ಆರೋಗ್ಯ ಸಚಿವರಿಂದ ಜಿಲ್ಲಾಸ್ಪತ್ರೆಗೆ ಭೇಟಿ

ಗದಗ 15:  ರಾಜ್ಯದ ಆರೋಗ್ಯ ಸಚಿವರಾದ ಬಿ. ಶ್ರೀರಾಮುಲು ಅವರಿಂದು   ಗದಗ ಜಿಲ್ಲಾಸ್ಪತ್ರಗೆ ಭೇಟಿ ನೀಡಿ  ಕೊರೋನಾ ವೈರಸ್ ಪ್ರಕರಣ ಸಂದರ್ಭದಲ್ಲಿ ಉಪಯೋಗಿಸುವ ಪ್ರತ್ಯೇಕ ವಾರ್ಡ ಹಾಗೂ ಚಿಕಿತ್ಸಾ  ಸನ್ನದ್ಧತೆ ಕುರಿತು  ಪರಿಶೀಲಿಸಿ ಮಾಹಿತಿ ಪಡೆದರು.  ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ, ಜಿಮ್ಸ ನಿರ್ದೇಶಕ ಡಾ. ಪಿ.ಎಸ್. ಭೂಸರೆಡ್ಡಿ , ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಜಾತಾ ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕ  ಡಾ. ಬಿ.ಸಿ. ಕರಿಗೌಡ್ರ ಉಪಸ್ಥಿತರಿದ್ದರು.