30 ರಿಂದ ಜಿಲ್ಲಾ ಪೊಲೀಸ್ ವಾಷರ್ಿಕ ಕ್ರೀಡಾಕೂಟ

ಬಾಗಲಕೋಟೆ 27: ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾ ಪೊಲೀಸ್ ವಾಷರ್ಿಕ ಕ್ರೀಡಾಕೂಟಗಳನ್ನು ನವೆಂಬರ 30 ರಿಂದ ಡಿಸೆಂಬರ 2 ವರೆಗೆ ಒಟ್ಟು ಮೂರು ದಿನಗಳ ಕಾಲ ನವನಗರದ ಡಿ.ಎ.ಆರ್ ಪೊಲೀಸ್ ಮೈದಾನದಲ್ಲಿ ನಡೆಸಲು ತಿಮರ್ಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ತಿಳಿಸಿದ್ದಾರೆ.

ಈ ಕುರಿತು ಇತ್ತೀಚೆಗೆ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಕ್ರೀಡಾಕೂಡಗಳಲ್ಲಿ ಒಟ್ಟು 8 ತಂಡಗಳನ್ನಾಗಿ ರಚಿಸಲಾಗಿದ್ದು, ಬಾಗಲಕೋಟ ಶಹರ ಮತ್ತು ಗ್ರಾಮೀಣ ವೃತ್ತಗಳು, ಹುನಗುಂದ ವೃತ್ತ, ಬಾದಾಮಿ ವೃತ್ತ, ಡಿ.ಎ.ಆರ್ ಬಾಗಲಕೋಟ, ಬೀಳಗಿ ಠಾಣೆ ಮತ್ತು ಬನಹಟ್ಟಿ ವೃತ್ತ, ಜಮಖಂಡಿ ವೃತ್ತ, ಮುಧೋಳ ವೃತ್ತ ಹಾಗೂ ಜಮಖಂಡಿ ಮತ್ತು ಬಾಗಲಕೋಟ ಉಪವಿಭಾಗದ ಮಹಿಳಾ ತಂಡಗಳಾಗಿ ರಚಿಸಲಾಗಿದೆ ಎಂದರು.

ಪುರುಷರಿಗಾಗಿ 100, 200, 800, 1500, 5000 ಮೀಟರ್ ಓಟ, 4*100, 4*400 ಮೀಟರ್ ರಿಲೇ ಓಟ, ಉದ್ದ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಜಾವಲಿನ್ ಥ್ರೋ, ವಾಲಿಬಾಲ್, ಟಗ್ ಆಫ್ ವಾರ್, ಮಹಿಳಾ ಪೊಲೀಸ್ ಸಿಬ್ಬಂದಿಗಳಿಗಾಗಿ 100, 200, 400 ಮೀಟರ್ ಓಟ, ಉದ್ದ ಜಿಗಿತ, ಗುಂಡು ಎಸೆತ, ಅಧಿಕಾರಿ ಹಾಗೂ ಸಿಬ್ಬಂದಿಗಳಾಗಿ 303 ರೈಫಲ್, ಮಸ್ಕೇಟ್ ಶೂಟಿಂಗ್, ರೈಪಲ್ ಶೂಟಿಂಗ್, ಪಿಸ್ತೂಲ್ ಶೂಟಿಂಗ್, ಪಿಎಸ್ಐಗಳಿಗೆ ಕಡ್ಡಾಯವಾಗಿ 200 ಮತ್ತು 400 ಮೀಟರ್ ಓಟ ಹಮ್ಮಿಕೊಳ್ಳಲಾಗಿದೆ ಎಂದರು.

