ಮಲಪ್ರಭಾ ಬೆಣ್ಣೆಹಳ್ಳ ಪ್ರವಾಹ ನೆರೆ ಸಂತ್ರಸ್ತರಿಗೆ ಜಿಲ್ಲಾಡಳಿತ ಸಕಾಲಿಕ ನೆರವು

ಗದಗ 10:  ಮಲಪ್ರಭಾ ನವಿಲುತೀರ್ಥ ಜಲಾಶಯದಿಂದ ಗುರುವಾರ ಸಂಜೆಗೆ ಹೊರ ಹರಿವಿನ ಪ್ರಮಾಣ 1,18,000 ಕ್ಯೂಸೆಕ್ಗೆ ಏರಿಕೆಯಾಗಿ ಬೆಣ್ಣೆಹಳ್ಳ ಕೂಡಾ ಪ್ರವಾಹ ಬಂದಿದ್ದರಿಂದ ಗದಗ ಜಿಲ್ಲೆಯ ನರಗುಂದ ತಾಲೂಕಿನ 16 ಹಾಗೂ  ರೋಣ ತಾಲೂಕಿನ 16 ಗ್ರಾಮಗಳು ಜಲಾವೃತವಾಗಿವೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

     ಜಿಲ್ಲೆಯ ಪ್ರವಾಹ ಪರಿಸ್ಥಿತಿ ಕುರಿತು ಅವಲೋಕಿಸಲು ಆಗಮಿಸಿದ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಗದಗ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಕೊಣ್ಣೂರಿನಲ್ಲಿಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಜನರ ಸಂಕಷ್ಟ ನಿವಾರಣೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 08372-239177, ಜಿಲ್ಲಾ ಪೋಲಿಸ್ ಕಚೇರಿಯಲ್ಲಿ 100. ನರಗುಂದ ತಹಸೀಲ್ದಾರ ಕಚೇರಿಯಲ್ಲಿ 08377-245243 ಹಾಗೂ ರೋಣ ತಹಶೀಲ್ದಾರ ಕಚೇರಿಯಲ್ಲಿ 08381-267239 ಸಹಾಯ ದೂರವಾಣಿಗಳನ್ನು ಪ್ರಾರಂಭಿಸಲಾಗಿದೆ.

ಪ್ರವಾಹ ಪೀಡಿತ ಗ್ರಾಮಗಳು: ನರಗುಂದ ತಾಲೂಕಿನ ಮೂಗನೂರು, ಬನಹಟ್ಟಿ ಕುರ್ಲಗೇರಿ, ಸುರಕೋಡ, ಹದಲಿ, ಗಂಗಾಪೂರ, ಖಾನಾಪೂರ, ರಡ್ಡೇರ ನಾಗನೂರು, ವಾಸನ, ಬೆಳ್ಳೇರಿ, ಲಕಮಾಪೂರ, ಬೂದಿಹಾಳ, ಕಟ್ಲಿ, ಕಲ್ಲಾಪೂರ, ಶಿರೋಳ ಹಾಗೂ ಕೊಣ್ಣೂರ. 

ರೋಣ ತಾಲೂಕಿನ ಹೊಳೆಮಣ್ಣೂರ, ಗಾಡಗೋಳಿ, ಹೊಳೆ ಆಲೂರು, ಅಮರಗೋಳ, ಹೊಳೆಹಡಗಲಿ, ಕುರುವಿನಕೊಪ್ಪ, ಬಸರಕೋಡ, ಬಿ.ಎಸ್.ಬೇಲೇರಿ, ಮಾಳವಾಡ, ಬೋಪಳಾಪೂರ, ವೈ. ಎಸ್. ಹಡಗಲಿ, ಅಸೂಟಿ, ಕರಮುಡಿ, ಮೆಣಸಗಿ, ಗುಳಗುಂದಿ ಹಾಗೂ ಯಾವಗಲ್ಲ. 

      ನರಗುಂದ ತಾಲೂಕಿನ ಸಂತ್ರಸ್ಥರಿಗೆ ಅಲ್ಲಿನ ಬಸವೇಶ್ವರ ಸಮುದಾಯ ಭವನ ಹಾಗೂ ಎ.ಪಿ.ಎಂ.ಸಿಗಳು ಸೇರಿದಂತೆ ವಿವಿಧ ಪರಿಹಾರ ಕೇಂದ್ರಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ರೋಣ ತಾಲೂಕಿನ ಸಂತ್ರಸ್ಥರಿಗೆ ಗದುಗಿನ ತೋಂಟದಾರ್ಯ ಕಲ್ಯಾಣ ಮಂಟಪ ಸೇರಿದಂತೆ ರೋಣ ತಾಲೂಕಿನ ವಿವಿಧ ಗ್ರಾಮಗಳ ಶಾಲೆಗಳಲ್ಲಿ ಪರಿಹಾರ ಕೇಂದ್ರಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. 

