ಬೆಳಗಾವಿ-3. ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ವತಿಯಿಂದ ಜಿಲ್ಲಾ ಮಟ್ಟದ ಅಂತರಶಾಲಾ ಮತ್ತು ಅಂತರ ಪಾಲಿಟೆಕ್ನಿಕ್ ಕಾಲೇಜುಗಳ ಪುಟ್ಬಾಲ್ ಪಂದ್ಯಾವಳಿಯನ್ನು ಡಿಸೆಂಬರ್ 27 ರಿಂದ 30 ರವರೆಗೆ ಹಮ್ಮಿಕೊಳ್ಳಲಾಗಿತ್ತು.
ಶಾಲಾ ವಿಭಾಗದಲ್ಲಿ ಸೆಂಟ್ಫಾಲ್ ಹೈಸ್ಕೂಲು ಜಿಲ್ಲಾ ಮಟ್ಟದ ಅಂತಿಮ ಪಂದ್ಯದಲ್ಲಿ ಗೆಲುವು ಪಡೆಯಿತು. ದ್ವಿತೀಯ ಸ್ಥಾನವನ್ನು ಲವ್ಡೇಲ್ ಸ್ಕೂಲ್ ತನ್ನದಾಗಿಸಿಕೊಂಡಿತು. ಅಂಟರ್ಪಾಲಿಟೆಕ್ನಿಕ್ ವಿಭಾಗದಲ್ಲಿ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಗೆಲುವು ಪಡೆಯಿತು. ದ್ವಿತೀಯ ಸ್ಥಾನವನ್ನು ಭರತೇಶ ಕಾಲೇಜು ಪಡೆಯಿತು. ಉತ್ತಮ ಡಿಫೆಂಡರ್, ಉತ್ತಮ ಗೋಲಕೀಪರ್, ಉತ್ತಮ ಗೋಲ್ ಸ್ಕೋರರ್ ಹಾಗೂ ಪಂದ್ಯಾವಳಿಯ ಉತ್ತಮ ಆಟಗಾರ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಪಂದ್ಯಾವಳಿಯ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ಸ್ಪೋಟ್ಸರ್್ನ ಪ್ರದ್ಯುಮ್ನ ಘನಫುಲೆ ಮಾತನಾಡಿ "ಜೀವನವನ್ನು ಆಟ ಮಾಡದೆ ಆಟವನ್ನೇ ಜೀವನ ಮಾಡಿ" ಎಂದು ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಿದರು. ಅಧ್ಯಕ್ಷತೆಯನ್ನು ಆರ್.ಎನ್.ಶೆಟ್ಟಿ ಕಾಲೇಜಿನ ಪ್ರಾಚಾರ್ಯ ಎಸ್.ಪಿ. ಹಿರೇಮಠ ವಹಿಸಿದ್ದರು. ಸ್ವಾಗತವನ್ನು ಕಲ್ಮೇಶ ಪಿರಣ್ಣವರ ಮಾಡಿದರು. ನಿರೂಪಣೆಯನ್ನು ಶ್ರೀಧರ ಪಾಟೀಲ ಮಾಡಿದರೆ ವಂದನಾರ್ಪಣೆಯನ್ನು ಶಿವಾನಂದ ಹಿರೇಮಠ ಅವರು ಮಾಡಿದರು. ಸೇಂಟ್ಫಾಲ್ ಶಾಲೆಯ ಪ್ರಾಚಾರ್ಯರಾದ ಫಾದರ್ ಪೆಡ್ರೋರೊಡ್ರಿಗ್ಸ್ ಬಹುಮಾನವನ್ನು ವಿತರಿಸಿದರು.