ಪೊಲೀಸ್ ಇಲಾಖೆ, ಪತ್ರಿಕಾ ಮಾಧ್ಯಮ, ಕಂದಾಯ ಇಲಾಖೆ, ಅಗ್ನಿಶಾಮಕ ಇಲಾಖೆ, ನ್ಯಾಯಾಂಗ ಇಲಾಖೆ, ನ್ಯಾಯಾಧೀಶರ ಬಾರ್ ಕೌನ್ಸಿಲ್, ಎಕ್ಸೈಜ್ ಇಲಾಖೆ, ಆರೋಗ್ಯ ಇಲಾಖೆ (ವೈದ್ಯರು)ಯವರಿಗೆ ಟೆನಿಸ್ ಬಾಲ್ ಕ್ರಿಕೆಟ್, ಶಾಟ್ಪುಟ್, ಜಾವಲಿನ್ ಥ್ರೋ, ಎಲ್ಲ ಪುರುಷ ಹಾಗೂ ಮಹಿಳಾ ಅಧಿಕಾರಿಗಳಿಗೆ ಬ್ಯಾಡ್ಮಿಂಟನ್ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ. ಲಿಪಿಕ ಪುರುಷ ಹಾಗೂ ಮಹಿಳಾ ಸಿಬ್ಬಂದಿಗಳಿಗಾಗಿ 100 ಮೀಟರ್ ಓಟ, 100 ಮೀಟರ್ ವೇಗದ ನಡಿಗೆ, ಗುಂಡು ಎಸೆತ, ಚಕ್ರ ಎಸೆತ, ಹೋಮ್ಗಾರ್ಡ ಇಲಾಖೆಯವರಿಗೆ 800 ಮೀಟರ್ ಓಟ, ಲಾಂಗ್ ಜಂಪ್, ಶಾಟ್ಪುಟ್, ಖಾಯಂ ಸ್ವೀಪರ್ ಮಹಿಳಾ ಸಿಬ್ಬಂದಿಗಳಿಗೆ ಲೆಮನ್ ಸ್ಪೂನ್ ಸ್ಪಧರ್ೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಿಶೇಷ ಘಟಕ, ಹೆಸ್ಕಾಂ ವಿಜಿಲೆನ್ಸ್, ಎಸಿಬಿ ಘಟಕ, ಇಂಟಲಿಜೆನ್ಸ್ ಘಟಕ, ಲೋಕಾಯುಕ್ತ ಘಟಕದವರಿಗೆ 100 ಮೀಟರ್ ಓಟ, ಶಾಟ್ಪುಟ್, ನಿಸ್ತಂತು, ಎಪ್ಪಿಯು, ವಾದ್ಯ ವೃಂದ, ಡಿಎಸ್ಬಿ, ಡಿಸಿಆರ್ಬಿ, ಡಿಸಿಬಿ ಸಿಬಂದಿಗಳಿಗಾಗಿ 100 ಮೀಟರ್ ಓಟ ಮತ್ತು ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗಾಗಿ 100 ಓಟ ಫಾಸ್ಟ್ ವಾಕ್, ಹಾಗೂ ಪೊಲೀಸ್ ಮಕ್ಕಳಿಗಾಗಿ ಗಂಡು ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಅತಿಥಿಗಳಿಗಾಗಿ ಜಮಖಾನಾ ಇವೆಂಟ್ಸ್ ಮತ್ತು ಮಹಿಳಾ ಅತಿಥಿಗಳಿಗೆ ಸಂಗೀತ ಖುಚರ್ಿ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಲು 17 ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡದ ನಾಯಕರನ್ನೊಳಗೊಂಡಂತೆ ಎಲ್ಲ ಸದಸ್ಯರು ಸಮವಸ್ತ್ರಗಳನ್ನು ಧರಿಸಬೇಕು. ಟ್ರ್ಯಾಕ್ ಮತ್ತು ಫೀಲ್ಡ್ ಆಟಗಳಿಗಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದೆಂದರು. ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭ ನವೆಂಬರ 30 ರಂದು ಬೆಳಿಗ್ಗ 8.30ಕ್ಕೆ ನೆರವೇರಲಿದೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಡಿಎಸ್ಪಿ ಎಸ್.ಬಿ.ಗಿರೀಶ್, ಕೆ.ವಿ.ಗುರುಶಾಂತಪ್ಪ, ವಿದ್ಯಾನಂದ ವಿ.ಎನ್, ಎಎಓ ವ್ಯಾಸರಾವ ದೇಶಪಾಂಡೆ, ಸಿಪಿಐ ಎಸ್.ಎಸ್.ಬಳಗಾರ, ಶ್ರೀಶೈಲ ಗಾಬಿ, ಡಿ.ಡಿ.ದೂಳಖೇಡ, ಕೆ.ಎಸ್.ಹಟ್ಟಿ, ಮಹಿಳಾ ಪೊಲೀಸ್ ಠಾಣೆಯ ಪಿಐ ಎಸ್.ಎಸ್.ತೇಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.