ಲೋಕದರ್ಶನ ವರದಿ
ಕುಮಟಾ,8 : ದೇಶದ ಹಿಂದೂಗಳ ಬಹಳ ವರ್ಷಗಳ ಹಿಂದಿನ ಬೇಡಿಕೆಯಾದ ರಾಮಮಂದಿರ ನಿಮರ್ಾಣವು ಅತೀ ಶೀಘ್ರವಾಗಿ ಆಗಬೇಕು. ಅಲ್ಲದೇ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯವಾದ ರಾಮಮಂದಿರ ನಿಮರ್ಾಣಕ್ಕಾಗಿ ಕೇಂದ್ರ ಸಕರ್ಾರವನ್ನು ಒತ್ತಾಯಿಸುವದಕ್ಕಾಗಿ ಡಿ 10 ರಂದು ಸಂಜೆ 4.30 ಗಂಟೆಗೆ ಪಟ್ಟಣದ ಮಣಕಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಜನಾಗ್ರಹ ಸಭೆಯನ್ನು ಆಯೋಜಿಸಲಾಗಿದೆ ಎಂದು ವಿ ಹಿ ಪ ಜಿಲ್ಲಾಧ್ಯಕ್ಷ ಡಾ ವಿ ಜಿ ಶೆಟ್ಟಿ ತಿಳಿಸಿದರು.
ಅವರು ಶನಿವಾರ ಇಲ್ಲಿಯ ವನವಾಸಿ ಕಲ್ಯಾಣ ರತ್ನಾಕರ ಭವನದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಅಂದು ಜರುಗುವ ಉತ್ತರ ಕನ್ನಡ ಜಿಲ್ಲೆಯ ಜನಾಗ್ರಹ ಸಭೆಯಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿ ಮಾತನಾಡಲಿದ್ದಾರೆ. ಅದಲ್ಲದೇ ಆದಿಚುಂಚನಗಿರಿ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಹಾಸನ ಸುಜ್ಞಾನ ಪ್ರಭು ಪೀಠದ ಶ್ರೀ ಶಿವ ಸುಜ್ಞಾನತೀರ್ಥ ಸ್ವಾಮೀಜಿ, ಮೂಡಬಿದ್ರೆ ಕರಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ, ಕಾರವಾರ ರಾಮಕೃಷ್ಣಾಶ್ರಮದ ಭವೇಶಾನಂದ ಶ್ರೀಗಳು, ಮುಂಡಗೋಡ ಶ್ರೀ ಷ ಬ್ರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮುಂಡಗೋಡು ಪ ಪೂ ಮಾತೆ ಬಸವೇಶ್ವರಿ, ಇಂಚಗೇರಿ ಮಹಾಸಂಸ್ಥಾನ ಮಠದ ಸದ್ಗುರು ಸಮರ್ಥ ಡಾ ಎ ಸಿ ವಾಲಿ ಮಹಾರಾಜರು, ಸಾಲಗಾಂವ ಸದ್ಗುರು ಸಮರ್ಥ ವಿರೂಪಾಕ್ಷಪ್ಪ ಮಹಾರಾಜರು, ಹಳಿಯಾಳದ ಕೃಷ್ಣಾನಂದ ಭಾರತಿ ಸ್ವಾಮೀಜಿ, ಹಳಿಯಾಳದ ಸುಬ್ರಹ್ಮಣ್ಯ ಸ್ವಾಮೀಜಿ, ಹಳಿಯಾಳದ ಭಾವಾನಂದ ಸ್ವಾಮೀಜಿ, ಹಳಿಯಾಳ ಸಿದ್ಧಾರೂಡ ಮಠದ ಪ ಪೂ ಮಾತೋಶ್ರೀ ನಿಮರ್ಾಲಾನಂದ ದೇವಿ ಸೇರಿ ಒಟ್ಟೂ 13 ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ವಕ್ತಾರರಾಗಿ ವಿ ಹಿ ಪ ಕ್ಷೇತ್ರೀಯ ಸಂಘಟನಾ ಕಾರ್ಯದಶರ್ಿ ಕೇಶವ ಹೆಗಡೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ವಿ ಹಿ ಪ ಜಿಲ್ಲಾ ಕಾರ್ಯದಶರ್ಿ ಮಹೇಶ ನಾಯ್ಕ ಮಾತನಾಡಿ, ರಾಮನ ಜನ್ಮಭೂಮಿಯಲ್ಲಿಯೇ ರಾಮನ ಮಂದಿರ ನಿಮರ್ಾಣಕ್ಕೆ ಅಡ್ಡಿಯಾಗುತ್ತಿರುವುದು ವಿಷಾಧನೀಯವಾಗಿದೆ. ರಾಮ ಮಂದಿರವನ್ನು ಆದಷ್ಟುಬೇಗ ನಿಮರ್ಿಸಬೇಕು. ಈ ಕುರಿತಾದ ಜನಾಗ್ರಹ ಸಭೆಯಲ್ಲಿ ಜಿಲ್ಲೆಯಿಂದ 15-20 ಸಾವಿರ ಜನರು ಮಣಕಿ ಮೈದಾನದಲ್ಲಿ ಸೇರಲಿದ್ದೇವೆ. ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗಡೆ ಅವರಿಗೆ ಕೇಂದ್ರ ಸಕರ್ಾರಕ್ಕೆ ಮುಟ್ಟಿಸುವಂತೆ ಮನವಿಯನ್ನು ಅಂದು ಸಲ್ಲಿಸಲಿದ್ದೇವೆ. ಇದೊಂದು ಬೃಹತ್ ಜನಾಂದೋಲನ ಕಾರ್ಯಕ್ರಮವಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಪ್ರಮುಖರಾದ ರಾಮದಾಸ ಶೇಟ್, ಎಂ ಆರ್ ಭಟ್ಟ, ಎನ್ ಆರ್ ಮುಕ್ರಿ, ಕಿರಣ ಹೆಗಡೆ, ಮಂಜುನಾಥ ಶೇಟ್, ರೋಹಿದಾಸ್, ತಿಮ್ಮಪ್ಪಾ ಮುಕ್ರಿ, ಶ್ರೀಧರ ಸಾಲೆಹಕ್ಕಲ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.