ಕೈದಿಗಳೊಂದಿಗೆ ದೀಪಾವಳಿ ಹಬ್ಬ ಆಚರಣೆ

ಲೋಕದರ್ಶನ ವರದಿ

ಚಿಕ್ಕೋಡಿ: ಪಟ್ಟಣದ ಅಲ್ಲಮಪ್ರಭು  ಅನ್ನದಾನ  ಸಮಿತಿಯವರು ಪ್ರತಿ ವರ್ಷದಂತೆ ಈ ವರ್ಷ ದೀಪಾವಳಿ ಹಬ್ಬದ ನಿಮಿತ್ಯ  ಹಿಂಡಲಗಾ ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾದೀನ ಕೈದಿಗಳಿಗೆ ಸಿಹಿ ಹಂಚಿ ಸಮಿತಿಯ ಮಹಿಳಾ ಸದಸ್ಯರಿಂದ ಆರತಿ ಬೆಳಗಿಸುವ ಮೂಲಕ ವಿಭಿನ್ನವಾಗಿ ಆಚರಿಸಿದರು.

ಮನೆಯವರಿಂದ ದೂರವಿರುವ ಕೈದಿಗಳಿಗೆ ದೀಪಾವಳಿ ಹಬ್ಬದ ಅನುಭವ ಹಾಗೂ ಜ್ಞಾನ ನೀಡುವ ದೃಷ್ಠಿಯಿಂದ ಸಮಿತಿಯ ಕಾರ್ಯದಶರ್ಿ ಸುನಂದಾ ಹುಕ್ಕೇರಿ ಇವರ ನೇತೃತ್ವದಲ್ಲಿ ಕೈದಿಗಳೊಂದಿಗೆ ದೀಪಾವಳಿ ಹಬ್ಬದ ಆಚರಣೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮಿತಿಯ ಮಹಿಳಾ ಸದಸ್ಯರು ಹಿಂಡಲಗಾ ಬೆಳಗಾವಿ ಕೇಂದ್ರ ಕಾರಾಗ್ರಹದಲ್ಲಿಯ ಕೈದಿಗಳಿಗೆ ತಿಲಕಧಾರನೆ ಮಾಡಿ ಆರತಿ ಬೆಳಗಿ, ಸಿಹಿ ಹಂಚುವ ಮೂಲಕ ದೀಪಾವಳಿಯ ಶುಭಾಶಯಗಳನ್ನು ಕೋರಿದರು, ಕಾರಾಗ್ರಹ ಅಧೀಕ್ಷಕರಾದ ಬಿ. ವ್ಹಿ. ಮೂಲಿಮನಿ ಮತ್ತು ಪ್ರೋ. ಶಿವಲಿಂಗ ಹಂಜಿ ಇವರು ಕೈದಿಗಳನ್ನುದ್ಧೇಶಿಸಿ ಮಾತನಾಡಿದರು. ಪ.ಪೂ. ಪಂಚಮ ಜಗದ್ಗುರು ಶಿವಲಿಂಗೇಶ್ವರ ಮಹಾ ಸ್ವಾಮಿಗಳು ನಿಡಸೋಸಿ ಇವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಕೇವಲ ಒಂದು ನಿಮಿಷದ ಸಿಟ್ಟು ಮನುಷ್ಯನ ಜೀವನವನ್ನು ಹಾಳು ಮಾಡುತ್ತದೆ, ಕೈದಿಗಳು ಜೈಲಲ್ಲಿ ಇರುವ ಕಾಲದಲ್ಲಿ ಇದ್ದಷ್ಟು ದಿನ ಸಮಯವನ್ನು ಹಾಳು ಮಾಡದೇ ಒಳ್ಳೆಯತನ ಕಲಿತು ಒಳ್ಳೆಯವರಾಗಿ ಹೊರಗೆ ಬಂದು ಸಮಾಜದಲ್ಲಿ ಉತ್ತಮ ಜೀವನ ಸಾಗಿಸಬೇಕು ಎಂದು ಆಶೀರ್ವಚನ ನೀಡಿ ಆಶೀವರ್ಾದ ಮಾಡಿದರು. ಸಮಿತಿಯ ಸಂಸ್ಥಾಪಕರಾದ ಚಂದ್ರಕಾಂತ ಹುಕ್ಕೇರಿ ಹಾಗೂ ಸಾಮಾಜಿಕ ಹೋರಾಟಗಾರರಾದ ಮಹಾಂತೇಶ ಚೌಗಲಾ ಬೋರಗಲ್ಲ ಇವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಸಮಿತಿಯ ಸದಸ್ಯರಾದ ಮಹಾಲಿಂಗ ಜಡೆಹಿರೇಮಠ, ತೀರ್ಥಂಕರ ಉಪಾಧ್ಯೆ, ನ್ಯಾಯವಾದಿ ಮಾಣಿಕ್ಯ ಕಬಾಡಗಿ, ಚಿಂಚಣಿ ಗ್ರಾಮ ಪಂಚಾಯತ ಸದಸ್ಯೆ ಸುರೇಖಾ ಕುಂಬಾರ, ಹಾರೂಗೇರಿಯ ಸಾಮಾಜಿಕ ಹೋರಾಟಗಾರ ರವೀಂದ್ರ ಹೋಳಕರ, ಬೋರಗಲ್ಲ ಗ್ರಾಮ ಪಂಚಾಯತ ಸದಸ್ಯರಾದ ಸಚೀನ ಹೊಸಮನಿ, ರತ್ನಪ್ಪಾ ಗೋಟೂರ, ಮಾನವ ಹಕ್ಕುಗಳ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷೆಯಾದ ಕವಿತಾ ಹಿರೇಮಠ, ಸಂಕೇಶ್ವರ ಪಟ್ಟಣದ ಕೀತರ್ಿಕುಮಾರ ಸಂಘವಿ, ಕಾಡಪ್ಪಾ ಮಗದುಮ್ಮ ಹಾಗೂ ಚಿಕ್ಕೋಡಿ, ಬೋರಗಲ್ಲ, ಮಜಲಟ್ಟಿ, ಜೈನಾಪೂರ, ಸಂಕೇಶ್ವರ, ಉಗಾರ, ಹುಕ್ಕೇರಿ ಮತ್ತು ಚಿಂಚಣಿ ಗ್ರಾಮಗಳಿಂದ ಆಗಮಿಸಿದ ಸಮಾಜದ ಹಿತಚಿಂತಕ ಮಹಿಳೆಯರು, ಪುರುಷರು ಮತ್ತು ಕಾರಾಗ್ರಹ ಸಿಬ್ಬಂದಿಯವರು ಉಪಸ್ಥಿತರಿದ್ದರು. ಶಶಿಕಾಂತ ಯಾದಗೂಡೆ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.