ಚಿತ್ರದುರ್ಗ, ಮಾರ್ಚ್ 30, ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಮಿಕ ರೋಗ ಹರಡದಂತೆ ತಡೆಯಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಚಿತ್ರದುರ್ಗ ನಗರದ ಒಟ್ಟು 10 ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳನ್ನು ತಾತ್ಕಾಲಿಕವಾಗಿ ಕ್ವಾರಂಟೈನ್ ಸೌಲಭ್ಯ ಒದಗಿಸುವ ಕಟ್ಟಡಗಳೆಂದು ಗುರುತಿಸಿ, ಈ ಕಟ್ಟಡಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವಶಕ್ಕೆ ನೀಡಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋವಿಡ್-19 ವೈರಾಣು ನಿಯಂತ್ರಣಕ್ಕಾಗಿ ಸಾರ್ವಜನಿಕರಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಕ್ವಾರಂಟೈನ್ ಸೌಲಭ್ಯ ಕಟ್ಟಡವನ್ನು ಒದಗಿಸಲು ಜಿಲ್ಲೆಯಲ್ಲಿ 10 ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಕ್ವಾರಂಟೈನ್ ಸೌಲಭ್ಯ ಒದಗಿಸುವ ಕಟ್ಟಡಗಳೆಂದು ಗುರುತಿಸಲಾಗಿದೆ. ಸಾಂಕ್ರಾಮಿಕ ಕಾಯ್ದೆ-1987 ಮತ್ತು ಕರ್ನಾಟಕ ಕೋವಿಡ್-19 ರೆಗ್ಯುಲೇಷನ್ ಕಾಯ್ದೆ 2020 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಚಿತ್ರದುರ್ಗದ ಈ ಕೆಳಗೆ ತಿಳಿಸಿರುವ ಕಟ್ಟಡಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವಶಕ್ಕೆ ನೀಡವಂತೆ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಆದೇಶಿಸಿದ್ದಾರೆ.
ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಎನ್‍ಹೆಚ್-48- ಸರ್ವೀಸ್ ರಸ್ತೆ, ಚಿತ್ರದುರ್ಗ. ಸಿಎಂಹೆಚ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ತುರುವನೂರು ರಸ್ತೆ, ಚಿತ್ರದುರ್ಗ. ಪತಂಜಲಿ ಆಸ್ಪತ್ರೆ, ಧರ್ಮಶಾಲಾ ರಸ್ತೆ, ಚಿತ್ರದುರ್ಗ. ಕೃಷ್ಣ ನರ್ಸಿಂಗ್ ಹೋಂ, ಲಕ್ಷ್ಮೀಬಜಾರ್, ಚಿತ್ರದುರ್ಗ. ಸುನೀತಾ ನರ್ಸಿಂಗ್ ಹೋಂ, ಸಿ.ಕೆ.ಪುರ ಬಡಾವಣೆ, ಚಿತ್ರದುರ್ಗ. ಅರ್ಜುನ್ ಯುರೋಲಜಿ ಸೆಂಟರ್, ಬಿ.ಎಲ್.ಗೌಡ ಲೇಔಟ್, ಚಿತ್ರದುರ್ಗ. ಬಸಪ್ಪ ಆಸ್ಪತ್ರೆ, ಬಿ.ಎಲ್.ಗೌಡ ಲೇಔಟ್, ಚಿತ್ರದುರ್ಗ. ಪಂಪಶ್ರೀ ಆಸ್ಪತ್ರೆ, ಬಿ.ಎಲ್.ಗೌಡ ಲೇಔಟ್, ಚಿತ್ರದುರ್ಗ. ಅಕ್ಷಯ ನರ್ಸಿಂಗ್ ಹೋಂ, ಚಳ್ಳಕೆರೆ ರಸ್ತೆ, ಚಿತ್ರದುರ್ಗ. ರವಿ ನರ್ಸಿಂಗ್ ಹೋಂ, ಹೊಳಲ್ಕೆರೆ ರಸ್ತೆ, ಚಿತ್ರದುರ್ಗ ಸೇರಿದಂತೆ ಒಟ್ಟು 10 ಆಸ್ಪತ್ರೆಗಳನ್ನು ಕ್ವಾರಂಟೈನ್ ಸೌಲಭ್ಯಕ್ಕಾಗಿ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.