ಹೊರ ರಾಜ್ಯದ ಕಾರ್ಮಿಕರನ್ನು ಕಳುಹಿಸಿ ಕೊಡಲು ಜಿಲ್ಲಾಡಳಿತ ವ್ಯವಸ್ಥೆ

ಮಂಡ್ಯ ಮೇ, 24,ಭಾನುವಾರದ ಲಾಕ್ ಡೌನ್ ನಡುವೆಯೂ ಹೊರ ರಾಜ್ಯದ ಕಾರ್ಮಿಕರನ್ನು  ಕಳುಹಿ ಕೊಡಲು ಜಿಲ್ಲಾಡಳಿತ ಅಗತ್ಯ ವ್ಯವಸ್ಥೆ ಮಾಡುತ್ತಿದೆ.ಮಂಡ್ಯ ಜಿಲ್ಲೆಯ ವಿವಿಧೆಡೆ ನೆಲೆಸಿರುವ  ಬಿಹಾರ ಮೂಲದ 200 ಕಾರ್ಮಿಕರು.ಗುರುತಿಸಿರುವ ಜಿಲ್ಲಾಡಳಿತ  ಬಸ್ ನಿಲ್ದಾಣದಲ್ಲಿ ಕಾರ್ಮಿಕರಿಗೆ ಪ್ರಯಾಣದ ಮಾರ್ಗಸೂಚಿ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.ಮಂಡ್ಯದ ಪಶ್ಚಿಮ ಠಾಣೆ ಪೊಲೀಸರು ಕಾರ್ಮಿಕರಿಗೆ ಮಾರ್ಗಸೂಚಿ, ತಿಳಿವಳಿಕೆ ನೀಡಿದ್ದು  ಮಂಡ್ಯದಿಂದ ಮೈಸೂರು ರೈಲು ನಿಲ್ದಾಣಕ್ಕೆ ಕರೆದೊಯ್ಯಲು ಸಿದ್ದತೆ ಮಾಡುತ್ತಿದ್ದಾರೆ.