ್ದು ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟರು.  

ಮತ್ತೊಂದು ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ ಪಾವೊಲೊ ಲೊರೆಂಜಿ ವಿರುದ್ಧ 6-4, 7-6 (9), 7-6 (4) ಅಂತರದಲ್ಲಿ ಗೆದ್ದಿರುವ ಸ್ಥಳೀಯ ಆಟಗಾರ ಸ್ಟ್ಯಾನ್ ವಾವ್ರಿಂಕಾ ಗೆಲುವು ಸಾಧಿಸಿ ವಿಶ್ವದ ಅಗ್ರ ಆಟಗಾರ ನೊವಾಕ್ ಜೊಕೊವಿಚ್ ವಿರುದ್ಧ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಗೆ ಸಿದ್ಧರಾಗುತ್ತಿದ್ದಾರೆ. 2016ರ ಬಳಿಕ ವಾವ್ರಿಂಕಾ ಅವರ ಪಾಲಿಗೆ ಇದೇ ಮೊದಲ ಬಾರಿ ಯುಎಸ್ ಓಪನ್ ಅಂತಿಮ 16 ಸುತ್ತಿಗೆ ಪ್ರವೇಶ ಮಾಡಿದಂತಾಯಿತು.