ಹೊನ್ನಾವರ 11: ಸಮಸ್ತ ದೈವಜ್ಞ ಬ್ರಾಹ್ಮಣ ಸಮುದಾಯದಆರಾದ್ಯದೈವ ಜ್ಞಾನೇಶ್ವರಿದೇವಿಯ ನೆಲೆಯಾದ ಜ್ಞಾನೇಶ್ವರಿ ಪೀಠದ ಮಠಾಧೀಶರಾದ ಪರಮ ಪೂಜ್ಯ ಸಚ್ಚಿದಾನಂದಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಹಾಗೂ ಸುಜ್ಞಾನೇಶ್ವರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿಇದೇ ದಿನಾಂಕ 26/04/2025 ರಂದು ಶನಿವಾರದಂದು ಶ್ರೀ ಮಠದಆವರಣದಲ್ಲಿದಲ್ಲಿರುವ ಜ್ಞಾನೇಶ್ವರಿ ಸಭಾ ಭವನದಲ್ಲಿ ಐತಿಹಾಸಿಕ ದೈವಜ್ಞಕಾವ್ಯೂತ್ಸವ ಬ್ರಹತ್ ಕವಿಗೋಷ್ಠಿ ಹಾಗೂ ಹಾವೇರಿಜಿಲ್ಲೆಯಅಕ್ಕಿಆಲೂರತಾಲೂಕಿನ ಕರೆಕ್ಯಾತನಹಳ್ಳಿ ಗ್ರಾಮದದೈವಜ್ಞ ಬ್ರಾಹ್ಮಣ ಸಮಾಜದ ಕವಿಗಳು, ಸಾಹಿತಿಗಳು ಮತ್ತು ಲೇಖಕರಾದ ಪ್ರಶಾಂತಆರ್‌ದೈವಜ್ಞ (ಬಾಬಣ್ಣ ) ಇವರು ಬರೆದ ಹಲವು ಮನಗಳ ಭಾವಸಂಗಮಎಂಬ ಕವನ ಸಂಕಲನ ಬಿಡುಗಡೆ ಹಾಗೂ ಕಾರವಾರದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಮತಿ ವಿಜಯಲಕ್ಷ್ಮಿ ಕೆರಳಿಕರ್ ಅವರು ಬರೆದ ಮುತ್ತಿನತೋರಣ ಪುಸ್ತಕಗಳ ಬಿಡುಗಡೆ ಸಮಾರಂಭಜರುಗಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಲೋಕಾಯುಕ್ತಇಲಾಖೆಯ ನಿವೃತ್ತ ನ್ಯಾಯಮೂರ್ತಿ ಸನ್ಮಾನ್ಯ ಸಂತೋಷ ಹೆಗಡೆ, ಮಠದ ಟ್ರಸ್ಟಿಗಳು ಹಾಗೂ ಉಪಾಧ್ಯಕ್ಷರಾದ ಸನ್ಮಾನ್ಯ ಆರ್‌ಎಸ್‌ರಾಯ್ಕರ (ಉಪ್ಪೊಣಿ ),ಅಖಿಲ ಕರ್ನಾಟಕದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ರವಿ ಶ್ರೀಕಾಂತ್ ಗಾಂವಕರ, ಬೆಂಗಳೂರಿನ ಸಖಿ ಸಂಘದಅಧ್ಯಕ್ಷರು ಹಾಗೂ ಸಾಹಿತಿಗಳಾದ ಶ್ರೀಮತಿ ಪುಷ್ಪಾ ವೇರ್ಣೇಕರ, ಮೈಸೂರಿನಖ್ಯಾತ ಚುಕ್ಕಿ ಚಿತ್ರ ಬರಹಗಾರರು, ಸಾಹಿತಿಗಳಾದ ಮೋಹನ ವೇರ್ಣೇಕರ, ಸಾಹಿತಿಗಳು ಪಠ್ಯ ಪುಸ್ತಕಗಳ ಲೇಖಕರಾದ ಶ್ರೀಮತಿ ಚಂದ್ರಮತಿ ವೇರ್ಣೇಕರ,ಧಾರವಾಡದ ಸಾಹಿತಿಗಳು ಹಾಗೂ ಅಖಿಲ ಕರ್ನಾಟಕದೈವಜ್ಞ ಬ್ರಾಹ್ಮಣ ಸಂಘದಗೌರವ ಕಾರ್ಯದರ್ಶಿಗಳಾದ ಉದಯ ಶಾಂತಾರಾಮ್‌ರಾಯ್ಕರ,ಕೋಶಾಧ್ಯಕ್ಷರಾದ ಶ್ರೀ ವಸಂತಅನ್ವೇಕರ, ಕಾರವಾರದ ಕೆ ಪಿ ಟಿ ಸಿ ಎಲ್ ನ ನಿವೃತ್ತ ಸಹಾಯಕ ಲೆಕ್ಕಾಧೀಕಾರಿಗಳಾದ ಗಜಾನನ ವ್ಹಿ ವೇರ್ಣೇಕರ, ಮಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯೇಕ್ಷರು ಹಾಗೂ ಸೂರಜ್‌ಎಜುಕೇಷನ್‌ಟ್ರಸ್ಟ್ ನಿರ್ದೇಶಕರಾದ ಮಂಜುನಾಥ್‌ರೇವಣಕರ, ಬೆಂಗಳೂರು ದೈವಜ್ಞಯುವಕ ಸಂಘದಅಧ್ಯಕ್ಷರು ಹಾಗೂ ಅಖಿಲ ಕರ್ನಾಟಕದೈವಜ್ಞ ಬ್ರಾಹ್ಮಣ ಸಂಘದಉಪಾಧ್ಯಕ್ಷರಾದ ಮಹೇಶ್ ಜಿ ಶೇಟ್ (ಬೇರಂಕಿ ), ಭಟ್ಕಳ ತಾಲೂಕಾ ಸಾಹಿತ್ಯ ಪರಿಷತ್ ನ ಗೌರವಕೋಶಾಧ್ಯೆಕ್ಷರು, ಶಿಕ್ಷಕರು ಸಾಹಿತಿಗಳು, ನಿರೂಪಕರಾದ ಶ್ರೀಧರ್ ಶೇಟ್ ಶಿರಾಲಿ,ಸಾಗರದಖ್ಯಾತ ಸರಾಫ್ ವರ್ತಕರು ಹಾಗೂ ಶ್ರೀ ಮಠದ ಟ್ರಸ್ಟಿಗಳಾದ ಶ್ರೀ ಅರುಣಕುಮಾರ್‌ಏನ್ ಶೇಟ್, ಮಂಗಳೂರಿನ ಲೆಕ್ಕಪರಿಶೋಧಕರಾದಕಿರಣ್ ಶೇಟ್‌ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮಜರುಗುವದು.
ಈ ಒಂದು ಐತಿಹಾಸಿಕ ಕಾರ್ಯಕ್ರಮದದ್ಯೋತಕವಾಗಿದೈವಜ್ಞ ಬ್ರಾಹ್ಮಣ ವಿಶೇಷ ಸಾಧಕರಾದಕನ್ನೇರಿಯಪ್ರಾ. ಸಿದ್ದಿಗಿರಿ ಗುರುಕುಲದ ಶ್ರೀ ಗುರುಮೂರ್ತಿ ಶೇಟ್, ಮಂಗಳೂರಿನ ಪ್ರಶಾಂತ ಶೇಟ್, ಅಭಿಜಿತ್ ಶೇಟ್, ಶಾರದಾ ಕೇಶವ ರಾಯ್ಕರ, ಶಿವಮೊಗ್ಗದ ಗಮಕ ಸಾಹಿತಿಗಳಾದ ರಾಮ ಸುಬ್ರಾಯ್ ಶೇಟ್, ನಾಗೇಶ್‌ಅನ್ವೇಕರ, ಬೆಂಗಳೂರಿನ ಪ್ರವೀಣ್‌ಕುಮಾರ್‌ರೇವಣಕರ, ರಾಘವೇಂದ್ರಏನ್ ಶೇಟ್‌ರವರನ್ನು ಗೌರವಿಸಿ ಸನ್ಮಾನಿಸಲಾಗುವದು.
ತದನಂತರ ಬ್ರಹತ್ ಕವಿಗೋಷ್ಠಿ ವಿಚಾರ ಸಂಕಿರಣ ಮತ್ತುಇನ್ನೂ ಮುಂದಾದ ಕಾರ್ಯಕ್ರಮಗಳು ಜರುಗುವುದರಿಂದ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಭಾಂದವರು ಈ ಒಂದು ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಮೂಲಕ ಶ್ರೀ ಜ್ಞಾನೇಶ್ವರಿದೇವಿಯ ಕೃಪಾಶಿರ್ವಾದಕ್ಕೆ ಮತ್ತುಉಭಯ ಶ್ರೀಗಳ ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕೆಂದುಖ್ಯಾತ ಸಾಹಿತಿಗಳು ಮತ್ತು ಬರಹಗಾರರಾದ ಪ್ರಶಾಂತಆರ್‌ದೈವಜ್ಞ ( ಬಾಬಣ್ಣ ) ರವರು ಪ್ರಕಟಣೆಯಲ್ಲಿ ವಿನಂತಿಸಿರುತ್ತಾರೆ.