ಜಿಲ್ಲೆಯಲ್ಲಿ 4022 ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ

ವಿಜಯಪುರ ಮೇ.27 : ಕೋವಿಡ್-19  ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಅಪೌಷ್ಠಿಕ ಮಕ್ಕಳು ಹಾಗೂ ಗಡಿಭಾಗದ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 4022 ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ವಿತರಣೆ ಮಾಡಿ ಪೌಷ್ಠಿಕತೆಯನ್ನು ಹೆಚ್ಚಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಅಪೌಷ್ಠಿಕ ಮಕ್ಕಳಿಗೆ ಸಿದ್ಧ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಮಾಡಿ ಮಾತನಾಡಿದ ಅವರು ವಿಜಯಪುರ ಸೇರಿದಂತೆ ಬೆಳಗಾವಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸುಮಾರು 1.50 ಕೋಟಿ ರೂಪಾಯಿಗಳಲ್ಲಿ ಅಗ್ರೋ ಕಾಪ್ ಸಂಸ್ಥೆಯ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿದ್ಧ ಆಹಾರವನ್ನು ವಿತರಿಲಾಗುತ್ತಿದೆ ಎಂದು ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ವಿಪರೀತ ಕಡಿಮೆ ತೂಕ ಹೊಂದಿರುವ 3820 ಮಕ್ಕಳು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಸುಮಾರು 202 ಮಕ್ಕಳು ಸೇರಿದಂತೆ ಗಡಿಭಾಗದ ಮಕ್ಕಳಿಗೆ 30 ಪ್ಯಾಕ್ಗಳುಳ್ಳ 4022 ಮಕ್ಕಳಿಗೆ 1 ಲಕ್ಷ 42 ಸಾವಿರ ಸ್ಯಾಚೆಟ್ಗಳನ್ನು ಮನೆಮನೆಗೆ ತೆರಳಿ ನೀಡುವ ಕಾರ್ಯ ಪ್ರಾರಂಭವಾಗಿದ್ದು, 30 ದಿನಗಳ ಕಾಲ ಸೇವನೆಯ ನಂತರ ಮಕ್ಕಳಲ್ಲಿ ಪೌಷ್ಠಿಕತೆ ವೃದ್ಧಿಯಾದ ಬಗ್ಗೆ ಆಶಾ ಕಾರ್ಯಕತರ್ೆಯರು ಹಾಗೂ ಅಂಗನವಾಡಿ ಕಾರ್ಯಕತರ್ೆಯರಿಂದ ವರದಿಯನ್ನು ಪಡೆದುಕೊಳ್ಳಲಾಗುವುದು. ಪೌಷ್ಠಿಕತೆ ವೃದ್ಧಿಯಾಗಿದ್ದು ಕಂಡುಬಂದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಸ್ತರಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

  ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 30 ಸ್ಯಾಚೆಟ್ಗಳ ಒಂದು ಕಿಟ್ ನೀಡಲಾಗುತ್ತಿದ್ದು, 1 ಸ್ಯಾಚೆಟ್ ಪ್ಯಾಕ್ ತೆರೆದ ನಂತರ 24 ಗಂಟೆಯೊಳಗಾಗಿ ಸೇವಿಸಲು ನೀಡಬೇಕು. ನೀಡಲಾಗುತ್ತಿರುವ ಆಹಾರ ಸಿಹಿಯಾಗಿರುವುದರಿಂದ ಮಕ್ಕಳು ಸೇವಿಸಲಿದ್ದು, ಆರೋಗ್ಯದಲ್ಲಿ ಉತ್ತಮ ಬೆಳವಣಿಗೆಯಾಗಲಿದೆ ಎಂದರು.

  ಕೋವಿಡ್-19 ಸಂದರ್ಭ ಇರುವ ಹಿನ್ನೆಲೆಯಲ್ಲಿ ಅಂಗನವಾಡಿಗಳನ್ನು ಮುಚ್ಚಲಾಗಿದ್ದು, ಅಂಗನವಾಡಿಯಲ್ಲಿ ದಾಖಲಾತಿ ಪಡೆದಿರುವ ಮಕ್ಕಳಿಗೆ ಅಂಗನವಾಡಿ ಸಹಾಯಕಿಯನ್ನು ಬಳಸಿಕೊಂಡು ಮನೆಮನೆಗೆ ತೆರಳಿ ರೇಶನ್ ನೀಡಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸಕರ್ಾರಗಳಿಂದ ಉತ್ತಮ ಪ್ಯಾಕೆಜ್ ಘೋಷಣೆ ಆಗಿರುವ ಕಾರಣ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.

 ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಭಯಪಡದೆ ಕೊರೋನಾ ಜೊತೆಗೆ ಬದುಕುವುದನ್ನು ಕಲಿಯಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್, ಸ್ಯಾನಿಟೈಜರ್ ಹಾಗೂ ಭಾರತೀಯ ಆಹಾರ ಪದ್ಥತಿಯನ್ನು ಬಳಕೆ ಮಾಡಿಕೊಂಡು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ಕೋವಿಡ್-19 ನಂತಹ ಮಹಾಮಾರಿಯನ್ನು ನಾಶಮಾಡಲು ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಎಸ್ಪಿ ಅನುಪಮ್ ಅಗರವಾಲ್, ಜಿ.ಪಂ ಸಿಇಒ ಗೋವಿಂದ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎಸ್.ಆರ್ ಆಲಗೂರ, ಆಗ್ರೋ ಕಾಪ್ ಸಂಸ್ಥೆಯ ಸಿದ್ಧಾರ್ಥ.ಬಿ, ಉದ್ಯಮಿ ಸಂದೇಶ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ ಸುರಪುರ ಸೇರಿದಂತೆ ಇತರರಿದ್ದರು.