ಜಿಲ್ಲಾ ವಿಭಜನೆ ಸರ್ಕಾರದ ಮುಂದೆ ಇಲ್ಲ : ಸಚಿವ ಮಂಕಾಳು ವೈದ್ಯ

District division is not before the government: Minister Mankalu Vaidya

ಜಿಲ್ಲಾ ವಿಭಜನೆ ಸರ್ಕಾರದ ಮುಂದೆ ಇಲ್ಲ : ಸಚಿವ ಮಂಕಾಳು ವೈದ್ಯ

ಕಾರವಾರ 26  : ಜಿಲ್ಲಾ ವಿಭಜನೆ ಸರ್ಕಾರದ ಮುಂದೆ ಇಲ್ಲ. ಬಜೆಟ್ ನಲ್ಲಿ ಈ ವಿಷಯ ಬರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.ಕಾರವಾರದಲ್ಲಿ ಗಣರಾಜ್ಯೋತ್ಸವ ಸಮಾರಂಭದ ನಂತರ ರವಿವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ ಜಿಲ್ಲೆಯ ಅಭಿವೃದ್ಧಿಯ ಹಲವು ವಿಷಯ ಪ್ರಸ್ತಾಪಿಸಿದರು.ಉತ್ತರ ಕನ್ನಡ ಜಿಲ್ಲೆ ವಿಸ್ತಾರವಾಗಿದೆ. ಜಿಲ್ಲೆಯ ವಿಭಜನೆ ಬೇಕು - ಬೇಡ ಎಂಬ ಎರಡೂ ಮಾತು ಇದೆ. ಆದರೆ ಸದ್ಯಕ್ಕೆ ಅವಶ್ಯಕತೆ ಇಲ್ಲ. ದೊಡ್ಡ ಜಿಲ್ಲೆ ಆದ ಕಾರಣ ವಿಭಜನೆ ಆದರೆ ಆಡಳಿತಾತ್ಮಕ ಅನುಕೂಲ ಇದೆ. ಮುಂದೆ ಈ ಬಗ್ಗೆ ಹಿರಿಯರು ನೋಡುತ್ತಾರೆ ಎಂದರು.ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ, ಗ್ಯಾರಂಟಿ ಯೋಜನೆಯ ಪ್ರಯೋಜನಕ್ಕಾಗಿ 1500 ಕೋಟಿ ನನ್ನ ಜಿಲ್ಲೆಗೆ ಬರುತ್ತಿದೆ. ಜನರಿಗೆ ನೇರವಾಗಿ ಅವರ ಖಾತೆಗೆ ಹಣ ಹೋಗುತ್ತಿದೆ ಎಂದರು. ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.ಸ್ವಂತ ಕಟ್ಟಡದಲ್ಲಿ ಅಂಗನವಾಡಿಗಳು ಇರಬೇಕು ಎಂಬುದು ನನ್ನ ಕನಸು. ಈ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದರುಶಿಕ್ಷಣ ,ಆರೋಗ್ಯಕ್ಕೆ ಮೊದಲ ಆದ್ಯತೆ, ಮೆಡಿಕಲ್ ಕಾಲೇಜುಆಸ್ಪತ್ರೆ ಮೇಲ್ದರ್ಜೆಗೆ ಏರಿಸಲಾಗಿದೆ.ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಕಾರವಾರದಲ್ಲಿ ಆರಂಭವಾಗಲಿದೆ. ಎಲ್ಲಾ ಯಂತ್ರಗಳು ಸಹ ಬರಲಿವೆ ಎಂದರು .ಶಿರಸಿ, ಕುಮಟಾದಲ್ಲಿ ಸಹ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಆಗಲಿ. ಖಾಸಗಿಯವರು ಮಾಡುವುದಾದರೆ ಅದಕ್ಕೂ ಸ್ವಾಗತ ಎಂದು ಸಚಿವ ವೈದ್ಯ ಹೇಳಿದರು.ಕುಡಿಯುವ ನೀರಿನ ಸಮಸ್ಯೆಗೆ ಸಾವಿರ ಕೋಟಿ ರೂ.ಅನುದಾನದಲ್ಲಿ ನಡಿತಾ ಇದೆ. ಕುಡಿಯುವ ನೀರಿನ ಸಮಸ್ಯೆ ಇರಲ್ಲ. 240 ಕೋಟಿ ರೂ. ಶರಾವತಿ ಯೋಜನೆಯಿಂದ ಭಟ್ಕಳ ತನಕ ನೀರು ಕೊಡಲಾಗುತ್ತಿದೆ.