ನರಗುಂದ ತಾಲೂಕಿನಲ್ಲಿ 1200 ಹಾಗೂ ರೋಣದಲ್ಲಿ 2000 ಸೇರಿದಂತೆ ಅಂದಾಜು 3200 ಮನೆಗಳಿಗೆ ಹಾನಿಯಾಗಿದ್ದು ಒಟ್ಟಾರೆ 5,902ಹೆ.ಗಳ ಬೆಳೆ ಹಾನಿ ಅಂದಾಜಿಸಲಾಗಿದೆ. ಈ ಎರಡು ತಾಲೂಕುಗಳ ತಹಶೀಲ್ದಾರ ನೇತೃತ್ವದಲ್ಲಿ ಐದು ಮಂದಿ ಅಧಿಕಾರಿಗಳು ತಾಲೂಕು ಮಟ್ಟದ ಪ್ರವಾಹ ಸಮಿತಿ ನೇಮಿಸಿದ್ದು ಪ್ರವಾಹ ಹಾಗೂ ಸಂತ್ರಸ್ಥರ ಅಗತ್ಯದ ನೆರವಿನ ಕುರಿತು ಸದಾ ನಿಗಾಯಿಡಲು ಜವಾಬ್ದಾರಿವಹಿಸಲಾಗಿದೆ.                                     ಪ್ರವಾಹ ಪರಿಸ್ಥಿತಿ ಉಂಟಾದ ಸ್ಥಳದಲ್ಲಿ ಅಗ್ನಿಶಾಮಕ ಎನ್ಡಿಆರ್ಎಫ್ ತಂಡದ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದು, ಸ್ಥಳದಲ್ಲಿಯೇ ರಕ್ಷಣಾ ಕಾರ್ಯದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಧಾರಾಕಾರ ಮಳೆಯಿಂದಾಗಿ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ದಿ. 8ರಿಂದ 9ವರೆಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. 

    ಇದಲ್ಲದೇ ಪ್ರವಾಹ ಪೀಡಿತವಾಗುವ ಗ್ರಾಮಗಳನ್ನು ಮುಂದಾಗಿಯೇ ಯೋಚಿಸಿ ಪರಿಸ್ಥಿತಿಗೆ ಅನುಗುಣವಾಗಿ ಸ್ಥಳಾಂತರ ಪರಿಹಾರಕ್ಕೆ ಆಯಾಗ್ರಾಮಗಳಲ್ಲಿ ಒಟ್ಟು ಜಿಲ್ಲಾ ಮಟ್ಟದ ನರಗುಂದ ತಾಲೂಕಿಗೆ 13 ಹಾಗೂ ರೋಣಕ್ಕೆ 27 ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಆಯಾ ಗ್ರಾಮದ ಸಂಪೂರ್ಣ ಜವಾಬ್ದಾರಿ ವಹಿಸಿ ಕಾರ್ಯನಿರ್ವಸಲು ತಿಳಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ 11 ಸದಸ್ಯರ ಸಮಿತಿ ಇಡೀ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಕುರಿತು ನಿಗಾವಹಿಸುತ್ತಿದೆ. 

ಮಳೆ: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದ್ದು ಜೂನ್ನಲ್ಲಿ ವಾಡಿಕೆ ಮಳೆ 85.2 ಪೈಕಿ 89.5 ಮೀ.ಮೀ. ಮಳೆಯಾಗಿದೆ. ಜುಲೈನಲ್ಲಿ ವಾಡಿಕೆ 70.4ರ ಪೈಕಿ 94.8 ಮೀ.ಮೀ. ಹಾಗೂ ಅಗಸ್ಟನಲ್ಲಿ ವಾಡಿಕೆ ಮಳೆ 75.3 ಮೀ.ಮೀ ಅಗಸ್ಟ 8 ರ ವರೆಗೆ 68 ಮೀ.ಮಿ. ಮಳೆಯಾಗಿರುತ್ತದೆ. ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾನ್ಯ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. 

ಬಾಗಲಕೋಟೆ ಸಂಸದ ಪಿ.ಸಿ.ಸಿದ್ದನಗೌಡರ, ನರಗುಂದ ಶಾಸಕ ಸಿ.ಸಿ.ಪಾಟೀಲ, ವಿಧಾನಪರಿಷತ ಸದಸ್ಯರುಗಳಾದ ಎಸ್.ವಿ.ಸಂಕನೂರ, ಎಂ.ರವಿಕುಮಾರ, , ಗದಗ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಆಮ್ಲನ್ ಆದಿತ್ಯ ಬಿಸ್ವಾಸ್, ಗದಗ ಜಿಲ್ಲಾಧಿಕಾರಿ. ಎಂ.ಜಿ. ಹಿರೇಮಠ, ಜಿಲ್ಲಾ ಪೊಲೀಸ್, ವರಿಷ್ಠಾಧಿಕಾರಿ ಶ್ರೀನಾಥ ಜೋಷಿ, ಜಿ.ಪಂ. ಸಿಇಓ ಮಂಜುನಾಥ ಚವ್ಹಾಣ ಜನಪ್ರತಿತಿನಿಧಿಗಳು, ಅಧಿಕಾರಿಗಳು, ಗ್ರಾಮಸ್ಥರು ಇದ್ದರು.