ಗದಗ 28: ಜಿಲ್ಲಾ ಆಡಳಿತ ಗದಗ, ಜಿಲ್ಲಾ ಪಂಚಾಯತ್ ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗದಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ ಮತ್ತು ಜಿಲ್ಲಾ ಐ.ಇ.ಸಿ ವಿಭಾಗ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 25-04-2025 ರಂದು ಬೆಳಿಗ್ಗೆ 8.30 ಘಂಟೆಗೆ ಯು.ಪಿ.ಹೆಚ್.ಸಿ ಬೆಟಗೇರಿ ಹುಯಿಲಗೋಳ ರಸ್ತೆ ಬಾಲಾಜಿ ಮಂದಿರ ಹತ್ತಿರ ಗದಗದಲ್ಲಿ ಡಾ ಎಸ್.ಎಸ್ ನೀಲಗುಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಗದಗ ಇವರು ಜಿಲ್ಲಾ ಮಟ್ಟದ ವಿಶ್ವ ಮಲೇರಿಯಾ ದಿನಾಚರಣೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ಗದಗ ಜಿಲ್ಲೆಯು 2027ರ ವೇಳೆಗೆ ಮಲೇರಿಯಾ ನಿವಾರಣಾ ಗುರಿ ಸಾಧನೆಯ ಉದ್ದೇಶದಿಂದ ಎಲ್ಲ ಹಂತಗಳಲ್ಲಿಯೂ ಕೈಗೊಳ್ಳಲಾಗಿರುವ ಚಟುವಟಿಕೆಗಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ 2027ರ ವೇಳೆಗೆ ಶೂನ್ಯ ಸ್ಥಳೀಯ ಮಲೇರಿಯಾ ವನ್ನು ಖಚಿತಪಡಿಸಿಕೊಂಡು ಶೂನ್ಯ ಮಲೇರಿಯಾ ವರ್ಗೀಕರಣ ವನ್ನು ಸಾಧಿಸಿ, ಕೊನೆಯ ಮೈಲುಗಲ್ಲನ್ನು ತಲುಪುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಡಾ ಹೆಚ್.ಎಲ್ ಗಿರಡ್ಡಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಎಪ್ರಿಲ್- 25 ವಿಶ್ವ ಮಲೇರಿಯಾ ದಿನಾಚರಣೆ ಹಮ್ಮಿಕೊಳ್ಳುವ ಪ್ರಮುಖ ಉದ್ದೇಶಗಳು ತಿಳಿಸಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಪ್ರತಿ ವರ್ಷವು ವಾಡಿಕೆಯಂತೆ ಗಕಊಅ ಬೆಟಗೇರಿ, ಹುಯಿಲಗೋಳ ರಸ್ತೆ, ಬಾಲಾಜಿ ಮಂದಿರ ಹತ್ತಿರ ಗದಗದಲ್ಲಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ವರ್ಷದ ಸರ್ಕಾರದ ಘೋಷ ವಾಕ್ಯ ದೊಂದಿಗೆ ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. ಮರು ಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ, ಮರು ಉತ್ತೇಜನ ನೀಡೋಣ? ಉತ್ತೇಜ ನೀಡೋಣ ಎಂದು ತಿಳಿಸಿದರು.ಮಲೇರಿಯಾ ನಿವಾರಣೆ ನಿಟ್ಟಿನಲ್ಲಿ ಸಮುದಾಯ ಪಾತ್ರವು ಮಹತ್ವದಾಗಿದ್ದು ಈ ನಿಟ್ಟಿನಲ್ಲಿ ಅಗ್ಯತ ಸಹಕಾರವು ದೊರೆತಾಗ ಮಾತ್ರವೇ ಗುರಿ ಸಾಧನೆಯು ಸುಲಭ ಸಾಧ್ಯವಾಗುತ್ತದೆ. ಹಾಗೂ ಮಲೇರಿಯಾ ರೋಗ ಲಕ್ಷಣಗಳು ಕಂಡು ಹಿಡಿದು ಮುಂಜಾಗ್ರತ ಕ್ರಮ ಕೈಗೊಳ್ಳದಾಗಿ ಹೇಳಿದರು. ಮಲೇರಿಯಾ ನಿವಾರಣೆ ಗುರಿ ಸಾಧನೆಗೆ ಪೂರಕವಾಗುವಂತೆ ಮಾಹಿತಿಯನ್ನು ತಲುಪಿಸಲು ಎಲ್ಲ ಕ್ಷೇತ್ರಮಟ್ಟದ ಸಿಬ್ಬಂದಿಗಳು ಸದರಿ ಚಟುವಟಿಕೆಗಳ ಬಗ್ಗೆ ಕ್ರಿಯಾ ಯೋಜನೆ ಮಾಡಿಕೊಂಡು ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ಯಾವುದೇ ಮಲೇರಿಯಾ ಪ್ರಕರಣಗಳು ಕಂಡು ಬರಲಾರದ ಹಾಗೇ ನೋಡಿಕೊಳ್ಳಲು ತಿಳಿಸಿದರು.ರೋಪಸೇನ ಚವ್ಹಾಣ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳು ಗದಗ ಸದರಿ ಕಾರ್ಯಕ್ರಮಕ್ಕೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಸ್ವಾಗತ ಕೋರಿದರು. ಹಾಗೂ ಶ್ರೀ ಅಜಯಕುಮಾರ ಕಲಾಲ ಆರೋಗ್ಯ ನೀರೀಕ್ಷಣಾಧಿಕಾರಿಗಳು ಗದಗ ಡಿ.ವಿ.ಬಿ.ಡಿ.ಸಿ.ಪಿ ವಿಭಾಗ ವಂದರ್ನಾಪಣೆ ಮಾಡಿದರು.