ಸ್ಥಳೀಯ ಸಂಸ್ಥೆಗಳು ಸಹ ನೀರಿನ ಸಮಸ್ಯೆ ಬಗೆ ಹರಿಯುತ್ತಿವೆ. ಎಲ್ಲಾ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಯೋಜನೆ ತರಲಾಗುತ್ತಿದೆ. ಹೊಸದಾಗಿ ಶರಾವತಿ ನದಿ ನೀರಿನ ಪಂಪ್ ಸ್ಟೋರೇಜ್ ಮೂಲಕಗೇರುಸೊಪ್ಪ ವಿದ್ಯುತ್ ಉತ್ಪಾದನಾ ಯೋಜನೆ ಅನುಷ್ಠಾನ ಆಗುವುದರಲ್ಲಿದೆ. ಈ ಯೋಜನೆ ಅನುಷ್ಠಾನ ಆದರೆ , ವಿದ್ಯುತ್ ಉತ್ಪಾದನೆಯಲ್ಲಿ ಶೇ. 50 ನ್ನು ನಾವು ರಾಜ್ಯಕ್ಕೆ ನೀಡಿದಂತಾಗುತ್ತದೆ. ಬಿಜೆಪಿ ಕಾಲದಲ್ಲಿನಿಂತು ಹೋದ ಸೇತುವೆ ಕಾಮಗಾರಿ ನಡೆಯುತ್ತಿವೆ. ಬಿಜೆಪಿಯವರಿಗೆ ಸುಳ್ಳು ಹೇಳುವುದು ಮಾತ್ರ ಗೊತ್ತು ಎಂದು ಟೀಕಿಸಿದರು.ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಭೂ ಸ್ವಾಧೀನ ಮಾಡಿಕೊಡುತ್ತಿಲ್ಲ ,ಸಹಕಾರ ಕೊಡುತ್ತಿಲ್ಲ ಎಂದು ಸಂಸದ ಕಾಗೇರಿ ಅಕ್ಷೇಪ ವ್ಯಕ್ತಪಡಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಕೆಂಡಾಮಂಡಲರಾದ ಸಚಿವ ವೈದ್ಯ,ಐಆರ್ ಬಿ ಕಂಪನಿ ಕೇಂದ್ರ ಸರ್ಕಾರದ ಮಂತ್ರಿಯ ಮಗನಿಗೆ ಸೇರಿದ್ದು, ಅದಕ್ಕಾಗಿ ಕೆಲಸ ವಿಳಂಬವಾಗಿದೆ. ಉತ್ತರ ಕನ್ನಡ ಸಂಸದರು ಯೋಚಿಸಿ ಮಾತಾಡಬೇಕು. ಐಆರ್ ಬಿ ಕಾಳಿ ಬ್ರಿಜ್‌ ನಿರ್ವಹಣೆ ಮಾಡದ ಕಾರಣ ಕುಸಿಯಿತು. ಇದಕ್ಕೆ ಯಾರು ಹೊಣೆ ಎಂದು ಸಚಿವ ಮಂಕಾಳು ವೈದ್ಯ ಪ್ರಶ್ನಿಸಿದರು.ಕುಮಟಾ ಶಿರಸಿ ರಸ್ತೆ ಕಾಮಗಾರಿಗಾಗಿ ಸಂಚಾರ ಬಂದ್ ಫೆಬ್ರವರಿ ನಂತರವೂ ಮುಂದುವರಿಯುವ ಬಗ್ಗೆ ಸಂಸದರು ಉತ್ತರಿಸಬೇಕು ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.ಕಾನೂನು ಕೈಗೆತ್ತಿಕೊಳ್ಳುವವರ ಬಗ್ಗೆ ಪೊಲಿಸ್ ಇಲಾಖೆ ಕ್ರಮ ತೆಗೆದುಕೊಂಡಿದೆ ಎಂದರು. ಜಿಲ್ಲೆಯ ಹಲವು ವಿಷಯಗಳನ್ನು ಪೊಲೀಸರು, ಜಿಲ್ಲಾಧಿಕಾರಿ ಉತ್ತಮವಾಗಿ ನಿರ್ವಹಿಸಿದ್ದಾರೆ. ಯಾವುದೇ ಗಂಭೀರ ಸಮಸ್ಯೆಗಳು ಇಲ್ಲ ಎಂದರು .ಮರಳು ಸಮಸ್ಯೆ ಬಗೆ ಹರಿಯಲಿದೆ. ಪಶುವೈದ್ಯ ಕೊರತೆ ನೀಗಲಿದೆ. ಜಿಲ್ಲೆಯಲ್ಲಿ ಬಿಡಾಡಿ ದನಗಳು ಇಲ್ಲ. ಎಲ್ಲ ದನಗಳಿಗೂ ಮಾಲೀಕರು ಇದ್ದಾರೆ. ಅವರು ಮೇಯಲು ಹಾಗೆ ಬಿಟ್ಟಿರುತ್ತಾರೆ ಎಂದರು.ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಶಾಸಕ ಸೈಲ್ ಅವರ ಜೊತೆಗೆ ಇದ್ದರು.