ಸೀಲ್ ಡೌನ್ ಪ್ರದೇಶದ ಜನರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ

ಹಾವೇರಿ: ಮೇ 05: ಕರೋನಾ ಸೋಂಕು ದೃಢಪಟ್ಟ ವ್ಯಕ್ತಿಗಳು ವಾಸಿಸುವ ಜಿಲ್ಲೆಯ ಸವಣೂರ ಪಟ್ಟಣದ ಎರಡು ಬಡಾವಣೆಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸ್ಥಳೀಯ ಜನರೊಂದಿಗೆ ಮಾತನಾಡಿ ಧೈರ್ಯದಿಂದ ಪರಿಸ್ಥಿತಿ ಎದುರಿಸಿ ಎಲ್ಲ ಸೌಕರ್ಯಗಳನ್ನು ಮಾಡಿಕೊಡಲಾಗುವುದು ಎಂದು ಆತ್ಮವಿಶ್ವಾಸ ತುಂಬಿಸಿದರು.

ಅಧಿಕಾರಿಗಳಿಗೆ ಸೂಚನೆ ನೀಡಿ ಸೀಲ್ಡೌನ್ ಪ್ರದೇಶದಲ್ಲಿ 394 ಮನೆಗಳ 1789 ಜನರುಗಳಿಗೆ ದಿನನಿತ್ಯದ ಆಹಾರದ ಕಿಟ್, ಉಚಿತವಾಗಿ ಹಾಲು, ಔಷಧಿ, ಶುದ್ಧ ಕುಡಿಯುವ ನೀರು ಒದಗಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತಿನಿತ್ಯ ಎರಡು ಬಾರಿ ಸಂಪೂರ್ಣ ಪ್ರದೇಶಕ್ಕೆ ಔಷಧಿ ಸಿಂಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿಯವರಿಗೆ ಸೂಚಿಸಿದರು. 

   ಅಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕತರ್ೆಯರಿಗೆ, ಆರೋಗ್ಯ ಕಾರ್ಯಕತರ್ೆಯರಿಗೆ ಫಿವರ್ ಕ್ಲಿನಿಕ್ನಲ್ಲಿ ಖಾಲಿ ಇರುವ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಯಿತು ಮತ್ತು ಅವರಿಗೆ ಹಾಸ್ಟೇಲ್ನ ಅಡುಗೆ ಕೋಣೆಯಿಂದ ಪ್ರತಿನಿತ್ಯ ಕರ್ತವ್ಯ ನಿರತ ಎಲ್ಲಾ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ನಂತರ ಸವಣೂರು ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ 34 ಹಾಸಿಗೆಯುಳ್ಳ ಕೊರೋನಾ ಆಸ್ಪತ್ರೆಯನ್ನು ಪ್ರವೇಶ ದ್ವಾರ ಪ್ರತ್ಯೇಕಿಸಿ, ಪ್ರಥಮ ಮಹಡಿಯಲ್ಲಿ ಸಿದ್ದಪಡಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

     ಸವಣೂರಿನ ನಗರ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕ ಓ.ಪಿ.ಡಿ. ಆರಂಭಿಸಲು ಹಾಗೂ ಸವಣೂರಿನ ನಗರದಲ್ಲಿರುವ ಹೆಚ್.ಎಲ್.ವಿ. ಶಾಲೆಯಲ್ಲಿ ತಾತ್ಕಾಲಿಕವಾಗಿ ಐ.ಪಿ.ಡಿ. ಆರಂಭಿಸಲು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. 

ಕೆ.ಎಸ್.ಆರ್.ಟಿ.ಸಿ. ಹಾವೇರಿ ವಿಭಾಗದಿಂದ ಸಂಚಾರಿ ಫಿವರ್ ಕ್ಲಿನಿಕ್ ತಯಾರಾಗಿ ಬಂದಿದ್ದು, ಅದನ್ನು ಸವಣೂರು ಸೋಂಕಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

  ಕಂಟೈನ್ಮೆಂಟ್ ಜೋನ್ ಇನ್ಸಿಡೆಂಟಲ್ ಕಮಾಂಡರ್ ಆಗಿ  ಸವಣೂರ ತಹಸೀಲ್ದಾರ್ ಅವರನ್ನು ನೇಮಿಸಿ ಆದೇಶಿಸಲಾಗಿದೆ. ಇದಲ್ಲದೆ ಸೋಂಕು ಕಾಣಿಸಿರುವ ವ್ಯಕ್ತಿಯ ಮನೆಯ ಸುತ್ತಮುತ್ತಲಿನ 300 ಮೀಟರ್ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಸೀಲ್ ಡೌನ್ ಮಾಡಲಾಗಿದೆ. ಇದಲ್ಲದೆ ಸೋಂಕಿತ ಪ್ರದೇಶದ 3 ಕಿ.ಮೀ. ವ್ಯಾಪ್ತಿಯನ್ನು ಬಫರ್ ಜೋನ್ ವ್ಯಾಪ್ತಿ ಪ್ರದೇಶವೆಂದು ಗುರುತಿಸಲಾಗಿದ್ದು, ಬ್ಯಾರಿಕೇಡಿಂಗ್ ಹಾಕಿ ಹೊರ ಪ್ರದೇಶದಿಂದ ಬರುವ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ,  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ,  ಸವಣೂರು ಸಹಾಯಕ ಆಯುಕ್ತರಾದ ಅನ್ನಪೂರ್ಣ ಮುದಕಮ್ಮನವರ , ಸವಣೂರು ತಹಶೀಲ್ದಾರ, ತಾಲ್ಲೂಕು ವೈದ್ಯಾಧಿಕಾರಿಗಳು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.