ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆ

District Level Science Model Exhibition Competition

ಕಾರವಾರ, ಫೆ.21: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ, ಕಾರವಾರ ಇವರ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2025 ರ ಪ್ರಯುಕ್ತ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯು ಜಿಲ್ಲಾಡಳಿತ ಕಾರ್ಯಾಲಯ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.  

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರೀಯಾ ಹಾಗೂ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಅಧ್ಯಕ್ಷರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಮಾಡಿದ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ ಸಲಹೆ ನೀಡಿದರು.  

ಉಪ ವಿಭಾಗಾಧಿಕಾರಿ ಕನಿಷ್ಕ ಶರ್ಮಾ ಹಾಗೂ ತಹಶೀಲ್ದಾರ ಎನ್‌.ಎಫ್‌. ನರೋ​‍್ಹನಾ ವಿದ್ಯಾರ್ಥಿಗಳು ಮಾಡಿದ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. 

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೆಶಕಿ ಲತಾ ನಾಯಕ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಚಂದ್ರಹಾಸ ರಾಯ್ಕರ, ಜಿ.ಎಸ್‌. ನಾಯ್ಕ ಹಾಗೂ ಶಾಲಾ ಶಿಕ್ಷಣ ಇಲಾಖೆ ಮತ್ತು ಇತರ ಇಲಾಖೆಯ ವಿವಿಧ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ನಿವೃತ್ತ ಪ್ರಾಧ್ಯಾಪಕ ಡಾ. ವಿ.ಎನ್‌. ನಾಯಕ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮಹತ್ವ ಹಾಗೂ ಉದ್ದೇಶವನ್ನು ಸಂಕ್ಷಿಪ್ತವಾಗಿ ತಿಳಿಸಿದರು. 

ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಗೆ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಪ್ರಕಾಶ ಅಣ್ವೇಕರ, ಸೆಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಸಂಜಯ ಸೂರ್ಯಭಟ್ತೀರ್ಪುಗಾರರಾಗಿ ಆಗಮಿಸಿದರು.  

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ರೋಹನ್ ರಾಜೇಂದ್ರಜಿ. ಭುಜ್ಲೆ ಪ್ರಾಸ್ತಾವಿಕ ಮಾತನಾಡಿ, ಸರ್ವರನ್ನು ಸ್ವಾಗತಿಸಿದರು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕಿ ಕವಿತಾ ಆರ್‌. ಮೇಸ್ತ ನಿರೂಪಿಸಿ ವಂದಿಸಿದರು.  

ವಿಜೇತರ ಪಟ್ಟಿ: ಕುಮಟಾ ಸಿ.ವಿ.ಎಸ್‌.ಕೆ. ಪ್ರೌಢಶಾಲೆಯ ವಿದ್ಯಾರ್ಥಿ ಮನೋಮಯ ಕುಸ್ಲೇಕರ, ಪ್ರಥಮೇಶ ಎಚ್‌.ಎನ್ ಪ್ರಥಮ, ಭಟ್ಕಳ ಅಲಿ ಪಬ್ಲಿಕ್ ಬಾಲಕೀಯರ ಪ್ರೌಢಶಾಲೆಯ ಹಫ್ಸಾ ಶೇಖ, ಖೈರುನಿಸಾ ಅರೀಬಾ ದ್ವಿತೀಯ, ಹಳಿಯಾಳದ ಸಾಂಬ್ರಾಣಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಚೈತನ್ಯಾ ಬಿ. ಬಮ್ಮಿಗಟ್ಟೆ, ಸಂಜಯ ಚಿಕ್ಕಮಠ ತೃತಿಯ, ಬಾಡದ ರಮಾಬಾಯಿ ಹನುಮಂತ ಬೆಣ್ಣೆ ಪ್ರೌಢಶಾಲೆಯ ಧೀಮಂತ ದೀಪಕ ನಾಯ್ಕ, ಗೌತಮ ಜಿ., ಸೆಂಟ್ ಜೊಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸರೋಶ ಮಖಬೂಲ್ ಅಹ್ಮದ್ ಶೇಖ, ಕ್ರಿಸ್ಟನ್ ಸೆಬೆಸ್ಟೀಯನ್ ಅವೇರಾ, ಅಂಕೋಲಾ ತಾಲೂಕಿನ ಕೇಣಿಯ ಸರ್ಕಾರಿ ಪ್ರೌಡಶಾಲೆಯ ಶ್ರೇಯಸ್ ನಾಯ್ಕ, ಮಯೂರ ನಾಯ್ಕ, ಕುಮಟಾ ಸಿ.ವಿ.ಎಸ್‌.ಕೆ. ಪ್ರೌಢಶಾಲೆಯ ಅಭೀಷೇಕ ವೆರ್ಣೆಕರ, ಪ್ರತೀಕ ಶಾನಭಾಗ, ಹೊನ್ನಾವರದ ಮಾರ್ಥೊಮಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಭಿನವ ಎಲ್‌. ಭಟ್, ಪ್ರಸನ್ನ ಜಿ. ಶೆಟ್ಟಿ, ಹೊನ್ನಾವರದ ಕರ್ಕಿಶ್ರೀ ಚಿನ್ನಕೇಶವ ಪ್ರೌಢಶಾಲೆಯ ಸ್ನೇಹಾ ಜಿ. ಮೇಸ್ತಾ, ಸುಮಂತ ತಿಮ್ಮಪ್ಪಾ ಹರಿಕಂತ್ರ, ಸಿದ್ದಾಪುರ ಪ್ರಶಾಂತಿ ಪ್ರೌಢಶಾಲೆಯ ಸುಮುಖ ಹೆಗಡೆ, ಚರಣ ಜಿ. ನಾಯ್ಕ, ಯಲ್ಲಾಪುರದ ಬಿಸಗೋಡ ಸರಕಾರಿ ಪ್ರೌಢಶಾಲೆಯ ಆಕಾಶ ಕುಣಬಿ, ಚೇತನ ಮಳಿಕ, ಚೇತನ ಮಳಿಕ, ಹಳಿಯಾಳದ ಕವಲವಾಡ ಸರಕಾರಿ ಪ್ರೌಢಶಾಲೆಯ ಗೌತಮ ಬಿ. ಕದಂ, ಹಾಗೂ ಮುರ್ಖವಾಡ ಚೈತನ್ಯಾ ಪ್ರೌಢಶಾಲೆಯ ಸಮರ್ಥ ಮಿರಾಶಿ ಸಮಾಧಾನಕರ ಬಹುಮಾನ ಪಡೆದರು.