ಈ ಸಂಧರ್ಬದಲ್ಲಿ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳಾದ ಡಾ ಆರುಂದತಿ ಕುಲಕರ್ಣಿ, ಜಿಲ್ಲಾಕ್ಷಯ ರೋಗ ನಿಯಂತ್ರಣ ಅಧಿಕಾರಿಗಳು ಗದಗ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಬಸವರಾಜ ಬಳ್ಳಾರಿ, ಡಾ ಪ್ರಿತ್ ಖೋನಾ, ತಾಲ್ಲೂಕಾ ಆರೋಗ್ಯ ಅಧಿಕಾರಿಗಳು ಗದಗ ಮಧುಮತಿ, ವೈದ್ಯಾಧಿಕಾರಿಗಳು ಯು.ಪಿ.ಹೆಚ್.ಸಿ ಬೆಟಗೇರಿ, ಡಾ ಸುಧಾ ಕಳಸದ ವೈದ್ಯಾಧಿಕಾರಿಗಳು ಚಿಂಚಲಿ, ಶ್ರೀಮತಿ ಪುಷ್ಪಾ ಪಾಟೀಲ ಡಿ.ವಾಯ್.ಹೆಚ್.ಇ.ಓ, ಶ್ರೀಮತಿ ಗೀತಾ ಡಿ.ವಾಯ್.ಹೆಚ್.ಇ.ಓ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಲಯದ ಸಿಬ್ಬಂದಿಗಳಾದ ರಿಯಾಜ್ ಘೂಡುನಾಯ್ಕರ, ಎಮ್. ಹೆಚ್ ಕದಾಂಪೂರ, ಎಸ್.ಎನ್ ಲಿಂಗದಾಳ, ಬಿ.ಸಿ. ಹಿರೇಹಾಳ, ಎಮ್.ಎಫ್ ಕಲಕಂಬಿ, ಬಸವರಾಜ ಸೋಮಗೊಂಡ, ರೋಹಿತ್ ಹುಲ್ಲೂರು, ಮೈಲಾರಿ ಬಿಳೇಎಲಿ, ವಾಯ್.ಯಾವ್ ಹಕ್ಕಿ, ಆರ್.ವಿ ಗುರಣ್ಣನವರ, ವಾಯ್.ವಾಯ್ ಕಡೇಮನಿ, ಫಕಿರೇಶ ರಾಮಗೇರಿ, ನಾಗರಾಜ ಜೋಷಿ, ನಧಾಫ ಮೃತ್ಯುಂಜಯ ವೀ ಕು.ಹಿರೇಮಠ, ಮಂಜುನಾಥ ಸಜ್ಜನರ, ರವಿ ಪುತಲೇಕರ, ಕೃಷ್ಣಾ ಗಾಡರಡ್ಡಿ, ಶಾಮವೇಲ್ ಕರಡಿಗುಡ್ಡ, ನಜೀರಅಹ್ಮದ ನದಾಫ, ಸವೀತಾ ಪವಾರ ಆರೋಗ್ಯ ಸುರಕ್ಷಣಾಧಿಕಾರಿಗಳು, ಆರ್.ಎಸ್ ಹೊಸೂರು, ಎಸ್.ಹೆಚ್ ಮುರನಾಳ, ಉಪ್ಪಾರ, ಜಯಶ್ರೀ ದಬಾಲಿ, ಆರ್.ಆರ್. ಅಡ್ಡನವರ, ವಾಯ್.ಎ ವಡ್ಡಟ್ಟಿ, ಲಕ್ಷ್ಮೀ ಪೂಜಾರ, ಮತ್ತು ಗದಗ ನಗರದ ಆಶಾ ಕಾರ್ಯಕರ್ತೆಯರು, ಕ್ಷೇತ್ರ ಮಟ್ಟದ ಅಧಿಕಾರಿಗಳ ವೃಂದ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿತು.