ಬಳ್ಳಾರಿ12: ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆ-ಸಮಾರಂಭ ಅಂತ ಕಾಲಹರಣ ಮಾಡದೇ ಪ್ರತಿ ಗುರುವಾರ ಜಿಲ್ಲೆಯಲ್ಲಿರುವ 5ರಿಂದ 10 ಶಾಲೆಗಳಿಗೆ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಬೇಕು; ನಿರ್ಲಕ್ಷ್ಯ ವಹಿಸಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಡಿಡಿಪಿಐ ಮತ್ತು ಡಿಎಚ್ಒ ಅವರು ಪ್ರತಿ ಶಾಲೆ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡುವಾಗ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ಒದಗಿಸಬೇಕು. ಇದರಿಂದ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತದೆ ಎಂದರು.
ಉದ್ಯೋಗ ಖಾತರಿ ಯೋಜನೆ ಅಡಿ ಮಾನವ ದಿನಗಳ ಸೃಜನೆಯಲ್ಲಿ ನಮಗೆ ನೀಡಲಾಗಿರುವ 45.95 ಲಕ್ಷ ವಾಷರ್ಿಕ ಗುರಿಯಲ್ಲಿ ಶೇ.33ರಷ್ಟು ಸಾಧನೆಯನ್ನು ಇದುವರೆಗೆ ಮಾಡುವುದರ ಮೂಲಕ ರಾಜ್ಯದಲ್ಲಿ ಬಳ್ಳಾರಿ ಮೊದಲನೇ ಸ್ಥಾನದಲ್ಲಿದೆ. ನಿಗದಿತ ಸಮಯದಲ್ಲಿ ಹಣ ಪಾವತಿಸುವಲ್ಲಿಯೂ ಮೊದಲನೇ ಸ್ಥಾನ ಹೊಂದಿದೆ ಎಂದು ಹೇಳಿದ ಅವರು, ನರೇಗಾ ಅಡಿ ಮೋಕಾ,ಸೋಗಿ, ಮೈಲಾರ ಸೇರಿದಂತೆ 14 ಗ್ರಾಪಂಗಳಲ್ಲಿ ತಲಾ 70ಲಕ್ಷ ರೂ.ವೆಚ್ಚದಲ್ಲಿ ರಾಜೀವಗಾಂಧಿ ಸೇವಾಕೇಂದ್ರ ಮತ್ತು ಮಿನಿಗ್ರಾಮಸೌಧ ನಿಮರ್ಿಸಲಾಗುವುದು ಎಂದರು.
ರಾಜೀವಗಾಂಧಿ ಚೈತನ್ಯ ಯೋಜನೆ(ಸ್ವ ಉದ್ಯೋಗ ಮತ್ತು ವೃತ್ತಿ ಕೌಶಲ್ಯು ಅಭಿವೃದ್ಧಿ) ಅಡಿ 1882 ನಿರುದ್ಯೋಗಿ ಯುವಕರಿಗೆ ಸಬ್ಸಿಡಿ ಸಾಲ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಬೀಜಗಳು ಸಮರ್ಪಕವಾಗಿದ್ದು,ಕಳಪೆ ಬೀಜಗಳ ಬಗ್ಗೆ ಇದುವರೆಗೆ ವರದಿಯಾಗಿಲ್ಲ. ರಾಸಾಯನಿಕ ಗೊಬ್ಬರಗಳ ಪ್ರಮಾಣ ಸಾಕಷ್ಟಿದೆ ಎಂದು ಕೃಷಿ ಇಲಾಖೆ ಜಂಟಿ ನಿದರ್ೇಶಕ ದಿವಾಕರ್ ಅವರು ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಕೈಗಾರಿಕೆ,ತೋಟಗಾರಿಕೆ,ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಸುಧೀರ್ಘ ಚಚರ್ೆ ನಡೆಯಿತು.ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.