ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪಡಿತರ ವಿತರಣೆ

ಹಾವೇರಿ: ಎ. 22: ಜಿಲ್ಲೆಯಲ್ಲಿ ಆದ್ಯತಾ ಎಪಿಎಲ್ ಪಡಿತರ ಚೀಟಿ ಹಾಗೂ ಆದ್ಯತೇತರ ಬಿಪಿಎಲ್ ಪಡಿತರ ಚೀಟಿ ಕೋರಿ ಆನ್ಲೈನ್ ಮೂಲಕ ಅಜರ್ಿ ಸಲ್ಲಿಸಿದ ಫಲಾನುಭವಿಗಳು  ಪಡಿತರ ಹಂಚಿಕೆ ಮಾಡಲಾಗತ್ತದೆ. ಅರ್ಹ ಫಲಾನುಭವಿಗಳು ಎಪ್ರಿಲ್ 24ರೊಳಗಾಗಿ ಪಡಿತರ ಪಡೆಯಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಆದ್ಯತಾ ಬಿಪಿಎಲ್ ಪಡಿತರ ಚೀಟಿ ಕೋರಿ ಅಜರ್ಿ ಸಲ್ಲಿಸಿದ ಪ್ರತಿ ಅಜರ್ಿಗೆ ಉಚಿತವಾಗಿ 10 ಕೆ.ಜಿ. ಮತ್ತು ಹಾಗೂ ಆದ್ಯತೇತರ ಎಪಿಎಲ್ ಪಡಿತರ ಚೀಟಿ ಕೋರಿ ಅಜರ್ಿ ಸಲ್ಲಿಸಿದ ಪ್ರತಿ ಏಕ ಸದಸ್ಯ ಅಜರ್ಿಗೆ ಐದು ಕೆ.ಜಿ ಹಾಗೂ ಎರಡು ಮತ್ತು ಎರಡಟಕ್ಕಿಂತ ಹೆಚ್ಚು ಸದಸ್ಯರಿರುವ  ಪ್ರತಿ  ಅಜರ್ಿಗೆ 10 ಕೆ.ಜಿ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ 15 ರೂ.ಗಳನ್ನು ವಿತರಣೆ ಮಾಡಲಾಗುತ್ತದೆ.

   ಅಜರ್ಿ ಸಲ್ಲಿಸಿದ ಫಲಾನುಭವಿಗಳು ಪಡಿತರ ಪಡೆಯಲು ತಾವು ಸಲ್ಲಿಸಿದ ಅಜರ್ಿಯ ಪ್ರತಿ(ಸ್ವೀಕೃತಿ)ಯೊಂದಿಗೆ ಮತ್ತು ಆಧಾರ್ ಕಾಡರ್್ ಮತ್ತು ಮೊಬೈಲ್ನೊಂದಿಗೆ ನ್ಯಾಯಬೆಲೆ ಅಂಗಡಿಗಳಿಗೆ ಹೋಗಬೇಕು.  ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ಕಾಡರ್್  ದೃಢೀಕರಣದೊಂದಿಗೆ ಅಜರ್ಿದಾರರ ಮೊಬೈಲ್ಗೆ ಬರುವ ಓಟಿಪಿ(ಆನ್ ಲೈನ್ ಪಾಸ್ವಡರ್್) ದಾಖಲಿಸಿ ಪಡಿತರ ಧಾನ್ಯಗಳನ್ನು ವಿತರಿಸಲಾಗುತ್ತದೆ.

ಜಿಲ್ಲೆಯ ಪಡಿತರ ಚೀಟಿದಾರರಿಗೆ ಎಪ್ರಿಲ್ ಮಾಹೆಯಲ್ಲಿ ಹಾಲಿ ಚಾಲ್ತಿಯಲ್ಲಿರುವ ಅಂತ್ಯೋಯ ಅನ್ನ ಯೋಜನೆಯ ಪ್ರತಿ   ಪಡಿತರ ಚೀಟಿಗೆ ಪ್ರತಿ ಮಾಹೆ 35 ಕೆ.ಜಿ.ಯಂತೆ  ಎಪ್ರಿಲ್ ಮತ್ತು ಮೇ  ಎರಡು ತಿಂಗಳ 70 ಕೆಜಿ.ಅಕ್ಕಿ ಹಾಗೂ ಆದ್ಯತಾ ಎಪಿಎಲ್ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ (ಯುನಿಟ್) ಪ್ರತಿ ಮಹೆ ಐದು ಕೆ.ಜಿಯಂತೆ ಎಪ್ರಿಲ್ ಮತ್ತು ಮೇ ಮಾಹೆ ಎರಡು ತಿಂಗಳ 10 ಕೆ.ಜಿ. ಅಕ್ಕಿ ಹಾಗೂ  ಪ್ರತಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ ಎರಡು ಕೆ.ಜಿ.ಗೋದಿಯಂತೆ  ಎರಡು ತಿಂಗಳ ನಾಲ್ಕು ಕೆ.ಜಿ.ಗೋಧಿಯನ್ನು ಉಚಿತವಾಗಿ ಪಡೆಯಲು ಸೂಚಿಸಲಾಗಿದೆ. ಸದರಿ ಪಡಿತರ ಚೀಟಿದಾರರು ನ್ಯಾಯ ಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯಲು ಬಾಕಿ ಉಳಿದಲ್ಲಿ ಅಂತಹ ಪಡಿತರ ಚೀಟಿದಾರರು ಇದೇ ಎ. 24ರೊಳಗಾಗಿ ಪಡಿತರ ಧಾನ್ಯ ಪಡೆಯಲು ತಿಳಿಸಿದ್ದಾರೆ.